ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೮೩ ಜನುಮಕೂ, ನಿನ್ನ ರೂಪವೇ ಸುರಾಪಾನ ಯಂಬಿವೇ ಮೊದಲಾದ ಸಹಸ್ತಸಂಖ್ಯೆಯಲ್ಲಿದ್ದವು. ಸಾಂಬವಿ ಹಂಟುಬನ್ನಿ ಯಂದು ಸುಗ್ರೀವಾಗ್ನಿ ಮಾಡುತ್ತಲೇ ಅವು ಹೆನ್ರಿಯ ಸರೀರ ಮತ್ತು ಮನಸ್ಸಿನಿಂದ ಪಯಣ ಹೊಂಟು ಬಿಟ್ಟಿದ್ದವಷ್ಟೆ, ಭೂಸಂಖ್ಯಾತ ಆಂಗ್ಲ ಭಾಷೆಯ ಅಕ್ಕಸರ ಸಬುಧ ಭಾವನೆಗಳೊಂದಿಗೆ ಯೇಗಿ ಯೋಗೀ ಅವಕೂ ಸಾಕಾಗಿತ್ತು ಬೇರೆ. ಸಾಂಬವಿಯ ಸರೀರದೊಳಗ ವಂದು ಮೂಲೆಯಲ್ಲಿ ಅವು ಅಯಿಷಾರಾಮಿ ರೀತಿಯಲ್ಲಿ ವುಳುಕೊಂಡುಬಿಟ್ಟವು. ಸರಸೋತಿಯ ಯಿನ್ನಪದ ಮೇರೆಗೆ ಜಗದಂಬೆಯು ಬಿಡುಗಡೆಯ ಆಗ್ನೆ ನೀಡಲು ಅವು ಅಡಲ್ಲಾಗಿ ಹೋದವು. ವಲ್ಲದ ಮನಸ್ಸಿನಿಂದ ಹೊರ ಹೊಂಡುವ ಹೊತ್ತಿಗೆ ಕಾಲ ಮೀರಿತ್ತು. ಹರಟೆ ಕೊಚ್ಚುತ್ತ, ಪ್ರಕೃತಿಯ ಸಹಜ ಸವುಂದರವನ್ನು ಸವಿಯುತ್ತ ತಮ್ಮ ಬಿಡದಿ ಯಾವುದಿರಬವುದೆಂದು ಪರಪಾಟು ಅನುಭವಿಸಿದವು. ಅವು ಹಂಗೆ ತಿರುಗಾಡಿಕೋತ, ತಿರುಗಾಡಿತ ಅದೇ ಕಾಸರಕನಡವೇಲಿ ಬೀಡು ಬಿಟ್ಟಿದ್ದವು. ತಾವು ಯಾವುದಾದರೊಂದು ಪ್ರಾಣಿಯ ಸರೀರದಲ್ಲಿ ಮನಸಿನಲ್ಲಿ ಆಶ್ರಯ ಪಡೆಯಲಕೇ ಬೇಕು, ಯಿಲ್ಲವಾದರೆ ತಮಗೆ ವುಳಿಗಾಲವಿಲ್ಲ ಯಂದು ಮುಂತಾಗಿ ಯೋಚಿಸುತಲಿದ್ದ ಅವುಗಳ ಕಣ್ಣಿಗೆ ಆಹಾರಕ್ಕಾಗಿ ಹುಡುಕಾಟ ನಡೆಸುತಲಿದ್ದ ಅಂಜಣಿ ಕಣ್ಣಿಗೆ ಬಿತ್ತು. ಅಗೋ ಆ ಚುತುಷಾದಿಯೊಳಗೆ ಸೇರಿಕೊಳ್ಳೋಣವೇ ಯಂದು ಮುಖಂಡನಾದ ಪ್ರೇಮವು ಹೇಳಿತು. ಹೋಗಿ ಹೋಗಿ ಆ ಮಂಗನಲ್ಲಿ ಆಶ್ರಯ ಪಡೆವುದೇ ಯಂದು ಕಾಮ ಸಲ್ಲಾಪ, ರುದಯಮಂದಿರವೇ ಮೊದಲಾದ ಸದಸ್ಯರು ತಕರಾರು ಹತ್ತಿದವು. ಅದಕುತ್ತರವಾಗಿ ಪ್ರೇಮವು “ಚತುಷ್ಪಾದಿಯೋ.. ದ್ವಿಪಾದಿಯೋ? ನಮಗೆ ಮಾನವರೇ ಆಗಬೇಕೆಂದಿಲ್ಲ ಕಣರಯ್ಯಾ.. ನಮ್ಮನ್ನು ಚತುಷ್ಪಾದಿಗಳು ನೋಡಿಕೊಳ್ಳುವಷ್ಟು ಪ್ರೀತಿಯಿಂದ ಮಾನವರು ನೋಡಿಕೊಳ್ಳುವುದಿಲ್ಲ ಯಂಬುದನ್ನು ಮರೆಯಬ್ಯಾಡಿರಿ. ಅದಲ್ಲದೆ ನಮಗೆ ತುತ್ತಾಗಿ ಯಾವುದಾದರೊಂದು ಬಿಡದಿ ಬೇಕಾಗಿರುವುದು. ಯಿಲ್ಲದಿದ್ದಲ್ಲಿ ನಮಗೆ ವುಳಿಗಾಲ ಯಿಲ್ಲ ವಪ್ಪಿಕೊಳ್ಳಿರಿ” ಯಂದು ತಮ್ಮ ಯಿಷಮ ಪರಿಸ್ಥಿತಿಯನ್ನು ಮನೋಗ್ನವಾಗಿ ಯಿವರಿಸಿ ಅವರನ್ನೆಲ್ಲ ವಪ್ಪಿಸಿತು. ಸೇರಿಕೊಳ್ಳುವುದಾದರೂ ಹೆಂಗೆ? ತಮ್ಮ ಅದ್ರುಸ್ತಮೋ ಯಂಬಂತೆ ಅದು ಆಹಾರಕ್ಕಾಗಿ ಹುಡುಕಾಟ ನಡೆಸಿರುವುದು. ಅಗೋ ಅಲ್ಲಿ ಕೆಂಪಗೆ ಥಳಥಳ ಹೊಳೆ ಯುತ್ತಿರುವ ಕಾರೆಹಣ್ಣುಗಳೊಳಗೆ....ತಡಮಾಡದೆ ಅವೆಲ್ಲ ಆ ಕೂಡಲೆ ಕಾರೆ ಹಣ್ಣುಗಳಲ್ಲಿ