ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ನಾಲಗೆಯಿಂದ ನೆಕ್ಕಿತು. ತನ್ನ ಮೂಗಿನಿಂದ ಗಾಳಿ ವುದುರಿಸಿ ಆಕೆಯ ಸೆಕೆಯನ್ನು ಕಳೆಯಿತು. ಆ ಮಾತಾಯಿ ಅದರ ಮುಖವನ್ನು ತನ್ನೆದೆಗೆ ಎತ್ತಿಕೊಂಡು ನನ್ನ ಬಾಳೇವಿಂಗಾಗಿ ಬುಟ್ಟಯ್ತಲ್ಲಾ ಸೂರಾss” ಯಂದು ದುಕ್ಕ ತೋಡಿಕೊಂಡಳು... ಹೊತ್ತು ವುಗಳೊಳಗೆ ಸೇರೋದೂ, ಯಿಳಿದು ಮಾಡುತಲಿದ್ದಿತು. ಬುದ್ಧಿಭ್ರಮಣಾ ಆದಂಗಾಗಿ ಸೂರ ಪರಮಾತುಮನು ತನ್ನ ಪರಿಭ್ರಮಣದ ಹಾದಿಯನ್ನು ಪರಪಾಟು ಮಾಡಿಕೊಂಡಿದ್ದುದೇ ಅದಕ್ಕೆ ಕಾರಣ. ಕರುಣಾಂತರಂಗದ ಬೇಯಿನ ಮರವು ತನ್ನ ನೆರಳನ್ನು ಆಕೆಯತ್ತ ಬಾಚಲು ಹರ ಸಾಹಸ ಮಾಡುತಲಿದ್ದಿತು. ಪಕ್ಷಿಗಳು ಯಂಥಾಕಿಗೆ ಯಿಂಥಾ ದುರತಿ ವದಗಯ್ತಲ್ಲಾ ಯಂದು ರೋಧಿಸುತ ಹಾರುವುದನ್ನು ಮರೆತು ಅಲ್ಲಲ್ಲಿ ಕೂಕಂಡಿದ್ದವು. ಯಿಲಿಚೆನ್ನಗಳು, ಕೋಶಮ್ಮಗಳು ತಮ್ಮ ತಮ್ಮ ವಭಾವ ಮರತು ದುಕ್ಕ ಅನುಭೋಸುತಲಿದ್ದವು. ಮಕ್ಕಳು ಮರಿ ಯಿಲ್ಲದಿದ್ದರೇನಂತೆ, ಜಗ್ಗೂರೆವ್ವ ಪಸು ಪಕ್ಷಿ ಮರಗಿಡ ಮೊದಲಾದವುಗಳನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದುದೇ ಅದಕ್ಕೆ ಕಾರಣ. ವಂದು ತುತ್ತುಯಿನ್ನೊಂದಕ ಹಾಕದೆ ಯಿನ್ನೊಂದು ತುತ್ತು ವುಂಡಾಕೆಯಲ್ಲದ, ವಂದು ಗುಟುಕು ನೀರನ್ನು ಯಿನ್ನೊಂದಕ ಹಾಕದೆ ಗುಟುಕು ಕುಡುದಾರಿಯಲ್ಲದ ಜಗಲೂರೆವ್ವನ ದುಕ್ಕವನ್ನು ಸಚರಾಚರ ತನ್ನದೆಂದು ಭಾವನ ಮಾಡಿತು. ಈ ಹಿಂದಕ ಮುಂದಕ ಜರುಗದೆ ವಡಲೊಳಗಿನ ನೀರು ನಿಡಿ ಅಳ್ಳಾಡದಂತೆ ಆಕೆ ಕೂಕಂಡಿದ್ದ ಬಯಲೇನಿತ್ತು ಅದು ಯೀ ಕಾಲದ್ದಲ್ಲ. ಪುರಾತನ ಕಾಲದ್ದು. ಅಂಥಪ್ಪ ಮಹಿಮಾನ್ವಿತ ಜಾಗದಲ್ಲಿ ಕೂಕಂಡಿದ್ದ ಜಗಲೂರೆವ್ವ ಹಿಂದಕ ಜರುಗು ಯಂದರ ಹೆಂಗ ಹಿಂದಕ ಜರುಗ್ಯಾಳು? ಮುಂದಕ ಜರುಗು ಯಂದರ ಹೆಂಗ ಮುಂದಕ ಜರುಗ್ಯಾಳು? ಅಲ್ಲಿ ಹಿಂದು ಮುಂದು ಯಂಬೆರಡು ಮಾಯಾವಿ ಸಂಬಂಧಗಳ ನಡುವೆ ಅಂಥ ಪರುಕುಯಿರಲಿಲ್ಲ.. ನೆಲ ಆಕೇನ ಹಿಡಕೊಂಡಿತ್ತೋ, ಆಕೇನೆ ನೆಲವನ್ನು ಹಿಡಕೊಂಡಿದ್ದಳೋ... ವಟ್ಟಿನಲ್ಲಿ ಬುಡುಮೆ ಕಲ್ಲಿನಂಗ ನಿಚ್ಚಲ ಸ್ಥಿತೀಲಿ ಕೂಕಂಡಿದ್ದಳು. ದುಕ್ಕ ಮಾಡೋರು ಮಾಡಿದರೇನೇ ಚಂದ. ದುಕ್ಕ ಮಾಡೋ ಕಲೆ ಸಿದ್ದಿಸೋದು ಆಟು ಸುಲಭವಲ್ಲ... ಅದಕ್ಕೆ ಸಣ್ಣೂರಿದ್ದಾಗಲಿಂದಲೇ ಹೆತ್ತೋರಿಂದ, ಸುತ್ತಮುತ್ತಲಿನ ಪರಿಸರದಿಂದ ತಾಲೀಮು ಪಡೆದುಕೊಂಡಿರಬೇಕು, ನುರುಪಡಿ ಆಗಿರಬೇಕು, ಹಂಗಿದ್ದರೇನೆ ಅದು ಸಿದ್ದಿಸೋದು. ಆದರ ಜಗಲೂರೆವ್ವನ ಮುಖದಾಗ ದುಕ್ಕದ ವಂದೇ ವಂದು ಯಸಳನ್ನು ಕಂಡಿರೋರು ಥಳಗೇರಿ