ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೭೮ ಅರಮನೆ ಅಕ್ಕಸರ ಪತ್ತೆಯಿಲ್ಲದಂಗಾಯಿತಲ್ಲಾ ಭಾಷೆ ಪತ್ತೆಯಿಲ್ಲದಾಂಗಾಯಿತಲ್ಲಾ.. ನಡೆನುಡಿ ಆಚಾರ ಯಿಚಾರ ರೂತ ನೇಮಗಳೆಲ್ಲ ಪತ್ತೆಯಾಗದಾಂಗಾಯಿತಲ್ಲಾ ಯಂದು ದ್ಯಾವಾನುದೇವತೆಗಳು ಯಸನ ಮಾಡತೊಡಗಿದರಂತೆ.. ಹಿಂಗಾದರ ತಮ ಗತಿ ಹೆಂಗ ಅಂತ ಕೇಳಿಕೋತ ಬಂದ ಅವರಿಗೆ ತ್ರಿಮೂರಿಗಳು ಸರಸೊತ್ತಮ್ಮನ್ನ ಕೇಳೀರಿ ಅಂದರಂತೆ. ಅದರಂಗ ಅವರು ಯಿದ್ಯಾಲೋಕಕ ಹೋದರಂತೆ... ಅಲ್ಲಿ ಚರುಮ ಸುಕ್ಕುಗಟ್ಟಿ. ಕಣ್ಣುಗುಳಿ ಬಿದ್ದು.. ತಲೆಯೂ ಬೆಳ್ಳಂ ಬೆಳ್ಳಗಾಗಿ.. ಬೆನ್ನು ಮುರುಕು ಬಿಲ್ಲಿನಂಗಾಗಿ ಅಕಾಲಿಕ ರುದ್ಯಾಪ್ಯ ತಗುಲಿ ಮುಪ್ಪಾನು ಮುದುಕಿಯೇ ಸರಸೊತಮ್ಮ ಯಂದು ನಂಬಲಾಗಲಿಲ್ಲವಂತವರಿಗೆ, ಆಕೆಯ ದುಸ್ಥಿತಿ ಕಂಡು ಮಮ್ಮಲನ ಮರುಗಿದರಂತೆ. ಯಾಕ ನೀನ ಹಿಂಗಾಗಿರುವಿ ಯಂದು ಪರಾಂಬರಿಸಿದ ಅವರಿಗೆ ಕುದುರೆಡವು ಕಡೆ ಬೊಟ್ಟು ಮಾಡಿ ತೋರಿಸುತ ಯಿದ್ಯೆಯ ಮ್ಯಾಲ ಸಾಂಬವಿ ಮುನುಸುಕೊಂಡವಳರಯ್ಯಾ ಹೊತಾ ಹೋಗಿ ಆಕೇನ ಕೇಳಿಕೊಳ್ಳಿಯಂದಳಂತೆ.... - ಯಿದರ ಕಾಲಾಗಾ ಯೇನಾದೀತು ಹೋಗಿ ಕೇಳೇ ಬಿಡುತೇವಿ ಯಂದು ನಿಲ್ದಾರ ಮಾಡಿ ಸುರಲೋಕದ ಮಂದಿ ಭೂಲೋಕಕ ಬಂದು ಸಾಂಬವೀನ ಕಂಡು “ಯಾಕ ತಾಯಿ? ಯಾಕ ಅಕ್ಕಸರ ಸಂಪತ್ತನ ನುಂಗಿ ನೀರು ಕುಡಿದಿರುವಿ” ಯಂದು ಕೇಳಿದ್ದಕ್ಕೆ ಆಕೆಯು “ನನಕಂದಯ್ಯಗ ವಲಿಯದ ಅಕ್ಕಸರಗಳು ನಿಮಗೊಂದೆ ಯಾಕಿರಬೇಕರಯ್ಯಾ? ಸುಮಕ ಹೊಂಟೋತೀರೋ ಯಿಲ್ಲಾ ನಿಮ್ಮನ್ನೂ ನುಂಗಿ ಬಿಡಲೋ” ಯಂದು ಗುಡಿಗಿದಳಂತೆ.. ಅದಕ ಮುಕಳಿ ಬಾಯಿ ಮುಚ್ಕೊಂಡು ದೇವತೆಗಳು ವಾಪಾಸಾಗಿ ತ್ರಿಮೂರಿಗಳನು ಕಂಡು “ನೀವೆ ಯಿದಕ ಯೇನಾದರೊಂದು ಯೇರುಪಾಡು ಮಾಡಿರಿ ತಂದೆ ಗೋಳಾ” ಯಂದು ಅತ್ತು ಕರೆದರಂತೆ.. ಅದಕ ಮನ ಕರಗಿ ತ್ರಿಮೂರಿಗಳು ರಾಯಲು ಸೀಮೆ ಯಂಗ ಬರ ಬಿದ್ದು ಸೀದು ಹೋಗಿದ್ದ ಯಿದ್ಯಾಲೋಕಕ ಹೋಗಿ ಯಿದ್ಯಾಧಿದೇವತೆಯ ದಯನಾವಸ್ಥೆಗೆ ಮರುಗಿ ಆಕೆಯ ಸರೀರಕ್ಕೆ ರಮೋಟು ಸಗುತಿ ತುಂಬಿ “ಅಮ್ಮೋsಸರುಸ್ತೋತಮ್ಮಾ ಯೋಗಿಂದೀಗಲೆ ನೀನು ಭೂಲೋಕಕ ಹೋಗಿ ಸಾಂಬವಿಯ ಮನವಲಿಸಿ ಅಕ್ಕಸರಗಳನ ಭಾವನೆಗಳನ ಬಿಡುಗಡೆ ಮಾಡಿ ಬಾರವ್ವಾ” ಯಂದು ಕೇಳಿಕೊಂಡಿದ್ದಕ್ಕೆ ಆಕೆಯು ಆಗಲರಪ್ಪಾ ಯಂದು ಕುದುರೆಡವಿಗೆ ಸಾಂಬವೀನ ಕಂಡು “ಆದಿಸಗುತಿಯೇ ಹೇಳುತ್ತೇನೆ