ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭೨ ಅರಮನೆ ಪ್ರಭಾವಿತನಾದ ಸೂಯ್ಯಾಮನು ಸಹ ಚಂದ್ರಾಮನನ್ನು ಮಗು ಯಂದು ಭಾವಿಸಿ ಯತ್ತಾಡಿಕೊಂಡು ಕುಣುದಾಡಿದನು. ಅಷ್ಟೇ ಯಾಕೆ, ಯೋಚಲು ಮರಗಳು ತೆಂಗಿನ ಮರಗಳಾದುದೇನು? ಮುಳ್ಳುಗಳು ಹೂವುಗಳಾದುದೇನು? ಕಾಗೆಗಳು ಕೋಗಿಲೆಗಳಾದುದೇನು? ಗುಬ್ಬಿಗಳು ಜೇನುವಕ್ಕಿಗಳಾದುದೇನು? ಹುಲ್ಲ ಗರಿಗಳ ಮ್ಯಾಲಿದ್ದ ಯಿಬ್ಬನಿಗಳು ತೊಳೆದ ಮುತ್ತುಗಳಾಗಿ ಹೊಳೆದುದೇನು? ಸರಳ ಸಜ್ಜನಿಕೆಗಳು ಕೂಸುಗಳಿದ್ದ ಕಡೇಲೆಲ್ಲಾ ವಸಾಹತು ಸ್ಥಾಪನಾ ಮಾಡಿದುದೇನು? ಕೂಸಿದ್ದ ವಂದೊಂದು ಗುಡುಲೂ ಅರಮನೆಯಂತೆ ಕಂಗೊಳಿಸುತಲಿದ್ದುದೇನು? ಪ್ಲಾ.. ಜ್ಞಾ... ಕೂಸಿದ್ದ ಮನೆ ಮಂದಿ... ವುಣದಿದ್ದರೂ ವುಂಡವರಂತಿರುತಲಿದ್ದುದೇನು? ಬ್ಯಾನೆ, ಬ್ಯಾಸರಿಕೆ, ಆಯಾಸ, ರೋಗ ರುಜಿಣಗಳಿಂದ ದೂರಯಿದ್ದುದೇನು? ಯಲಮೋ ಯಂಬ ಸತ್ತುಗಳಿಲ್ಲ.. ಕೊಟ್ಟು ಮುಂದಕೆ ಹೋಗು ಯನ್ನುವ ಸಾಲಗಾರರ ಭಯವಿಲ್ಲ ಅವರವರಿಗೆ ಸಿವನೇ... ತೆ ಬಿಸಿಲು ಬೆಳದಿಂಗಳ ಮೊರೆ ಕಳಚತೊಡಗಿದಂತೆ ಕುದುರೆಡವಿಗೆ ಕುದುರೆಡನೇ ವಾಸ್ತವದ ಕಡೇಕ ನಿಧ ನಿಧಾನವಾಗಿ ಮುಖ ಮಾಡಿತು. ಮುಖ ಮಾಡಿರುವ ಕಾಲಕ್ಕೆ ಮೋರೋಯ್ ಮಾರಿತಾದಿss.. ಮೋರೋಯ್ ಮರುವಾದಿsss..ಮೋರೋಯ್ ಹಟವಾದಿss... ಯಂದು ಕೂಗಿಕೋತ, ಕೂಗಿಕೋತ ರತುನಗಿರಿಯ ಬಂಡೆಪ್ಪನೂss.. ಮೋರೋಮ್ ಗುಂತೆಲೀsss ಮೋರೋಮ್ ಸಮಂತಲೇsss ಮೋರೋಮ್ ಚರಕಲೀ.. ಯತ್ತಲಿಂದಲೋ ಬಂದೂss ಬಂದೂss... ಗಂಡ ಹೆಂಡತಿಯನ್ನು ಮರೆತು, ಹೆಂಡತಿ ಕಂಕುಳದಲ್ಲಿದ್ದ ಕೂಸು ಕುನ್ನಿ ಮರೆತು, ತಂದೆ ಮಗನನ್ನು ಮರೆತು, ವದಕನ ಬದುಕನ್ನು ಮರೆತು, ವಬ್ಬರು ಯಿಬ್ಬರಾಗಿ, ಯಿಬ್ಬರು ನಾಲಕು ಮಂದಿಯಾಗಿ ನೆರೆ ಬಂದ ಹೊಳೆಯಂತೆ ಅರೆಮನೆಯಲ್ಲೆಯೆಲ್ಲಂತ ಧಾವಿಸಿ ಹೋಗುತ್ತದೆ. ಬಗೆ ಬಗ್ಗಿ ನೋಡುತ್ತದೆ.. 'ಯುನ್ನೋ ಯಂಥ ಮಾಯಗಾರಿ ಅದೀಯಾ ನೀನು.. ನಿನ್ನ ಕರುಣೆಯ ಕಡಲು ಅಗಾಧ ಅಯ್ತಲ್ಲವ್ವಾ.. ಯಂದುದ್ಧಾರ ತೆಗೆಯುತ್ತದೆ...ಸೀವಸಂಕರ ಮಾದೇವಾ.. ಅಂಗಾತ ಮಲಗವನೆ ಮೋಬಯ್ಯ, ಕಯ್ಕ ಕಾಲ್ನ ಬಯಲೊಳಗ ಯತ್ತಿ