ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೦೧ ಡೊಕ್ಕಲೋರು, ಕೊರಚೋರು, ತಿರುಪೇರು, ಬಲ್ಲವರು, ಬಲ್ಲಿದರು ಯಿವರೇ ಮೊದಲಾದ ಯೇಳುನೂರಾಯಪ್ಪತ್ತೇಳು ಪಂಗ ಪಂಗಡವರು ಅತ್ತಿತ್ತ ಹೋಗುತ್ತಲೇ ಹತ್ತಾಗಿ, ಅತ್ತತ್ತ ಹೋಗುತ್ತಲೇ ನೂರಾಗಿ, ಅತ್ತತ್ತ ಹೋಗುತ್ತಲೇ ಸಾವುರ ಸಾವುರವಾಗಿ ನೆರೆ ಬಂದ ನದಿ ಹಾಂಗ ಹರಕೋತ ಹರಕೋತ ಹೋಗಿ ಅರಮನೆಯನ್ನು ಅಪ್ಪಳಿಸಿದರು.. ಮುಚ್ಚಿದ್ದ ಬಾಗಿಲುಗಳನು ಬಡಿಯ ತೊಡಗಿದರು.. ಗೋಡೆಗಳಿಗೆ ತಮ್ಮ ತಮ್ಮ ತಲೆಗಳಿಂದ ಡಿಕ್ಕಿ ಹೊಡೆಯುತ್ತ ಧಡ್ ಡಡಾಲ್ ಯಂಬ ಸದ್ದು ಶ್ರುಷ್ಟಿಸತೊಡಗಿದರು.. ಯಾರದೀರಾ ವಳಾಗೆ ಯಂದು ಕಂಡುಗ ಗ್ರಾನದ ಬುಕ್ಕು, ಕಾಲಗ್ರಾನದ ಬುಕ್ಕು ಹಾರೊಡೆಧಂಗ ಕೂಗುತಾರ.. ಆ ಅವರ ಕೂಗು ಪ್ರವಾಹದೋಪಾದಿಯಲ್ಲಿ ಹರಕೋತ ಹರಕೋತ ವಳ ಹೋಗಿ ರಾಜಪರಿವಾರದ ಮಂದೀಯ ಮೊಖದ ನಂದಾದೀವಿಗೇನ ನಂದಿಸಿತು.. ಆವಾಗ್ಗೆ ಪಟ್ಟೆ ಮಂಚದ ಮ್ಯಾಲಿದೋರು, ದಂಡು ದವಲತ್ತಿನ ನೆನಪಿನ ಬುತ್ತಿ ಬಿಚ್ಚಿ ವುಂಬುತಲಿದ್ದೋರು, ಕಿರೀಟ ಟಾಂಕು ಟೀ೦ಕಿನ ಕಣ ಸು ಕಾಂಬುತಲಿದರು ಬಚ್ಚಲಲ್ಲಿ ದೊರು, ಪಾಕಶಾಲೆಯಲ್ಲಿದ್ದೋರು, ಬಿಕೋ ಅಂಬುತಲಿದ್ದ ಅಂಗಯ್ಯ, ಮುಂಗಯ್ಯ ನಡು ಕುತ್ತಿಗೆ ಕಿವಿ ಮೂಖ ನೋಡು ನೋಡುತ ನಿಟ್ಟುಸಿರುಬಿಡುತಲಿದ್ದೋರು ಯಿಪ್ಪತ್ತು ಮಾರಗಲುದ್ದದ ಕೂಗು ಕೇಳಿಸಿಕೊಂಡು ಯಿದೇನಿದು ಕುಂಪಣಿಯ ಯಡ್ಡವರು ಸಾಹೇಬನ ದಂಡು ದವಲತ್ತು ತಮ್ಮರಮನೆಗೆ ಮುತ್ತಿಗೆ ಹಾಕಿದಂಗಯ್ತಲ್ಲಾ ಯಂದಳ್ಳೋದರೊಂದರಗಳಿಗೆ.. ಯ್ಯಾಳೋಕ್ಕೆ ಮುಟ್ಟು ನಿಂತು ಮುವ್ವತ್ತಾರು ವರುಷವಾಗಿದ್ದ ರಾಜಮಾತೆ ಭದ್ರಮಾಂಬೆಯು ಬಚ್ಚಲಲ್ಲಿದ್ದ ಮೂರು ಚೆಂಬು ನೀರೆರಕೊಂಡು ಪೆದ್ರೋಬಯ್ಯನಾಯಕ ಪಟ್ಟಯೇರುವಾಗ್ಗೆ, ಕೊಡಿಸಿದ್ದಂಥಾ ಮೊಣಕಾಲೂರು ಜಾಡರ ಜಾನಯ್ಯ ನೇತಂಥಾ ಹದಿನೆಂಟು ಮೊಳದುದ್ದದ ಸೀರೆಯನ್ನು ಮಯ್ದೆ ಸುತ್ತಿಕೊಂಡು, ಯಿಲಕಲ್ಲು ಕುಬುಸ ತೊಟ್ಟುಕೊಂಡು, ಹರೇದಾಕಿ ಮಾಡುವಂಗ ಮಾಡುತಾಳಲ್ಲಾಂತ ಅವರಿವರು ಅಂದು ಆಡಿಕೊಳ್ಳಬೌದೇ ಯಂದು ಯೋಚಿಸುತ್ತಿರುವಾಗ್ಗೆ ಆ ಕೂಗು ಕಿವಿಗೆ ಬಿದ್ದು ಭಕುತಾದಿ ಮಂದಿಯು ತನ್ನನ್ನು ಸಾಂಬವಿಗೆ ಸರಿಸಮನಾಗಿ ಕುಂಡ್ರಿಸಿ ಹೊಳೆಗೆ ಹೊಂದಿಸಲಕೆಂದು ಬಂದಿರ ಬೌದೆಂದು ಭಾವಿಸಿ ತಂಗಲಗೂದಲ ತಲೆಯೊಡನೆ ತಲಬಾಗಿಲಿಗೆ ಬಂದು ಛತ್ರಿಯಲ್ಲಯ್ತಂತ, ಚಾಮರ ಯಲ್ಲಯ್ತಂತ, ಮುತ್ತಿನ ಛಡಾವು ಯಲ್ಲಯ್ತಂತ,