ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೬ ಅರಮನೆ ಅದರಲ್ಲೂ ಗ್ರೇಟ್ ಬ್ರಿಟನ್ನೊಳಗೆ ಹುಟ್ಟಿ ಬೆಳೆದಿರುವಾಕೆಯೂ.. ಅದರಲ್ಲೂ ಬಯಬಲ್ಲನ್ನು ಅರಗಿಸಿಕೊಂಡಿದ್ದವನ ಮಗಳು ಇಂಥದ್ದನ್ನೆಲ್ಲ ನಂಬುತ್ತಿರುವಳೆಂದ ಮೇಲೆ ಸದರೀ ದೇಶದ ಹಿಂದೂ ಮಂದಿ ನಂಬದೆ ಯಿರುವರೇನು? ಯಂದು ಮುಂತಾಗಿ ಯಿವಯ್ಯನಿಲ್ಲಿ ಯೋಚಿಸುತ್ತಿರುವಷ್ಟರಲ್ಲಿ ಸತ್ಯಸಂಶೋಧನ ಮಾಡಲೆಂದು ಪ್ರತಿನಿಧಿಯಾಗಿ ಕುದುರೆಡವಿಗೆ ಹೋಗಿದ್ದ ದವಲತ್ತುರಾವ್ ಯೇಕಬೋಟೆಯು ಬಾಗಿಲ ಬಳಿ ಕಾಣಿಸಿಕೊಂಡನು.... ಅವನನ್ನು ತನ್ನ ಖಾಸಾ ಕೋಣೆಗೆ ಕರೆದೊಯ್ದು ಯಡ್ಡವರನು ಯೇನೇನು ನೋಡಿದೆ.. ಅಲ್ಲೆಲ್ಲಾ ನಡೆಯುತ್ತಿರುವ ಅತಿಮಾನುಷ ಘಟನೆಗಳು ನಕಲಿ ಅವುದೋ ಅಲ್ಲವೋ?” ಯಂದು ಕೇಳಿದ್ದಕ್ಕೆ ಯೇಕ ಬೋಟೆಯು ನಕಲಿ ಯಂದು ಹೇಳಿ ನಾನ್ಯಾವ ನರಕಕ್ಕೆ ಹೋಗಲಿ ದೊರೆಯೇ” ಯಂದು ಬಿಡುವುದೇನು? ಅಲ್ಲೇ ಯಿದ್ದ ಯಿನ್ನೊಂದು ಖೋಲಿಯೊಳಗಯಿದ್ದ ಜೆನ್ನಿಫರಮ್ಮನ ಮನಸ್ಸು ವಂದು ಚಣ ತ್ರಿಲೋಕದಾದ್ಯಂತ.. ತ್ರಿಕಾಲ ಪಲ್ಯಂತ ಸಂಚಾರ ಮಾಡೀ ಮಾಡೀ ವಂದು ಸ್ಥಿತಿಗೆ ಅದೇ ತಾನೆ ಮರಳಿರುವುದು ಸಿವನೇ.. ಕುದುರೆಡಮೊಳಗಿನ ಅಲವುಕಿಕ ಯಿದ್ಯಾಮಾನಗಳನ್ನು ಮರೆಯಬೇಕೆಂದು ನಿರರಿಸಿ ಕಪಾಟೊಳಗ ಯಿಲ್ಲದ ಪುಸ್ತಕಕ್ಕಾಗಿ ಬೆದಕಾಡುತಾಳ.. ಸಂಗೀತದಿಂದಲಾದರೂ ಅಂತ ಪಿಯಾನೋದ ಮೇಲೆ ಬೆರಳಾಡಿಸುತಾಳ.. ಬಣ್ಣದ ಕುಡಿಕೆ, ಕುಂಚಗಳನು ಕಯ್ದೆತ್ತಿಕೊಳುತಾಳ.. ಮಲಗಬೇಕೆಂದುಕೊಳುತಾಳ.. ಯಚ್ಚರಿರಬೇಕೆಂದು ಕೊಳ್ಳುತಾಳ.. ಬೆತ್ತಮ, ಜರೂಸಲೆಮ್ಮುಗಳನ ಕಲ್ಪನ ಮಾಡಿಕೊಳುತಾಳ.. ಹೇ ಪಭೂ ಯಂದು ಯೇಸು ಪ್ರಭುವಿನ ಮೂರ್ತಿಯದುರು ಮಂಡಿಯೂರಿ ಕೂಡುತಾಳ.... ಕುಂಪಣಿ ಸರಕಾರದ ದರವವೊಂದು ಬಗೆದರ ಕಳ್ಳಕಾಕರ ದಯವಮೊಂದು ಬಗೆದಿತ್ತು. ಯಡ್ಡವರನು ಹಿಂಗ ಹೋಗಿ ಹಂಗ ಸಿಕ್ಷೆ ಕೊಡುತೀನಂದರ ಅವರೇನು ಮಾಮೂಲಿ ಕಳ್ಳರಾ? ಯಲ್ಲಾಪ್ರಕೊರಚರಟ್ಟಿ ಕೊರವರು. ಕನ್ನಡದೊಳಗೆ ತಿಗಳ ಭಾಷೇನ ಮಾತಾಡುವ ಸೂರರು. ಯೇಕಧ ಯಿಂಬಳಗಾತುರ ವಾಗುವುದು ತಡವಲ್ಲ.. ಸರಸರಾಂತ ಬೆಳೆದು ಬೇತಾಳದಷ್ಟೆತ್ತರವಾಗುವುದು ತಡವಲ್ಲ... ಗೋಡೆಯ ಮ್ಯಾಲ ಸಲೀಸಾಗಿ