ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಬಂದು 'ತಾಯೇ.. ನಿನ ಗಂಡ ಮೋಬಯ್ಯ ತನ್ನ ಸರೀರದೊಳಗೆ ಅದಾನೋ ಯಿಲ್ಲವೋ... ಆದರೆ ನೀನು ಜ್ಞಾಪಾನ ಜತುನ ಮಾಡಿದ್ದ ಆ ಸರೀರದೊಳಗೆ ಸಾಂಬವಿಯಿರೋದಂತು ನಮಗ ಖಾತರಿ ಆಗಯ್ತಿ.. ಹಿರೇ ಮನುಶೋಳಾದ ನೀನು ವಸ್ತಿಯ ಸೇವೆ ಮಾಡಿಕೊಂಡಿರಬೇಕವ್ವಾ.. ಹಂಗ ಮಾಡಿದರೆ ನಿನಗ ಪುಣ್ಯ ಭಾಗ್ಯ ಪ್ರಾಪ್ತಿ ಆಗತಯ್ಯವ್ವಾ.. ಯದೆಗುಂದ ಬ್ಯಾಡ ತಾಯಿ.. ಯಾ ಸರೀರ ಯಾರಿಗೆ ಸಾಸುವತ ಹೇಳು.. ನಾಳೆ ಹೋಗೋದು ಯಿಂದೇ ತಾಯಿ ಪಾದಕ್ಕರುಪಿತವಾದರ ಯಾಕ ಯಸನ ಮಾಡಬೇಕು, ನೀನು ನಿನಗಂಡನೊಟ್ಟಿಗೆ ಅಜರಾಮರವಾಗುತ್ತೀ.. ಸೂರ ಚಂದ್ರಾಮರಿರೋಗಂಟಾ ಲೋಕ ನಿನ್ನ ಕೊಂಡಾಡದವ್ವಾ.” ಯಂದು ತುಂಬಿದ ಕೊಡದಂಗ ನಾಕು ಮಾತುಗಳನ್ನಾಡಿ ಹೋದನು. ಕುಕ್ಕುರು ಗಾಲೀಲೆ ಕೂಕಂಡು ಗಂಡನ ಸರೀರವನ್ನು ದಿಟ್ಟಿಸುತಲಿದ್ದ ಆಕೆ ದುಸುರಾ ಮಾತಾಡದಿದ್ದರೂss ಪಟ್ಟಣ ಯಂಬುದು ಪಟ್ಟಣವಾ.. ಹೆಜೇನು ಗೂಡಾ... ಯಂಬಂತಾಗಿ ಬಿಟ್ಟಿತ್ತು ಸಿವನೆ, ಯಿನ್ನೊಂದೆಲ್ಲು ನಾಲಗೆಗಳನ ಆ ದೇವರು ತಮಗೆ ಕೊಟ್ಟಿದ್ದರ ಯೇಟು ಪಾಡಿತ್ತು ಅಂದಕಂತಾರೆ ಜನ ಸೀವನss.. ಮೋಬಯ್ಯನ ವರಮಾನವು ಸುಡೋ ತುಪ್ಪದುಂಡೆಯಂಗ ಹಿಂದಕ ಹೊಳ್ಳದಂಗ ಮುಂದಕೂ ಹೊಳದಂಗ ವಬ್ಬೊಬ್ಬರ ಗಂಟಲ ಜೆಗೇವಲ್ಲಿ ಚಕ್ಕಳ ಮುಕ್ಕಳ ಹಾಕ್ಕೊಂಡು ಕುಂತು ಬಿಟ್ಟಿತ್ತು ಸೀವನೇ.. ಅವರ ಪಯ್ಕೆ, ಮೋಬಯ್ಯನನ್ನು ನೋಡಿದೋರಿದ್ದರು, ನೋಡಿರದೋರಿದ್ದರು. ಅವ ಯಾರಪಾ ಅಂದರ.. ಅವ ಯಿವ ಯಿದ್ದಂಗ ಯಿದ್ದನಲ್ಲಾ. ಯವ ಅವ ಯಿದ್ದಂಗ ಯಿದ್ದನಲ್ಲಾ.. ಮೊಂಡು ಮೂಗು ಬಟ್ಟೆಕಾಯಂಗಯ್ತಲ್ಲಾ.. ಕವಳೆ ಹಣ್ಣಿನಂಗ ಕಣ್ಣು ಅದಾವಲ್ಲಾ... ದವಡೆಲುವುಗಳು ಚಾಚಿಕೊಂಡು ಮುಂದಕ ಬಂದಾವಲ್ಲ.. ಹಣೆ ಬುರುಬುರಾಂತ ಮೂದಿ ಮುಂದ ಹೊಂಟಯ್ತಲ್ಲಾ... ಕಸಬಾರಿಗೆ ಚುಂಗಿನೋಟು ಮೀಸೆ ಬುಟ್ಟಿದ್ರಲ್ಲಾ.. ಕುತ್ತಿಗೆ ಹಿಂದ ಚುಂಡೇನ ಕಟ್ಟಿದ್ದನಲ್ಲಾ.. ನೂರು ಮಾತಾಡಿದೋರೆದುರು ಹತೇ ಹತ್ತು ಮಾತಾಡ್ತಿದ್ದನಲ್ಲಾ.. ಹತ್ತು ಮಾತಾಡಿದೋರೆದುರು ವಂದೇ ವಂದು ಮಾತಾಡ್ತಿದ್ದನಲ್ಲಾ.. ಮಕ್ಕು ಮರಿಮ್ಯಾಲ ಬಲು ಜೀವ ಮಿಟುಕೊಂಡಿದ್ದನಲ್ಲಾ. ಅಕ್ರೋರಾ.. ತಂಗೋರಾ ಅಂತಿದ್ದನಲ್ಲಾ.. ಚೀಗ ದೊಡ್ಡಮ್ಮಾ ಅಂತಿದ್ದನಲ್ಲಾ.. ಅಣೋರ ತಮೋರಾ ಅಂತಿದ್ದನಲ್ಲಾ.. ಹೊತ್ತುಟ್ಟುತ್ತಲೆ ಲಟಗೂ ಪುಟುಗೂ ಹೆಜ್ಜೆ ಹಾಕುತ ಅರಮನೆಗೆ ಕಡೇಕ ಹೋಯ್ತಿದ್ದನಲ್ಲಾ.. ಮುದೇಕಿ ಭದ್ರಮ್ಮವ್ವನ