ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೩೪ ಅರಮನೆ ಆಯುಷ್ಯದ ವಂದು ಭಾಗವನ್ನು ಧಾರೆಯೆರೆದು ಕೊಡಬೇಕಾಗತಯ್ಕೆ.. ಬೇಡ... ಬೇಡ.. ನಿಮ್ಮಿಂದ ನಿಮ್ಮ ಆಯುಷ್ಯವನ್ನು ನಷ್ಟ ಮಾಡೋಕೆ ನನ ಮನಸ್ಸು ವಸ್ತಾಯಿಲ್ಲ.. ನಿಮ್ಮ ಪಾಡಿಗೆ ನೀವು ನಿಶ್ಚಿಂತರಾಗಿರಿ. ಮುಂದೆ ಯೇನೇನು ಮಾಡಬೇಕೋ ಅದನ್ನು ಮಾಡಿರಿ. ನಾಳೆ ಸೂಯ್ಯೋದಯವಾದ ನಾಕನೇ ಆಯಾಮ ಶವ ಸಾಗಿಸಲು ಪ್ರಶಸ್ತಯಿರುವುದು. ಶವ ಸ್ಥಾನ ಬದಲು ಮಾಡಿದರ ದೋಷ ಪರಿಹಾರ ಆಗದೆ ಎಂದು ಹೇಳಿದನು. ಅದಕ್ಕೆ ಮೋಬುಳಾಚಾರರೂ ಸಮ್ಮತಿಸಿದರು. ಯಂಟರಮಣಾ ಗೋಯಿಂದಾ ಗೋಯಿಂದಾ ಯಂದು ಘೋಷ ಮಾಡುತ ಕಳೇಬರವನ್ನು ಮಹಲಿನ ಬೆನ್ನಗೋಡೆಗಂಟಿಸಿ ಸಿದಿಗೆ ಬಡಿಯಲಾಯಿತು. ಸಂಪ್ರದಾಯದಂತೆ ಪೂಜೆಯನ್ನು ಮಾಡಿ ಮುಗಿಸಲಾಯಿತು... ರಾಜಮಾತೆಯ ಗುಣಗಾನ ಮಾಡುತ ಅಳುವ ರುತ್ತಿವಂತ ಅಳೋರನ್ನು... ಚಾಮರಸೇವೆ ಮಾಡೋರನ್ನು... ಭಜನೆ ಮಾಡೋರನ್ನು... ಗರೂಢ ಪುರಾಣ ಮೋದೋರನ್ನು... ಅವರವರ ಘನತೆಗೆ ತಕ್ಕಂತೆ ವುಚಿತೋಚಿತ ಜಾಗಗಳಲ್ಲಿ ಕುಂದ್ರಿಸಲಾಯಿತು. ದೀವಟಿಗೆ ಹಟ್ಟೋರನ್ನು, ವಾಲಗ ಮೊದೋರನ್ನು. ಬಡಿಯೋರನ್ನು ಭಾರಿಸೋರನ್ನು... ಪಟಾಕಿ ಹಚ್ಚರನ್ನು.. ಕಾಲಬುಡಕ ಸೀರೆ ಸೆರಗು ಹಾಸೋರನ್ನು.. ಧಯರ ಕಳೆಯುವವರನ್ನು.. ಧಂತರ ತುಂಬುವವರನ್ನು.. ಲಗೂನ ಕರೆತರಲು ಯೋಗ್ಯರಾದವರನ್ನು ದಿಕ್ಕುದಿಕ್ಕಿಗೆ ಕಳಿಸಲಾಯಿತು.... ಅಗೋ ಅಲ್ಲಿ ಸೂಯ್ಯ ಮುಳಗಲಕ.. ಯಗೋ ಯಿಲ್ಲಿ ಚಂದ್ರಹುಟ್ಟಲಕ... ಅವರಿಬ್ಬರ ನಡುವೆ ಕುಜ ಮಾಶಯನು ಮೂಡಣದ ಮುಗುಲು ನೆಮ್ಯಾಲ ರವರನ್ಫೋಟೆ ಕಣ್ಣು ಬಿಚ್ಚುತ್ತಿರುವಾಗ್ಗೆ... ಅತ್ತ ಯಡ್ಡವರು ದಂಪತಿಗಳು ವಂಚೂರಾರ ಅನುವು ಆಪತ್ತುಗಳಿಗೆ ಭಾಜನರಾಗದೆ ಯಿಲ್ಲಿ ಯಿದನು ನೋಡುತ, ಅಲ್ಲಿ ಅದನ್ನು ನೋಡುತ ತಿಂಗಳ ದಿನಮಾನ ಪ್ರಯಾಣ ಮಾಡೀ ಮಾಡೀ ಕಡೇಕ ವಂದಿವಸ ಕೊಂಗನಾಡಿಗ್ಗಧಿಕ ಯನಿಸಿದ್ದ ವೆಲ್ಲೂರು ಪಟ್ಟಣವನ್ನು ಸೇರಿಕೊಂಡು ಯಿಸ್ರಾಂತಿ ಪಡಕಂತಿರುವಾಗ್ಗೆ... ಅತ್ಯ, ಮನೋ ಸಾಹೇಬನು ಯಿಕ್ರಮಿಸಿಕೊಂಡಿದ್ದ ನರಸಿಮ್ಮಾರೆಡ್ಡಿಯ ಆಮಂತ್ರಣದ ಮೇರೆಗೆ ವುರಾಲವಾಡ ತಲುಪಿ ವಂಭರೂರಾ