ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೯೧ ಅಮಲಾಪಯಿವೇ ಮೊದಲಾದ ಹಳ್ಳಿಗಳು ತನ್ನ ಕುದುರೆಯ ಖುರಪುಟದ ಸದ್ದಿಗೆ ತತ್ತರಿಸುತ್ತಿವೆ. ಕೇಂಧೂಳೊಳಗೆ ತಲೆಮರೆಸಿಕೊಳ್ಳುತ್ತಿವೆಯಂಬ ಅನುಮಾನ ಬಂತು. ತನ್ನ ದ್ರುಸ್ಟಿಗೆ ಯಡವುತ ಬಿದ್ದೋಡುತ್ತಿರುವವ ರೆಷ್ಟೋ? ತನ್ನ ಮಾತಿನ ಚಿಮುಟಿಗೆ ಸಿಲುಕದೆ ಪುಸುಗಿಕೊಳ್ಳುತ್ತಿರುವವರನ್ನೂ? ತಾನು ಯಲ್ಲಿ ಅಪ್ಪಿಬಿಡುವೆನೋ? ತನ್ನ ಮಾತಿನಿಂದ, ಸ್ಪರ್ಶದಿಂದ ತುಲ್ಲಿ ಮಯ್ಲಿಗೆಯಾಗಿಬಿಡುವೆನೋ? ಯಲ್ಲಿ ತಮ್ಮ ಕಂದಮ್ಮಗಳನ್ನು ಕಿರಸ್ತಾನ ಮತಕ್ಕೆ ಪರಿವರಿಸಿಬಿಡುವರೋ? ಯಂಬ ಆತಂಕದಿಂದ ತಮ್ಮ ತಮ್ಮ ಮಕ್ಕಳು ಮರಿಗಳನ್ನು ಯದೆಗವುಚಿಕೊಂಡು ನೆರಿಕೆಯ ಮರೆಗೆ ಸರಿಯುತ್ತಿರುವ ತಾಯಂದಿರು ಅಲ್ಲಲ್ಲಿ ಗೋಚರಿಸದೆ ಯಿರಲಿಲ್ಲ.. ತನ್ನ ಮಕ್ಕಿಗಂಟಿರುವ ಬಣ್ಣ ತಾನು ಧರಿಸಿರುವ ಪೋಷಾಕು, ತನ್ನ ಬ್ರಿಟೀಷ್ ವ್ಯಕ್ತಿತ್ವ.. ಛೇ.. ಛೇ.. ವಂದು ಕ್ಷಣ ತನ್ನನ್ನು ತಾನು ಹಳಿದುಕೊಳ್ಳಬೇಕು.. ನಿಂದಿಸಿ ಕೊಳ್ಳಬೇಕು ಯಂದುಕೊಂಡ.. ಆದರದು ಅಷ್ಟು ಸುಲಭವಲ್ಲ ಯಂದೆನಿಸಿತು.... ತನ್ನನ್ನು ತಾನು ಸಾಂಬಳಿಸಿಕೊಳ್ಳುತ್ತ ಕೂಡ್ಲಿಗಿ ಸಮೀಪಿಸಿದಾಗ ಸಾಯಂಕಾಲ ತನ್ನ ಮೊದಲ ಪತ್ವವನ್ನು ವಿದ್ಯುಕ್ತವಾಗಿ ಆರಂಭಿಸಿತ್ತು. ಅಗೋ.. ಅಲ್ಲಿ.. ತೆಂಗಿನ ಮರಗಳ ನಡುವೆ ಕಾಣಿಸುತ್ತಿರುವುದೇ ತನ್ನ ನಿವಾಸ.. ಅದರ ವುಪ್ಪರಿಗೆ ಮೇಲೆ ನಿಂತಿರುವ ಬೆಳಕನ್ನು ಪ್ರತಿಫಲಿಸುತ್ತಿರುವ ವ್ಯಕ್ತಿಯೇ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ಜೆನ್ನಿಫರಳಿದ್ದಿರಬಹುದು.. ಹೋದೊಡನೆ ಆಕೆ ತನ್ನ ಮೇಲೆ ಮುನಿಸಿಕೊಳ್ಳಬಹುದು.. “ಸಂಜೆಯೊಳಗಾಗಿ ಮರಳಿ ಬರುವುದಾಗಿ ಹೋದವರು ಯಂಟು ದಿನಗಳ ನಂತರ ಬಂದಿರುವಿರಲ್ಲಾ..” ಮಂದಾಕೆ ತನ್ನನ್ನು ವಿಚಾರಣೆಗೆ ಗುರಿಪಡಿಸಬಹುದು.. ಆಕೆ ಕೇಳ ಬಹುದಾದ ಪ್ರಶ್ನೆಗಳಿಗೆ ವುತ್ತರಗಳಿರುವವೇ ತನ್ನ ಯದೆಯೊಳಗೆ.... ಅತ್ತ ತಾಯ್ತನ ನಂಬುವ ಜುಟ್ಬಾಲೆಂಯೊಳಗ ಅಗೋಚರ ತೋಳುಗಳಿಂದ ವಂದೇ ಸಮಕ ತೂಗಿಸಿಕೊಳ್ಳುತಲಿದ್ದ ಕುದುರೆಡವು ಪಟ್ಟಣವು ಯಾವಾಗ ಮಲಿಕ್ಕೊತಿತ್ತೋ? ಯಾವಾಗ ರುಚ್ಚರಿರುತಿತ್ತೋ?. ಹುಲುನರಮಾನ್ನವರ ನಾಲಿಗೆಗೆ ಗ್ರಾಸವಾಗಿರುವ ಬಾಯಿಗೆ ನಮಲುವ ತೊಂಬಲದುಂಡೆಯಾಗಿರುವ, ತಲೆ ಮೇಲೆಲ್ಲಾ ಹೇನಾಗಿ ಹರಿದಾಡುತಲಿರುವ ಅರಮನೆಯು ಹಗಲು ರಾತ್ರಿಗಳನು ಅದಲು ಬದಲು ಮಾಡಿದುದೇ ಅದಕ್ಕೆ