ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨ ಅರಮನೆ ಯಮಯಸನ ಮಾಡತೊಡಗಿದರು. ರುತುಮಾನಗಳ ವಡತಿಯೇ ಮೋಬಯ್ಯನ ಸರೀರದೊಳಗ ನೆಲಗೊಂಡಿರುವಾಗ ತಾವ್ಯಾಕ ಚಿಂತೆ ಮಾಡಬೇಕು? ಯಂದಂದುಕೊಂಡ ಆ ಮಂದಿ ಅರಮನೆ ಯಂಗಳದಲ್ಲಿ ನಿಂತು ಯವ್ವಾ.. ತಾಯಿ.. ಮಳೆಯಿಲ್ಲದ ಮರಗಳು ವಣಕ್ಕೊಂಡೋಗಿ ಚಾವತ್ತು ಕೂಡರಲಕ ನೆಳ್ಳಿಲ್ಲದಂಗಾಗಯ್ತಿ.. ನೀರಿಲ್ಲದೆ ಜೀವ ಜೀವಗಳೆಲ್ಲ ಬಾಯಿ ಬಾಯಿ ಬಿಡಲಕ ಹತ್ಯಾವ ನಮ್ಮವ್ವನೇ.. ಯಂದು ಕಂಗಾಲಾಗಿ ಬೇಡಿಕೊಂತು.. ಕಾಗೆ ಕಾವ್ ಅಂತು ಕವಳೆ ಹಣ್ಣು ಕೆಳಕ್ಕುದುರಿತು ಅನ್ನೊಹಂಗ.. ವಾರೊಪ್ಪತ್ತೋಳಗ ಗುಡ್ಡಗಾತುರದ ಮೋಡಗಳು ಆಗಸದ ತುಂಬ ವಂದಕ್ಕೊಂದು ಬಡದಾಡಿ, ಗುಡುಗು ಸಿಡಿಲು ಕೋಲ್ಮೀಂಚುಗಳ ಭಾರಿಸಿ ಯಡಬಿಡದೆ ಮೂರು ಹಗಲು, ನಾಕು ರಾತ್ರಿಪಲ್ಯಂತ ಮಳೆ ಧೋ ಯಂದು ಸುರಿಸಿದವು ಸಿವನೇ.. ನೀರಿನ ನೆರೆಗೆ ಭಯಭೀತಗೊಂಡು ಹೊಳೆಹಳ್ಳಗಳು ಅರಚಿದವು ಸಿವನೇ, ಕೆರೆಕಟ್ಟೆಗಳು ತುಂಬಿ ತುಳುಕಿದವು.. ನೀರೊಳಗ ನೆಂದ ಮಂದಿ ತಾಯಿss ನೀನು ಕರುಣಾಮಯಿ ಯಂದು ಕೊಂಡಾಡಿತು.. ಯಿನ್ನೇನು ಬರಕ್ಕೆ ಸೆಟೆದು ಪಿಂಡಗಳು ವುರುವಲಾಗಿ ತಾಯ ಬಸುರನ್ನು ದಹಿಸುತ್ತವೆ ಯಂದು ಭಾವಿಸಿದ್ದ ಸೂಲಗಿತ್ತೇರು ಪಿಂಡಗಳು ತಾವಿದ್ದ ಬಸುರೊಳಗರಳಿ ಮತ್ತೆ ಕಿಲಕಿಲ ಗುಟ್ಟಲಾರಂಭಿಸಿದುದನು ಕಂಡು ಅರಮನೆ ಕಡೇಕ ಮುಖ ಮಾಡಿ ಕಯ್ಕ ಮುಗುದರು ಸಿವನೇ... ನೆಲ ಹಸಿರು ಮುಕ್ಕಳಿಸಲಾರಂಭಿಸಿತು, ಯಲ್ಲಿ ನೋಡಿದರೂ ಸಂಭರಮೋ ಸಂಭರವು..... ತಾಯಿಯು ತನ್ನ ಹಳೆಪಳೆಯ ಸೀರೆಗಳನ ನೆಲದ ತುಂಬೆಲ್ಲ ಹರವಿದಳಂತೆ.. ನೀವು ಯೋಗಿಂದೀಗಲೇ ಮುಗುಲಿಗೆ ಹಾರಿ ಮೋಡಗಳಾಗಿರಿ ಯಂದಾಗ್ಗೆ ಮಾಡಿದಳಂತೆ. ಅವೆಲ್ಲ ಮುಗುಲಿಗೆ ಸುಯ್ಯಂತ.. ಹುಟ್ಟಿಕೊಂಡ ಕಥೆಗಳು ಕಪಾಳದಿಂದ ಕಪಾಳಕ್ಕೆ.. ಆ ಮಾರಾಗ್ನಿ ಪ್ರಜೆಗಳ ಕಷ್ಟಸುಖ ಯಿಚಾರಿಸುವ ಸಲುವಾಗಿ ಕುಂತಲ್ಲಿ ಕುಂಡದೆ, ನಿಂತಲ್ಲಿ ನಿಂದುರದೆ ಕುಂತಳ ಸೀಮೆಯಾದ್ಯಂತ ಸಂಚಾರ ಕಲ್ಗೊಂಡಿರುವಳಂತೆ.. ಹರಿದು ಹಂಚಿ ಹೋಗಿರುವ ಪುಲ ಸಾಮುರಾಜ್ಯವನ್ನು ವಂದುಗೂಡಿಸಿ ಅರಮನೆಯೊಳಗಿಡಲು ಪ್ರಯತ್ನ ಮಾಡುತ್ತಿರುವಳಂತೆ.. ತಮ್ಮ ಸಾಂಬವಿಯ ವಸ್ತಿಯ ಪಾದಂಗಳ ಬುಡಕ್ಕೆ ಕಡಕೊಂಡ ಬೀಳಲಕೆಂದು ಮೋಡೋಡಿ ಬರುತ್ತಿರುವ ಅಗೋ ಅಲ್ಲಿ ಕೆಂಗನಾಯಕ, ಸೂರನಾಯಕ, ಮಾರನಾಯಕ, ಯಗೋ ಯಿಲ್ಲಿ ಗೋಯಿಂದ