ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬೪ ಅರಮನೆ 'ಯಲ್ಲಿ ರಾತಿರಿ ಬರುತೀಯೋ ಅಂತಂದುಕಂತಿದ್ದೆನಪ್ಪಾ.. ಅಂತು ಮಟ ಮಟ ಮದ್ಯಾಣ ಬಂದೀಯಲ್ಲಪ್ಪಾ.. ಬೂದುಕೀ ಬೊದುಕೀ ಯೀ ಜೀವ ಬಲು ರೋಸಯ್ತಿ ತಂದೆ, ತಗೊಂಡೊಯ್ದುಬಿಡಪ್ಪ' ಯಂದಂತು. ಅದಕಿದ್ದು ಆತನು “ಛೇ.. ನಾನು ಜವರಾಯ ಅಲ್ಲಭೇ.. ನಿನ್ ಮರಿ ಮೊಮ್ಮಗ ವಾಲಿಕಾರ ವಾಲಾಡಯ್ಯ ಭೇ” ಯಂದು ಗುರುತ ಮಾಡಿಕೊಟ್ಟನು. “ಹಾ... ನೀನು ನನ್ನಾಟಗಳ್ಳ ವಾಲಾಡಿಸ್ಕೋನು? ನಾನವನಂದುಕಂಡಿದ್ದೆನೆಲೋ.. ಯಾಕ ಬಂದೀಯಲೋ?” ಯಂದು ಕೇಳಿದ್ದಕ್ಕೆ ಅವಯ್ಯನು “ಛೇ.. ನಿನಗ ಜಾಬು ಬಂದಯ್ಕೆ ಭೇss ಜಾಬು” ಯಂದು ವಂದು ಸುರುಳಿಯನ್ನು ಅದರ ಕಣ್ಣಳತೆಯಲ್ಲಿ ಝಳಪಿಸಿದನು. “ಹಾ... ಜಾಬು ಬಂದಯ್ತಾ ನನಗ.. ಯಲ್ಲಿಂದ ಬಂದಯ್ತಪ್ಪಾ? ಯಾವಾತನಿಂದ ಬಂದಯ್ತಪ್ಪಾ.? ಕೊಡಿ.... ಕೊಡಿಲ್ಲಿ” ಯಂದದನ್ನು ಕಯ್ದೆ ಯಿಸಗಂತು. ಆ ಜಾಬಿನ ಸ್ವರುಸದ ಮಯ್ಯೋ ಯಂಬಂತೆ ಹರೇದ ಹುಡುಗಿ ಹಂಗ ದಡಕ್ಕನೆ ಯದ್ದು ಕುಂತಗಂತು. ತಾನು ಮಾ ಸಾನುಭೋಗಿ ಯಂಬಂತೆ ನಾಕು ಮಡಕೆಯಿದ್ದ ಅದನ್ನು ಬಿಚ್ಚಿ ಕಣ್ಣಿಗಳಕೊಂಡು ಮೋದಲುಪಕ್ರಮಿಸಿತು. ಅದರಲ್ಲಿದ್ದ ಅಕ್ಷರಗಳು ಅದೇ ಯಿನ್ನು ರುತುಮತಿಯಾದ ಹರೇದ ಹುಡುಗಿಯರಂಗೆ ನಸುನಾಚುತ ಪುರದ ಪಡಸಾಲೆಯಿಂದಿಳಿಯೋದು.. ಅದರ ಕಣ್ಣಂಗಳಕ ಹೋಗದು, ಮರಳೋದು ಮಾಡಲಾರಂಭಿಸಿದವು.. ಅಕ್ಷರಗಳು ತಮ್ಮ ನಯನಾಜೂಕು ಸರೀರದಿಂದ ಕಸುವನ್ನು ಧಾರೆಯರೆದವು ಅದಕ್ಕೆ ಸಲ್ಲೇಖನ ರೂತ ಹಿಡಿದು ತುರೀಯಾವಸ್ತೆ ತಲುಪಿದ್ದ ಜಯ ಮುನಿಯಂಗಿದ್ದ ಅದು ದಿಗ್ಗನೆ ಯದ್ದು ಕೂಕಂಡಿದ್ದಾಗಲೀ... ಸರಿಡನ್ನ ಯದ್ದು ನಿಂತು ಕಾಮನ ಬಿಲ್ಲಿನಂಗಾದದ್ದಾಗಲೀ ತಡಾಗಲಿಲ್ಲ.... ದಂಡಿನಲ್ಲಿ ರ ಕಾಳಗಂನಿಂದ ಬಂದಿರುವುದೆ, ಮತ್ತಾರಿಂದಲಾದರೂ ಬಂದಿರುವುದೋ, ಅದರೊಳಗಿನ ಸಮಾಸ್ತಾರ ಸಂಗತಿಯೇನುಂಟು ಯೇನಿಲ್ಲ ಯಂಬುದನ್ನು ತಿಳಕೊಳ್ಳೋ ಸಲುವಾಗಿ.. ಅವನು ಫಲಾನ ಯಂಥ ದಿವಸ ಬಂದರೆ ಕಣ್ಣು ತುಂಬ ನೋಡಿ ಲಟ್ಟಿಗೆ ತೆಗೆದು ಗಪ್ಪಂತ ಪ್ರಾಣ ಬಿಡುವ ಸಲುವಾಗಿ.. ಹರೇದ ಹುಡುಗಿಯಂತಾಗಿಬಿಡುವ ಸಲುವಾಗಿ... ಗಾವಾದ ಒಳ್ಳೆಯಂಬ ಗೂಟಕ ಕಾಳಗಯ್ಯ ಯಂಬುವ ಹರೇದ ಹೋರಿಯನ್ನು ಕಟ್ಟಿಹಾಕುವ ಸಲುವಾಗಿ.. ಅವನ ಹೊಟ್ಟೇಲಿ ಹತ್ತಿಪ್ಪತ್ತು ಮಕ್ಕಳುಮರಿಗಳನು ಕಾಣುವ ಸಲುವಾಗಿ.. ಅವುಗಳನು ಯತ್ತಿ ಆಡಿಸುವ