ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೨ ಅರಮನೆ ಸಿವ ಸಿವಾ.. ಅಂಥವರ ತಲೆಗಳನ್ನಣಕೆ ಮಾಡಿದರ ನೂರಾರು ಮಂದಿಯಾಗುತ್ತಾರೆ.. ಹುಟ್ಟಿನ ಪಲ್ಲಕ್ಕಿಯನೊಲ್ಲೆ ಯಂದು ವಸ್ತಿ ಅಂದುದಕ್ಕೆ ಭಕುತಾದಿ ಮಂದಿಯು ತಾಯಿ ನೀನು ಯದರಾಗ ಕುಂಡ್ಲುತೀ ಅಂಬುದನ ಬಾಯಿಬಿಟ್ಟು ಹೇಳವ್ವಾ ಯಂದು ಅಂಗಲಾಚಿ ದುದಕ್ಕೆ ಸಾಂಬವಿಯು ವಸ್ತಿ ದ್ವಾರಾ ಬಗಸಿದ್ದೇನೆಂದರೆ... ಸಿವ ಸಂಕರ ಮಾದೇವಾss... ಬ್ಯಾಡ ತಾಯಿ ಅವರಿವರು ಕುಂತು ಅದು ಯಂಜಲೆಲೆ ಆಗಯ್ತಿ.. ಜಗದಂಬೆಯಾದ ನೀನು ಅದರ ಮ್ಯಾಲ ಆರೂಢಳಾಗುವುದೆಂದರೇನು? ಯಂದು ಪರಿಪರಿಯಿಂದ, ಅದು ಅದೇ ಬೇಕೆಂದು ಹಠ ಹಿಡಿದ ಪರಿಣಾಮವಾಗಿ.... ಸಾವುರಾರು ಸಂಖೇಲಿದ್ದ ಮಂದಿ ವುಫ್ ವುಘ ಅಂತ ನಿನಾದವ ಮಾಡಿತು. ಯಾರ ಬಾಯನ ತರೆದು ನೋಡಿದರೂ ತಾಯಿ ಸಿಮ್ಯಾಸನ ಬಗಸ್ಯಾಳ ಯಂಬುವ ಮಾತು! ಅತ್ತ ಸಮಸ್ತ ಅಗ್ರಹಾರಗಳಿಗೊಡೆಯರೆಂದು ಯೇಕಗ್ರೀವವಾಗಿ ಚುನಾಯಿತಗೊಂಡಿದ್ದ ಯೇದಾಂತಿ ರಣ ಮಾಂಡವ್ಯಮಾಚಾರರು ಸಭೆಯಲ್ಲಿ ಭಾಗವಹಿಸಿದ್ದ ಕರಠರನ್ನುದ್ದೇಶಿ “ನೋಡಿರಯ್ಯಾ ನೋಡಿರಿ.. ಕುಂಪಣಿ ಸರಕಾರದಿಂದ ಹಿಂದೂ ಧರ್ಮಕ್ಕೆ ಅಳಿಗಾಲ ಸಮೀಪಿಸಯ್ಯ.. ಪ್ರತಿಭಟಿಸಬೇಕು... ಯಿಲ್ಲಾ ಮಡಿದು ವಯಕುಂಠವಾಸಿ ಗಳಾಗಬೇಕಿರುವುದು” ಯಂದು ಕರೆ ನೀಡಿದೊಡನ ಸಭೆಯು ವಯಕುಂಠ ವಾಸಿಯಾಗುವುದೇ ಯಂದು ಮರು ಜವಾಬು ನೀಡಿತು. ಆತುಮವನ್ನು ಸೊಯಂ ಹತ್ಯೆಗಯ್ಯುವುದರಿಂದ ಯಷ್ಟು ಪಾಪ ಪ್ರಾಪ್ತಿಯಾಗುವುದೋ ಆತುಮವನ್ನು ಆಹುತಿ ಮಾಡುವುದರಿಂದಲೂ ಅಷ್ಟೇ ಪಾಪ ಪ್ರಾಪ್ತಿಯಾಗುವುದು. ವಂದನ್ನು ಬದುಕಲು ಹೆದರುವ ಹೇಡಿಗಳು ಮಾಡಿದರ, ಯಿನ್ನೊಂದನ್ನು ಪಲಾಯನವಾದಿಗಳು ಮಾಡುವರು. ಆದ್ದರಿಂದ ವೆರಡೂ ಸಲ್ಲದು. ಆದ್ದರಿಂದ ಮೊದಲು ತಮ್ಮ ತಮ್ಮ ಅಗ್ರಹಾರಗಳೊಳಗೆ ತಲೆಯತ್ತುತಲಿರುವ ಪಾಪಿಷವೂ, ನರಕಸದ್ರುಶಮೂಆದ ಯಿಂಗ್ಲೀಷು ಭಾಷೆಯ ಕತ್ತು ಹಿಡಿದು ಹೊರ ತಳ್ಳುವ ಕಾವ್ಯವನ್ನು ವಗ್ಗಟ್ಟಿನಿಂದ ಮಾಡುವುದು, ತಮ ತಮ್ಮ ಅಗ್ರಹಾರದ ವಟುಗಳು ಹ್ಯಾಟು ಸೂಟು ಬೂಟುಗಳಿಗೆ ಮರುಳಾಗದಂತೆ ಯಚ್ಚರವಹಿಸುವುದು, ಯೇ ಪ್ರಯತ್ನವು ಫಲಕಾರಿಯಾಗದಿದ್ದ ಪಕ್ಷದಲ್ಲಿ