ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೮೩ ಅದೇ ಜಡೆ ತಾತನು ಕಿವಿ೦ತೋಳ ಪಿಸುಗುಟ್ಟಿದ್ದಕ್ಕೆ ಕಾಡುಗೊಲ್ಲರೀರಯ್ಯನು.. ಯಾರು ಕೂಸನು ಯ ತೊಟ್ಟಿಲೊಳಗೆ ಯಿಡುತಾರೋ ಅಂಥವರ ಮನೆಯೊಳಗೆ ಭಂಗಾರದ ಹೊಣೆ ಆಡುತದೆ.. ಅಂಥವರ ಸತ್ತುನಿಸ್ಟ್ರೇಷ ಆಗುತಾರ.. ಅಂಥವರು ನೂರರ ಮ್ಯಾಲ ಭಾಳಿ ಭದುಕುತಾರ.. ಅಂಥವರು.. ಯಂದನುತಿರುವಷ್ಟರಲ್ಲಿ ಹಿಂದಕ ಜರುಗಿದ್ದ ಮಂದಿ ಮುಂದ ಮುಂದಕ ಬಂತು.. ನಾನು ಯತ್ತಿ ಹಾಕುತೀನಿ ತಾನು ಯತ್ತಿ ಹಾಕುತೀನಿ ಯಂದು ಪಯಿಪೋಟಿಗೆ ಬಿತ್ತು... ಯಲ್ಲಿ ತಾನು ಅವರ ಕಯ್ಲಿಗೆ ಸಿಕ್ಕು ಅಪ್ಪಚ್ಚಿಯಾಗೇ ಬಿಡುವೆನೋ ರಂದು ಮೋಬಯ್ಯನು ವಳಗೊಳಗ ಯದುರುತಿರಬೇಕಾದರ ಅದೇ ಕಾಡುಗೊಲ್ಲರೀರಯ್ಯನು.. ಯತ್ನಿ ಹಾಕುವ ಮಂಗಳ ಕಾರೈವನ್ನು ಹರಾಜು ಹಾಕುತೀವಪ್ಪಾ.. ಸವಾಲು ಎಂದು ಸಾವುರ ಪಗೋಡಾ.. ಯಂದು ಘೋಷಣೆ ಮಾಡಿದೊಡನೆ ಭಕುತಾದಿಗಳ ಪಯ್ಲಿ ಬಹಳೋಸು ಮಂದಿ ಮುಖ ಸಣ್ಣದು ಮಾಡಿಕೊಂಡು ಹಿಂದು ಹಿಂದಕ ಜರುಗಲಾರಂಭಿಸಿತು.. ಸಿಸು ಗಹಗಹಿಸಿ.. ಸುತ್ತನ್ನಾಕಡೆಯಿಂದ ಬಂದಿದ್ದಂಥ ಸಾಮಂತ, ಮಾಂಡಲಿಕ, ಪಟ್ಟಾರಿ, ಜಾಗೀರುದಾರ, ಗವುಡರ ನಡುವೆ ಪಯಿಪೋಟಿ ಬಿದ್ದು ಸವಾಲು ವಂದುಸಾಯಿರದಿಂದ ಅಯ್ದು ಸಾಯಿರದವರೆಗೆ ಯೇರುತ್ತ ಹೋಯಿತು. ಅಯ್ದು ಸಾಯಿರದ ಮ್ಯಾಲ ನೂರಾವಂದು ಯಂದು ಕೂಗಿದ ಮದರಂಗಿ ಕೋಟೆಯ ದಿವಾನ್ ಸಿವರಾಮರಾವ್ ಕಬಾಡಿಯು ತನ್ನ ಮೀಸೆ ಮ್ಯಾಲ ಕಯ್ಯನ ಯಿಡಬೇಕೆಂಬವಷ್ಟರೊಳಗ ಕಾರಡಿಂಯ ಪ್ಪತಿರಾಜನು ಹತ್ತು ಸಾಯಿರದಾವಂದು ಯಂದು ಕೂಗಿ ಬಿಡುವುದೇನು? - ಅದಕ ೦ಾರೊಬ್ಬರೂ ದುರಾಡಲಿಲ್ಲ.. ವುದಿಗಿದ್ರಿಹೇಳುವಂತಿರಲಿಲ್ಲವಾದ್ದರಿಂದ ಆ ಕೂಡಲೆ ಅಷ್ಟು ರೊಕ್ಕವನ್ನು ನಿಂತ ಬಯಟಲೆ ಯಣಸಿದ ಹದಿಮೂರು ಮಣ ತೂಕದ ಯಪ್ಪರಾಜನು ಮೂರೂವರೆ ಮಣ ತೂಕಯಿದ್ದ ಸಿಸುವನ್ನು ಹುಬ್ಬಿನ ಪುಟ್ಟಿಯೋ ಯಂಬಂತೆ ಯ ತೊಟ್ಟಿಲೊಳಗೆ ಹಾಕಿದೊಡನೆ ಭಕುತಾದಿ ಮಂದಿಯು ಸಿವನಾಮ ಪಾರೋತಿ ಪತಿ ಹರ ಹರ ಮಾದೇವಾss ಯಂದೊಕ್ಕರಲಿನಿಂದ... ತೊಟ್ಟಿಲನು ಮುಟ್ಟುವುದಕಿಷ್ಟು ಮುಟ್ಟಿ ತೂಗಿದರ ಯಿಷ್ಟು ಲಟ್ಟಿಗೆ