ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯ ಅರಮನೆ ರಾಜಾರೋಷವಾಗಿ ನಡೆಯಲಾರಂಭಿಸಿತು. ಸೊಯಂ ಸೇವಕರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿತು. ಹಿಂದೂ ಧಮ್ಮ ರಕ್ಷಣೆ ಕೇವಲ ಬಾಯಿಮಾತಿನಲ್ಲಿದ್ದರೆ ಸಾಲದೆಂದು ಭಾವಿಸಿ, ಸೊಯಂ ಸೇವಕರು ಸಮಯ ಬಂದಲ್ಲಿ ಶಸ್ತ್ರಗಳನ್ನು ಹಿಡಿದು ಪ್ರಯೋಗಿಸು ವಂತಾಗಬೇಕೆಂದು ಕರೆ ಕೊಟ್ಟರು. ಅದರ ಪರಿಣಾಮವಾಗಿ ಸೋಯಂ ಸೇವಕರಿಗೆ ಅಂಗ ಸಾಧನೆ, ಕವಾಯತು, ಯಾವ ಶಸ್ತ್ರವನ್ನು ಯಾರ ಮ್ಯಾಲ, ಯಾವ ರೀತಿ ಪ್ರಯೋಗಿಸಬೇಕು ಯಂದು ಕಲಿಸಲಾರಂಭಿಸಿದರು.. ವಂದೊಂದು ಅಗ್ರಹಾರದಲ್ಲಿ ಯೂ ಪ್ರಕಾರವಾಗಿ ಹೆಚ್ಚಿದ ಸೊಯಂಸೇವಕರು ತಮ್ಮ ತಮ್ಮ ಅಗ್ರಹಾರಗಳಿಂದ ಹ್ಯಾಟು, ಸೂಟು, ಬೂಟಿನ ಅಂಗಡಿಗಳನ್ನು, ಯಿಂಗ್ಲೀಷು ಶಿಕ್ಷಣ ಪ್ರಚಾರಕರನ್ನು, ದಟ್ಟು, ದಿಸ್ಸು ಯಂದು ಹೇಳಿಕೊಡಲಕ ಯಂದು ಯಿದ್ದಂಥ ಶಿಕ್ಷಕರನ್ನು ಬಲವಂತವಾಗಿ ಗದುಮಲಾರಂಭಿಸಿದರು. ಯಿಷ್ಟು ಸಾಲದೆಂಬಂತೆ ಕುಂಪಣಿ ಸರಕಾರದ ಅಧಿಕಾರಿಗಳು, ನವುಕರರು ತಮ್ಮ ಅಗ್ರಹಾರದೊಳಗೆ ಸುಳಿಯದಂತೆ ಯಚ್ಚರವಹಿಸಿದರು. ಅನೇಕ ಕಡೆ ಸೊಯಂಸೇವಕರ ಲತ್ತೆ ಸೇವೆಯಿಂದ ಅಂಗ ಹೀನಗೊಂಡ ಆಂಗ್ಲರು ತೆವಳುತ್ತ ಹೋಗಿ ತಮ್ಮ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದುಂಟು. ಆ ಮೇಲಾಧಿಕಾರಿಗಳು ಖುದ್ದ ಹೋಗಿ ಥಾಮಸು ಮನೋ ಸಾಹೇಬನೆದುರು ಅಗ್ರಹಾರಗಳ ಸೊಯಂ ಸೇವಕರು ಕ್ಷಾತ್ರತೇಜದಿಂದ ಮಿನುಗುತಲಿರುವರು ಯಂದು ಯಿವರಿಸಿದ್ದುಂಟು. ಆಗ ನಮ್ಮ ಕಲೆಟ್ಟರ ಸಾಹೇಬನು, ತನ್ನ ಸರಕಾರದಲ್ಲಿ ಧರಯಿಭಾಗದಲ್ಲಿ ಕಾರ ನಿಗ್ಟಹಿಸುತಲಿದ್ದ ಪಂಡಿತ, ಯದ್ವಾಂಸರನ್ನು ತನ್ನ ಸಮಕ್ಷಮ ಕೂಡ್ರಿಸಿಕೊಂಡು ಬ್ರಹ್ಮಹತ್ಯೆ ಮತ್ತು ಸಂಭವಾಮಿ ಯುಗೇ ಯುಗೇ ಯೋ ಯರಡು ವಿಷಯಗಳ ಕುರಿತು ಸುದೀರ ಚಕ್ಷೆ ನಡೆಸಿದನೆಂಬಲ್ಲಿಗೆ ಸಿವಸಂಕರ ಮಾದೇವಾ.. ಅತ್ತ ಹರಪನಹಳ್ಳಿಯೊಳಗ ಪ್ರಧಾನ ಕಾರಖನ ಹಂಪರಸಪ್ಪಯ್ಯನು ಸ್ಕೂವರನಿಗೆಂದೇ ಬಂದಿದ್ದ ಯಚ್ಚರಿಕೆ ಪತ್ರವನ್ನು ಗುಟ್ಟಾಗಿ ಯದೆಯೊಳಗೆ ಯಿಟ್ಟುಕೊಂಡಿದ್ದನಷ್ಟೆ. ಬ್ರಹ್ಮಹತ್ಯೆಯ ಭಯದಿಂದಾಗಿ ಯಿದ್ರೋಹಿ ಗವುಡನ ಕಡೆಯವರು ತನ್ನನ್ನು ಕೊಲ್ಲಲಾರರೆಂದೂ, ಸ್ಕೂವರನ ಮ್ಯಾಲ ಹಲ್ಲೆಯಾಗಲೀ, ಹತ್ಯೆಯಾಗಲೀ ನಡೆಯಭೌದೆಂದೂ, ಪತ್ನಿಯ ಸ್ಥಾನದಲ್ಲಿರುವ ನೀನು ಯದೆಗುಂದ ಬಾರದೆಂದೂ,ಹೇಳುವುದ ಹೇಳಿ ಯೀ ಸಂಗತಿಯನ್ನು ಗುಟ್ಟಾಗಿ ಯಿಡಲೇಬೇಕೆಂದೂ ತನ್ನ ಧಮ್ಮ ಪತ್ನಿಗೆ ತಾಕೀತು ಮಾಡಿದ್ದನಷ್ಟೆ, ಆದರೆ ಆ