ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಅದನು ಕೇಳಿ ರಾಜಕುಮಾರನು ವಂದೊಂದು ದಿಕ್ಕಿನಿಂದ ವಂದೊಂದು ಸಾವರ ವಡ್ಡರನ್ನು ಕರೆಯಿಸಿಕೊಂಡು ಕೆಲಸ ಸುರುಮಾಡಿಯೇ ಬಿಟ್ಟನು. ತೆಗೆಸಿದ ವಂದೊಂದು ಬುನಾದಿಯಲ್ಲಿ ಹೇರಳ ಹೊನ್ನು, ನಗನಾಣ್ಯ ಸಿಕ್ಕಿತು. ಅವನ ಕಣಸಿನಲ್ಲಿ ತಾನು ದೇವತಾ ಸ್ತ್ರೀಯಂತೆ ಕಾಣಿಸಿಕೊಂಡು ಭಲಾ. ರಾಜಕುಮಾರ ಭಲಾ” ಯಂದು ಹೊಗಳಿದ್ದುಂಟು. “ನೀನು ಯಾರು ತಾಯಿ?” ಯಂದಾತನು ಕೇಳಿದ್ದಕ್ಕೆ ತಾನು “ನಾನು ಅರಮನೆ ಕಣ ಮಗಾ” ಮಾನವನ ಬಾಯೊಳಗ ಹುಟ್ಟಿದ ಮಾತು ಮತ್ತು ನಾನು ಅವಳಿ ಜವುಳಿ.. ಗವಿಗಳಲಿ ಅಂಬೆಗಾಲಿಟ್ಟೆ.. ಮರ ಪೊಟರೆಗಳಲ್ಲಿ ಪುಂಡುರೋದನು ಕಲಿತೆ.. ಗುಡಿಸಿಲುಗಳಲಿ ಗೂಡಿಸಿಕೊಂಡಿದ್ದೆ.. ಮನೆಗಳಲ್ಲಿ ಮಾರುದ್ದ ಯಿದ್ದೆನಪ್ಪಾ.. ಕದಂಬರನು ನಂಬಿಕೊಂಡು ಬನವಾಸಿಂರುಲಿ, ಚಾಲುಕ್ಯರನು ನಂಬಿಕೊಂಡು ವಾತಾಪಿಯಲ್ಲಿದ್ದೆ.. ಅವರಿಂದ ಬ್ಯಾಡಾಗಿ ಯಿವರಲ್ಲಿಗೆ.. ಯವರಿಂದ ಬ್ಯಾಡಾಗಿ ಅವರಲ್ಲಿಗೆ ಅಲದಾಡಿ ಅಲದಾಡಿ ಪೆನುಗೊಂಡೆಯಲ್ಲಿದ್ದಾಕಿ ಕೊನೀಕೆ ಇಲ್ಲಿಗೆ ಬಂದು ನೆಲಗೊಂಡಿರುವೆನಪ್ಪಾ.. ಅಂತೂ ನಾನು ನನ್ನ ಗುರಿ ಸಾಧಿಸಿಬಿಟ್ಟೆ.. ನೀನು ಬಲಾಡ್ಯ ರಾಜ್ಯ ಕಟ್ಟು. ನ್ಯಾಯ ಧರುಮ ನಿನ್ನೆರಡು ಕಣ್ಣಾಗಲಿ” ಯಂದು ಹೇಳಿದ್ದುಂಟು.. ಮುಂದ ಅವನು ಅರಮನೆಯನ್ನು ಯಬ್ಬಿಸಿ ಅದಕ ಅಂದರ ತನಗ 'ಜಗನ್ನೋಹಿನಿ' ಯಂದು ನಾಮಕರಣ ಮಾಡಿದ್ದುಂಟು.. ತದನಂತರ ಬಂದವರಾರು ತನ್ನ ಸುಖ ದುಕ್ಕ ಯಿಚಾರಿಸಿದ್ದುಂಟಾ.. ಹಿಂಗಾಗಿ ತಾನು ಕಳಾಹೀನಳಾಗಿದ್ದುಂಟು.. ಯಂದು ತಾನು ಮಮ್ಮಲನೆ ಮರುಗಿದಳು. ತಾನಾದರೋ ಹೆಸರಿಗೆ ಮಾತ್ರಅರಮನೆಯು.. ಅರಸರೆಂಬುವವರು ತನ್ನೊಳಗಿರಲಕಬೇಕು.. ಅರಸೊತ್ತಿಗೆ ಯಲ್ಲಿವರೆಗೆ ಯಿರುತ್ತದೋ ಅಲ್ಲಿವರೆಗೆ ಅರಸೊತ್ತಿಗೆಯು.. ರಾಜರೇ ಯಿಲ್ಲೆಂದ ಮ್ಯಾಲ ತನಗಿಲ್ಲಿ ಯಿನ್ನೇನು ಕೆಲಸ? ತನಗಿನ್ನು ದಂಡಪಿಂಡದ ಪದವಿ.. ಅಂತರಪಿಚಾಚಿಯ ಸ್ಥಾನಮಾನ.. ಅರಮನೆವನು ದುಕ್ಕ ಪಡುತ ಕುದುರೆಡವು ಪಟ್ಟಣದ .... .....ಬೀದಿ ಬೀದಿಗೆ ಬಂದಳು.. ಅಗೋಚರ ಸ್ಥಿತೀಲಿದ್ದು ಕಮ್ಮೊಳಗೆ ಮರುಗೋಲು ಹಿಡಿದು ನಡೆಯುತ್ತಿದ್ದ ಆ ಗೂನು ಬೆನ್ನಿನ ಮುದುಕಿಯು ಕೇವಲ ತಮಗಷ್ಟೆ ಕಾಣುತ್ತಿದ್ದುದರಿಂದ ವಂದೊಂದು ಮನೆಯು, ವಂದೊಂದು ಗುಡಿಸಿಲು ಓಹ್ ಅರಮನೆಯವ್ವಾ. ಹಾ... ಹಾಯ್ ಅರಮನೆವಾ' ಯಂದು ವುದ್ದಾರ ತೆಗೆಯುತಲಿದ್ದವು. ಕೆಲವೊಂದು ಆಕೆಗಡ್ಡ ಹೋಗಿ “ಯೇನವ್ವಾ