ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೫೬ ಅರಮನೆ ಮುಂದಿನದನು ಹೆಂಗ ಹೇಳುವುದಪ್ಪಾ ಸಿವನೆ.. ಹೇಳದೆಯಿರುವುದಾದರೂ ಹೆಂಗೆ? ಪ್ರಸೂತಿ ಗುಹದ ನವರಂಧ್ರಗಳಿಂದ ಸಣಕಂದಮ್ಮನೊಂದು ಅಮೈss ಅನ್ನೊ ಯಂದು ಅಳಲಾರಂಭಿಸಿದ ನಾದಕ್ಕ.. ದ್ಯಾವುದೇ ಬಂಗಾರದಂಥ ಬಾಣಂತೀನ ಕಸಗೊಂಡು ಬಿಟ್ಟೆಯಲ್ಲಾ ಯಂಬ ದುಕ್ಕದ ನಾದವು ಜೊತೆಗೂಡಿ ಪ್ರವಹಿಸಲಾರಂಭಿಸಿದೊಡನೆ.... ಊ ಘನಘೋರ ಸುದ್ದಿ ದಾವಾನಲದೊಲು ಸುತ್ತನ್ನಾಕಡೇಕ ಹಬ್ಬಿದ್ದಾಗಲೀ, ಸುತ್ತಮುತ್ತ ಹತ್ತಿಪ್ಪತ್ತು ಪಾಸಲೆಯೊಳಗಿದ್ದ ಮಂದಿ ದುಕ್ಕದ ನೂರಾರು ನದಿ ಹಳ್ಳ ಹೊಳೆಗಳಂತೆ ಸದರಿ ಪಟ್ಟಣಕ್ಕೆ. ಹರಕೋತ ಹರಕೋತ ಬಂದಿದ್ದಾಗಲೇ ತಡಾ ಆಗಲಿಲ್ಲ... ಮಾಮೂಲು ಮಂದಿಯೊಂದೇ ಅಲ್ಲದೆ ಕುರುಗೋಡು, ಬಲಕುಂದಿ, ಗುಡೇಕೋಟೆ ಯಿವೇ ಮೊದಲಾದ ಛಪ್ಪನ್ನಾರು ದೇಸಯಿದೇಸಗಳೊಳಗ ಸುಖ ಸಂಕಥಾ ಯಿನೋದದಿಂದ ತಮ್ಮ ತಮ್ಮ ಸಮುಸ್ಥಾನಗಳನ್ನು ಪರಿಪಾಲಿಸುತಲಿದ್ದ ರಾಜ ಮಾರಾಜರುಗಳೆಲ್ಲ ತಮ್ಮ ತಮ್ಮ ದೋತರಗಳನು ಸರಿಪಡಿಸಿಕೊಳ್ಳುತಲೂ.. ತಂಜಲುಗಯಿಗಳನು ವುತ್ತರೀಯಗಳಿಗೆ ವರೆಸಿಕೊಳ್ಳುತಲೂ.. ತಮ್ಮ ತಮ್ಮ ಬಾಯಿಗಳೊಳಗಿನ ತೊಂಬಲ ದುಂಡೆಗಳನು ವಂದೊಂದು ಫರಲಾಂಗಿ ಗೊಂದೊಂದರಂತೆ ವುಗುಳುತಲೂ.. ಹಾದಿಗಳನು ಸವೆಸುತಲೂ ಪ್ಲಾ.. ಹಾ.. ಅನುವಷ್ಟರಲ್ಲಿ ಸದರಿ ಪಟ್ಟಣವನ್ನು ಸೇರಿಕೊಂಡು ಬಿಟ್ಟರು ನನ್ನಯ್ಯಾ.. ತಮ್ಮ ತಮ್ಮ ರುದಯದ ಜಗುಲಿಯ ಮ್ಯಾಲ ಚಿನ್ನಾಸಾನಿಯ ರೂಪಾರವಿಂದವನು ಯಿಟ್ಟು ತ್ರಿಕಾಲ ಪೂಜೆ ಮಾಡುತಲಿದ್ದ ಭಗ್ನ ಪ್ರೇಮಿಗಳೆಲ್ಲ ಸರಯೇಗದಲ್ಲಿ ಬಂದು ಸೇರಿಕೊಂಡ ಪರಿಣಾಮವಾಗಿ ರೆಪ್ಪೆ ಮಿಸುಕಾಡಿಸುವುದರೊಳಗ ಡಣಾಪುರ ಪಟ್ಟಣಕ ಪಟ್ಟಣವು 'ದುಕ್ಕದ ಬಹುದೊಡ್ಡ ಯಿಸುವ ಯಿದ್ಯಾಲಯವೇ' ಆಗಿಬಿಟ್ಟಿತು ಸಿವನೇ... ರೊಟ್ಟಿ ಸುಡುವ ಕೊಣಗೆಯ್ಯೋಟಗಲದ ಡಣಾಪುರ ಲಕ್ಕುಸ ಲಕ್ಕುಸ ಮಂದಿಯ ಕಾಲೇಟಿಗೆ ತತ್ತರಿಸಲಾರಂಭಿಸಿತು. ಕಾಲ್ತುಳಿತಕ್ಕೆ ಸಿಕ್ಕು ಸಾಯಲಾರಂಭಿ ಸಿದ ವಿಷ.. ಬತೇರಿಗಳಿ೦ದುರುಳಿ ಸಾಯಲಾರಂಭಿಸಿದವರೆಷ್ಟೋ... ಸಾಂಯಲಕ ತಡಕಾಡಲಾರಂಭಿಸಿದವರೆಷ್ಟೋ... ಯಿನು ಯಿನ್ನೂ ಅಳಲಕ... ಅತ್ತು ಅತ್ತುದುಕ್ಕ ಮಾಡಲಕ ತ್ರಾಣಕೊಡು ಪರಮಾತುಮಾ ಯಂದು ಬೇಡಿಕೊಳ್ಳಲಾರಂಭಿಸಿದವರೆಷ್ಟೋ... ಸಮಸ್ತ ಜಲಧಿಯನ್ನು ತಮ್ಮ ಕಷ್ಟೊಳಗ ತುಂಬು ಸಿವನೇ, ತಮ್ಮೆದೆಯೊಳಗಿನ ದುಕ್ಕದ