ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨C ಅರಮನೆ ವಳಗೊಳ್ಳುತ, ತನ್ನ ದುತ್ವದ ವಂದನುಸವನ್ನು ಜನಸಾಗರಕ್ಕೆ ಧಾರೆಯರೆಂಬೂತ ವಂದೊಂದು ಬಯಲನ್ನು ಪ್ರವೇಶ ಮಾಡೂತ, ವಂದೊಂದು ಹುಬ್ಬಿನ ಮಂಟಪದಲ್ಲಿ ಯಿರಾಜಮಾನಳಾಗ್ತ, ಪವಾಡ ತೋರೂತ, ಮಯ್ಕೆ ಮೆರೆಯೂತ, ಆಸ್ತೀಕ ಭಾವ ತುಂಬೂತ.. - ಅಲ್ಲಲ್ಲಿಗೆ ವಂದೊಂದು ಪಲ್ಲಾಂಗು ದೂರದಲ್ಲಿದ್ದ ಹೊಳೆಯಂಬ ಜಲಧಿಯ ಯದೆ ದಸಕ್ಕಂತು. ಅದರ ಪೂರುವಿಕ ನಾಮವು ಹೊನ್ನವನ ಹೊಳೆ ಯಂದಿತ್ತು. ಜನ ಬಳಕೆಯ ನಾಮವು ಕಡದಮ್ಮಯಂಬುದಾಗಿತ್ತು. ಅದರ ಮೂಲ ಯಿಂಥಾದ್ದೇ ಯಂದು ತಿಳಿದವರಿಲ್ಲ. ಅದರ ಮಯ್ಯ ಅರಿತವರಿಲ್ಲ. ಅದರ ಮೂಲ ಹುಡುಕುತ ಹೋಗಿ ತಮ್ಮನ್ನು ತಾವು ಕಳಕೊಂಡವರುಂಟು.. ತಿಕಮಕರಾದವರುಂಟು.. ಅದು ಜಲುಮ ತಳೆದಿರುವುದು ಕುರುಗುಡ್ಡದಲ್ಲಿ ಯಂದು ಕೆಲವರೂ, ಯೇಕಾಸುರಿ ಗುಡ್ಡಯಂದು ಕೆಲವರೂ, ಕೋಳಿಗುಡ್ಡವೇ ಸರಿ ಅಂತ ಕೆಲವರೂ, ಆ ನಾಲಕೂ ಗುಡ್ಡಗಳು ಪರಸ್ಪರ ಕಲೆಯುವಲ್ಲಿ ವಂದಲ್ಲಾ ಎಂದು ಜಲಪಾತಗಳುಂಟು, ವಂದಲ್ಲಾ ಎಂದು ಚಿಲುಮೆಗಳುಂಟು ಯಂದು ಕೆಲವರೂ, ಆದರಾವುದನ್ನೂ ನಿಶ್ಚಿಷ್ಟವಾಗಿ ಪತ್ತೆಹಚ್ಚಿದವರಿಲ್ಲ. ಅದಕ ಸಂಬಂಧಿಸಿದಂತೆ ಹತ್ತಾರು ಪವುರಾಣಿಕ ಕಥೆಗಳದಾವ.. ನೂರಾರು ದಂತಕಥೆಗಳಾದವ.. ಅವನ್ನೆಲ್ಲ ಹೇಳಲಕಾಗಲೀ, ಕೇಳಲಕಾಗಲೀ ದೂರುವಜನುಮದ ಸುಕ್ರುತವು ಬೇಕು.. ಆದರ ಅನಾದಿ ಕಾಲದಿಂದ ತನ್ನ ಪಾಡಿಗೆ ತಾನು ಹರಿಯುತ್ತಿದ್ದಾಳಲ್ಲಾ ಎಂದು ಪಟ್ಟಣದ ನಿರುಮಾಣಕ್ಕೆ ಕಾರಣಕರಳಾಗಿರುವಳಲ್ಲಾ, ಸಚರಾಚರದ ತುಷ ತೀರಿಸುತ್ತಿರುವಳಲ್ಲಾ, ಪ್ರತಿಯೊಂದು ಯುದ್ಧ ಸಂಭವಿಸಿದಾಗಲೂ ಸಸ್ತರಾಸ್ತರಗಳಿಗೆ ತಗುಲಿದ ನೆತ್ತರಕಲೆಗಳನ್ನು ತೊಳೆದಿರುವಳಲ್ಲಾ.. ನರಹುಳುಗಳ ಪಾಪ ಮುಟ್ಟು ಮಯ್ಲಿಗೆ ಸೂತಕ ಕಳೆದಿರುವಳಲ್ಲಾ, ಅದೇ ಆ ಗಂಗಮ್ಮ ತಾಯಿಯ ಪುಣ್ಯ ಮಿಶೇಷವು.. ಸದರಿ ಪಟ್ಟಣದ ಸವುಭಾಗ್ಯವು. ಆಕೆಯಷ್ಟು ನಾಚುವ, ಅಂಜುವ, ಹೆಜ್ಜೆ ಹೆಜ್ಜೆಗೆ ಮುದುಡಿಹೋಗುವ ಹೆಂಗಸು ನದೀ ಕುಲದೊಳಗ ಯಿನ್ನೊಬ್ಬರು ಯಿರಲಾರರು.. ಆ ಕಡೆಯಿಂದ, ಯೀ ಕಡೆಯಿಂದ, ಮುಂದೇಸಿಂದ, ಹಿಂದೇಸಿಂದ, ನಾಕಾರು ಮೋಣಿಯ ಹೆಣುಮಕ್ಕಳು ಬಟ್ಟೆ ವಗೆಯಲಕಂತ, ದೊಡ್ಡಿ ಮಾಡಲಕಂತ ಬಂದು ಯಾವ ಪ್ರಕಾರವಾಗಿ ವಂದು ಕಡೇಕ ಸೇರುವರೋ ಆ ಪ್ರಕಾರವಾಗಿ ಪರಗುಣವಾಗಿ