ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೧೨ ಅರಮನೆ ಬಾಯ್ ನೀರು ಬುಡಬೇಕು ನೋಡಪ್ಪಾ ಯಂದು ಹೇಳೋದು ಹೇಳಿ ಅಲ್ಲಿಂದ ನಿರುಗಮಿಸಿದಳು. ಯೀ ಪ್ರಕಾರವಾಗಿ ಸಾಂಬಯ್ಯ ಮಾಡಿದ ಅನ್ನಪ್ರಾಸನದ ದುಸ್ಯವನ್ನು ಕಣ್ದಣಿಯೆ ನೋಡಿದ ಯಾವತ್ತು ಭಕುತಾದಿ ಮಂದಿಯು ಯಲ್ಲಲ್ಲಿದ್ದಿತೋ ಅಲ್ಲಲ್ಲಿ ಕೂಕಂಡು ತಮ್ಮ ತಮ್ಮ ಬುತ್ತಿಗಂಟುಗಳನ್ನು ಬಿಚ್ಚಿದರು. ಅವರದು ಯಿವರು, ಯವರದು ಅವರು ಹಂಚಿಕೊಂಡರು. ದನಕರು, ನಾಯಿ ಬೆಕ್ಕಿವೆ ಮೊದಲಾದ ಚತುಷ್ಪಾದಿಗಳಿಗೂ, ಕಾಗೆ ಗುಬ್ಬಿವೇ ಮೊದಲಾದ ಪಕ್ಷಿಗಳಿಗೂ ತಲಾ ವಂದೊಂದುತ್ತು ಹಾಕಿದರು, ನೀನುಣ್ಣಪ್ಪಾ ಯಂದು ಸೂರಪರಮಾತುಮನ ಕಡೆಗೆ ಹಾಕಿದರು, ಸೂರಪರಮಾತುಮನ ಕಡೆಗೆ ಹಾಕಿದರು, ಗಂಗಮ್ಯಾಯೀ ನೀನು ನಮ್ಮನ್ನ ಮರಿಬ್ಯಾಡವ್ವಾ ಅಂತ ಹರಿಯೋ ನೀರಿಗಾಕಿದರು, ನಿನ್ನ ಕರುಣೆ ಸದಾ ಯಿರಲವ್ವಾ ಭೂಮ್ಯಾಯಿ ಯಂದು ನೆಲದ ಮ್ಯಾಲೆಲ್ಲ ಸರಗಾವ ಚೆಲ್ಲಿದರು, ಆಮಾಕಿದ್ದು ತಾವು ಮಟ್ಟಸ ರೀತಿಯಲ್ಲಿ ಕೂತು ವಂದೊಂದುತ್ತು ದೇವರ ಪರಸಾದ ಯಂದು ಭಾವಿಕೆ ಮಾಡಿ ವಡಲು ದಣಿವಂತೆ ವುಂಡು ಮುಗಿಸಿದರು. ಮಬ್ಬು ಬಂದಂತಾಗಿ ತಾವಿದ್ದ ನೆಲದ ಮ್ಯಾಲ ಮಯ್ಯ ಚೆಲ್ಲಿ ತಲಾಕೊಂದೊಂದು ಜೋಂಪು ನಿದ್ದೆ ತೆಗೆದರು.. ಮೂಡಿದ್ದ ಕಣಸು ಮುಗಿಯೋ ಮುಂದುಗಡೀಕೆ ಯದ್ದು ಸಾಂಬವೀ ಅಂತ ಕಣ್ಣುಜ್ಜಿಕೊಂಡು ನಿಚ್ಚಳದಾರು. ಬಂದಂಥ ಭಕುತರನ್ನು ರಂಜನೆ ಮಾಡಲಕೆಂದು ಅದೇ ಪಟ್ಟಣದ ವಂದೊಂದು ಮೋಣಿವಳಗೆ ದೊಡ್ಡಾಟ, ಸಣ್ಣಾಟ, ಕೋಲಾಟ, ಜೋಗೇರಾಟ ಯದುರು ಬದುರಾಟ ವೇ ಮೊದಲಾದ ತರಾವರಿ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತಲ್ಲ... ಗೀಗೀ, ಲಾವಣಿ, ಸೋಬಾನ ಭಜನೆ ಯಿವೇ ಮೊದಲಾದ ಗಾಯನ ಮೇಳಗಳನ್ನು ಹಮ್ಮಿಕೊಳ್ಳಾಗಿತ್ತಲ್ಲ.. ಮೋಡಿಗೀಡಿಯಿವೇ ಮೊದಲಾದ ಮಾಯಮರಾಟಿ ಪ್ರದಕ್ಷನಗಳನ್ನು ಹಮ್ಮಿಕೊಳ್ಳಲಾಗಿತ್ತಲ್ಲ... ತಮ ತಮ್ಮ ಅಭಿರುಚಿಗನುಸಾರವಾಗಿ ಭಕುತಾದಿ ಮಂದಿ ಅಲ್ಲಿಗೆ ಹೋಗಿ ಬೆಳಕರಿಯೋ ಮಟ ಕೇಳೋದನು ಕೇಳಿ, ನೋಡೋದನು ನೋಡಿ... ಭಯ ಭಕುತಿಯಂಬ ಮೂಟೆಯನ್ನು ತಮ್ಮ ತಮ್ಮ ರುದಯಗಳೊಳಗೆ ಮಿಟುಕೊಂಡು ತಮ್ಮ ತಮ್ಮ ಮೂರು ಕಡೆಗೆ ಮುಖ ಮಾಡಿದರೆಂಬಲ್ಲಿಗೆ....