ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೮೧ ಬಸಪ್ಪನಾಯಕರ ಮಗ ಸೋಮಶೇಖರ ನಾಯಕನ ಆಸ್ಥಾನದಲ್ಲಿದ್ದು ಪುರೋಹಿತ ಕಾರಗಳನ್ನು ಮಾಡುತ್ತಿದ್ದಂಥವರಾಗಿದ್ದರು. ಯಿವರದೋ ಅಪಸ್ತಂಭ ಕವುಂಡಿನ್ಯ ಗೋತ್ರವು ಮಹಾ ನಾಯಕರಿಂದ ಪಾಂಡ್ಯವಾಡ ದೇಸದ ಕೋಗಳಿ ವೆಂಟರೆ ಸಲುವ ಕೊಟ್ಟೂರು ಸೀಮೆಯೊಳಗಣ ನಿಚ್ಚಾಪುರ ಪಟ್ಟಡಿಯೊಳಗಣ ಯಂಟಾಪುರ ಗ್ರಾಮವನ್ನು ಸಧ್ವಮಾನ್ಯವಾಗಿ ಪಡಕೊಂಡಿದ್ದಂಥವರು.. ನಿಧಿ ನಿಕ್ಷೇಪ ಜಲ ತರು ಪಾಷಾಣ ಅಷಿಣಿ ಆಗಮ ಸಿದ್ದ ಸಾಧ್ಯಂಗಗಳೆಂಬ ಅಷ್ಟಾಂಗ ತೇಜೋಪಾಲ್ಬನೆಯನ್ನು ಅನುಭೋಕೆ ಮಾಡುತ್ತಿದ್ದಂಥವರು. ಸವಾರಿ ಬಂಡಿ ಕಳಿಸಿ ಕರೆಯಿಸಿಕೊಂಡದ್ದು ತಡ ಆಗಲಿಲ್ಲ. ಯೇದಾಂತಿಗಳೂ, ಜ್ಯೋತಿಷ್ಯ ಮಾಝಾಂಡರೂ ಆದ ಅವರು ಬರುಬರುತ್ತಲೆ ಸೀದ ಅರಮನೆಗೆ ಧಾವಿಸಿ, ಮೋಬಯ್ಯನ ದುರುಸನ ಪಡದು "ಯಂಥ ತೇಜಸ್ವಿ ಶಿಶುವಿದು, ಯಿದಕ್ಕೆ ತೊಟ್ಟಿಲು ಕಾವ್ಯ ನಾಮಕರಣ ಕಾರ್ ಮಾಡುವ ಸುವಣ್ಣಾವಕಾಶ ಲಭಿಸಿರುವುದು ನಮ್ಮ ಪೂಲ್ವಜನ್ಮದ ಸುಕ್ರುತವೇ ಸರಿ” ಯಂದು ವುದ್ದಾರ ತೆಗೆದು ತಮ್ಮ ಬಿಡದಿ ಮನೆಗೆ ಹೋದರು.... ಅವರು ಯವತ್ತು ಬಂದರೆಂದರೆ ಕಾರಡಿಯಿಂದ ಯಪ್ಪ ರಾಜನು ಮರುದಿವಸ ಬಂದನು, ಆತ ಯವತು ಮದಾಣ ಬಂದನೆಂದರೆ ಮದರಂಗಿ ಕೋಟೆಯಿಂದ ಸುಬೇದುಲ್ಲಾಖಾನನ ರಾಯಭಾರಿಯಾದ ದಿವಾನ ಸಿವರಾಮ ರಾವ್ ಕಬಾಡಿಯು ಚಂಜೆ ಮುಂದುಗಡೆ ಬಂದನು. ತದ ನಂತರ ಕೂಡ್ಲಿಗಿಯಿಂದ ಯಡ್ಡವರನ ಆಪ್ತ ಸಹಾಯಕನಾದ ದವಲತ್‌ರಾವ್ ಯೇಕಬೋಟೆ ಮುಚ್ಚಂಜೆ ಹೊತ್ತಿನಲ್ಲಿ ಬಂದ, ಯಿವರೊಂದೆ ಅಲ್ಲದೆ ಸುತ್ತಮುತ್ತಲ ಸಾಮಂತರು, ಮಾಂಡಲಿಕರು ಅವುಧವುದೆಂಬಂತೆ ಬಂದರು. ವಂದು ಛಣದಲ್ಲಿ ಕುದುರೆಡವು ಪಟ್ಟಣವು ಪರತಾಪರುದ್ರಗಜಪತಿಯ ಮೋರಂಗಲ್ಲು ರಾಜಧಾನಿಯಂತೆ ಕಂಗೊಳಿಸಲಾರಂಭಿಸಿತು ಸಿವನೇ... ಆ ಫಲಾನದಿನ ಬಂತೋ ಬಂತು! ಪ್ಲಾ.. ಪ್ಲಾ.. ಹುಗ್ಗಿ ಹೋಳಿಗೆ, ಪಾಯಸ, ಖೀರು, ಜೋಳದನ್ನ, ಗುಗ್ಗರಿ, ನವಣಕ್ಕಿ ಬಾನ, ನೆಲ್ಲಕ್ಕಿಬಾನ, ಯಿವೇ ಮೊದಲಾದ ಖಾದ್ಯಗಳನ್ನು ಯಂಥ ಬಡವರೂ ಮಾಡಿದ್ದು ತಡ ಆಗಲಿಲ್ಲ, ಮತ್ತೊಂದು ಪರಿಶೆ ಮರು ಹುಟ್ಟು ಪಡಕೊಂಡದ್ದು ತಡ ಆಗಲಿಲ್ಲ, ಮನೆಗೆ ಮನೆ ಮೋಣಿಗೆ ಮೋಣಿ ಹೆಗಲುಕೊಟ್ಟು ನಿಂತುಬಿಟ್ಟವು. ಸೊಯಂಸೇವಾ ಕಾರಕರರು ಸಾಯಿರ ಸಂಖ್ಯೆಯಲ್ಲಿದ್ದು ಪುರುಸೊತ್ತಿಲ್ಲದೆ ಅಡ್ಡಾಡಿ