ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧೦ ಅರಮನೆ ಅಜ್ಜನೋಬವ್ವ ಅವ್ವ ಯೋಗ ದಯಮಾಡ್ಯಾಳು.. ಆಗ ದಯಮಾಡ್ಯಾಳು, ಅಂತ ಯೇಟೋ ಹೊತ್ತಿನಿಂದ ಕಾದೂ ಕಾದೂ ತೂಕಡಿಸುತಲಿದ್ದಾಗ... ಅವ್ವ ಗಕ್ಕಂತ ನಿಂತುಬಿಟ್ಟಳು ಹಿಂದಕ ಸರಿಯದೆ, ಮುಂದಕೂ ಸರಿಯದೆ.. ಗಂಟಲಯ್ಯ ಅಹಹಹಾ..... ಯಂದು ವಂದರ ಮ್ಯಾಲೊಂದರಂತೆ ಖಡುಗ ಹೇಳಿದರೂ, ಪಾಲಮುಲಯ್ಯ ವಂದರ ಮಾಲ ವಂದರಂತೆ ಪರಾಕು ಹೇಳಿದರೂ ಅವ್ವ ವಂದೇ ವಂದು ಹೆಚ್ಚೇನ ಕಿತ್ತು ಮುಂದಕ ಯಿಡದೆ ಹೈ.. ಪ್ಲಾ.. ಅಂತ ಯಡಕೂ, ಹೈು.. ಹೂ ಅಂತ ಬಲಕೂ ವಾಲಾಡತೊಡಗಿದಳು. ಬಡಪಾಪಯ್ಯರೇ ಮೊದಲಾದ ಪುವುi °ಲ ಸಾಮ್ರಾಜ್ಯದಾಸ್ಥಾನ ಯಿಖ್ಯಾತ ಜಗಜಟ್ಟಿಗಳು ಯಷ್ಟು ತಿಣುಕಿದರೂ ತಾಯಿಯಿದ್ದ ಸಿಮ್ಮಾಸನವು ವಂಚೂರಾರ ಜರಗದಾಗಲು ವಬೊಬ್ಬರು ವಂದೊಂದು ಯಿಧದ ಸನ ಮಾಡಲಾರಂಭಿಸಿದರು. ಯಮೋ ಯಮೋss ಯಂದು ಗಗ್ಗರಿಸತೊಡಗಿದರು. ಯಾಕ ಮುಂಡಿ ತಾಯೇ ಯಂದಂಗಲಾಚಲಾರಂಭಿಸಿದರು. ತಾಯಿ ಸುಮ ಸುಮಕ ನಿಲ್ಲುವಾಕೆಂಗಲ್ಲ, ತನ್ನ ಮನಸ್ಸಿನೊಳಗ ಯೇನೋ ಲೆಕ್ಕಾಚಾರ ನಡೆಸಿದ್ದಂಗಯ್ತಿ.. ಅದು ಯಿದಿರಬವುದಾ? ಅದು ಯಿರಬವುದಾ..? ಹರಕೆ ಮುಕ್ಕೊಂಡೋರು ಯಲ್ಲವೀರವ್ವಾ. ಮುಡುಪು ಬೇಡಿಕೊಂಡೋರು ಯಲ್ಲವೀರಪ್ಪಾ.. ಮನಸಿನಾಗ ನಗಾಡಿಕೊಂಡೋರೆ.. ಕಣಸಿನಾಗ ನಗಾಡಿಕೊಂಡರೆ ಬಿರನೇ ಬರವ್ವಾ.. ತಾಯಿಗರುಪಣ ಮಾಡಿರಪ್ಪಾ.. ಬಾಯಿಯಿಂದ ಕಿವಿಗೆ, ಕಿಯಿಯಿಂದ ಬಾಯಿಗೆ ಪಿಸುಮಾತು ಹಬ್ಬುತಬ್ಬುತ ಹೋತು. ನೀನಿರಬವುದೇ? ನೀನಿರಬವುದೇ ಅಂತ ಅವರಿವರ ಮುಖಮಾರೀನ ನೋಡುತಿರುವಾಗ್ಗೆ, ಸಾಸುವೆಕಾಳು ಬಿದ್ದರೂ ಸಬುಧ ಆಗುವಷ್ಟು ಮವುನ ಅಮರಿರುವಾಗ್ಗೆ, ಅಂಥ ವಬ್ಬೊಬ್ಬರೂ ವುರುಳುತುರುಳುತ ಬಂದು ತಾಯಿ ಪಾದದ ಮುಂದ ದುಕುದುಕ್ಕಿಸುತ ಹೊರಳಾಡುತಿರುವಾಗ್ಗೆ ತಮದದು ಹೋತು, ತಮಗಿದು ಹೋತು ಯಂದು ತಮ್ಮ ತಮ್ಮ ಸರೀರಗಳಲ್ಲಾದ ಲುಕ್ಷಾಣು ಕುರಿತು ಆಡ್ಯಾಡಿಕೋತ ಅಳುತಿರುವಾಗ್ಗೆ, ಸೀರೆ ವುಟುಕೊಂಡಿರುವಾಗ್ಗೆ, ಬಳೆ ತೊಟುಕೊಂಡಿರುವಾಗ್ಗೆ, ಕುಂಕುಮ ಭಂಡಾರದ ರಾಶಿಂರನ್ನು ತೂರಾಡುತಿರುವಾಗ್ಗೆ, ತಮ್ಮ ತಮ್ಮ ಮೂಗಿಗೆ ಪೋಣಿಸಿಕೊಳ್ಳಲಕೆಂದು