ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ರ್& ವಂದು ಮಸೀದಿಗಳಲ್ಲಿ.. ಸಿವ ಸಿವಾ.. ಯೇನು ಹೇಳುವುದಾ ಸೀಮೆಯ ಕಥೆಯಾ.. ಹಿಂದೊಮ್ಮೆ ಮಂಥೋಳ ಸಾಹೇಬನು ಆ ಪಟ್ಟಣದೊಳಗ ' ಕೋಮು ಸವ್ವಾರ ಸಮಾಯೇಸ' ಯೇಲ್ಪಾಡು ಮಾಡಿ ರಾಮರಹೀಮ ಯೇಸು ಕಿರಸ್ತ ಭಗವಂತನ ಮೂರು ರೂಪಗಳು ಕಾಣಿರಯ್ಯಾss ಯಂದು ಮುಂತಾಗಿ ಭಾಷಣ ಮಾಡಿ ಆ ಯಲ್ಲಾ ಕೋಮುಗಳ ನಡುವೆ ವಪ್ಪಂದ ಮಾಡಿದ್ದನು. ಅವರೆಲ್ಲ ಆಗಲಿ ದೊರೆಯೇ ಬಂದಿದ್ದರು. ವಂದೆರಡು ವರುಷ ಆ ಸೀಮೆಯೊಳಗ ಯಾವುದೇ ಜಗಳ ತಾಪತ್ರಯ ಯಿರಲಿಲ್ಲ. ಯೀಗ ಬಂದಿರೋ ಸಮಾಚಾರ ಪ್ರಕಾರss.. ಸಿವ ಸಂಕರ ಮಾದೇವಾss .. ಅತ್ತ ಡಣಾಪುರದೊಳಗೆ ನಡೆಯುತಲಿದ್ದ ಯಿದ್ಯಾಮಾನಂಗಳ ಯಾವ ಬಾಯನ ಯಿಟುಕೊಂಡು ಹೆಂಗ ಹೇಳಲಿ ಸಿವನೆ ಹೇಳದೆ ಹೆಂಗ ಯಿರಲಿ ಸಿವನೇ ........ ಘನಸ್ತೆ ಸೊಸೆಯನ್ನು ಮಣ್ಣು ಮಾಡಿದ ಲಾಗಾಯ್ತು. ಯಿದ್ದೋದ್ದ ಮಗಚಿತೆಯೊಳಗ ಧಗಧಗಾಂತ ವುರಿದು ಸುಟ್ಟು ಭಸುಮವಾದ ಲಾಗಾಯ್ತು.. ಡಣಾಪುರದ ಅರಮನೆಯೊಳಗಾಗಲೀ ಪಟ್ಟಣದ ಮನೆ ಮನೆಯೊಳಗಾಗಲೀ ಬ್ಯೂಸೋ ದಿವಸಂಗಳ ಪರ್ಯಂತ ನಿಲುಕಡಿ ಯಿರಲಿಲ್ಲ.. ಆಕಿ ತಮ್ಮ ಯದುರಿಗೆ ನಿಂತಂಗಾತು? ತಮ್ಮ ಜೋಡಿ ನಕ್ಕೋತ ಕೆಲಕೋತ ಕುಂತಂಗಾತು, ಆಕಿ ಮೋಡೋಡಿ ಬಂದು ತಮ್ಮ ತೊಡಿ ಮಾಲಿನ ಕೂಸನ ಕಸಗೊಂಡು ಯದೀಗ ಹಾಕ್ಕೊಂಡಂಗಾತು.. ಅಂತಂತ ಅಂಬುತ್ತಿದ್ದವರಿಗಲ್ಲಿ ಬರಯಿರಲಿಲ್ಲ. ಆಕೆಯ ತಿಕ್ಕಡಿ ಕಡಿಮೆ ಮಾಡುವ ಸಲುವಾಗಿ ಶ್ರಾದ್ಧಾ ಮತ್ತಿತರ ಕ್ರಿಯಾಕಟ್ಟಳೆಗಳನ್ನು ಅರಮನೆಯ ಮಂದಿ ಸಾಸ್ತರೋಕ್ತವಾಗಿ ಮಾಡಿ ಮುಗಿಸಿದ ಸೋ ದಿವಸಾದ ಮ್ಯಾಲಾನೆ ಮಂದಿ ಬೆಬ್ಬಿಳಿಸೋದು ಮುಕ್ಕಾಲು ವೀಸೆ ಕಡಿಮೆಗೊಂಡದ್ದು.... ವಂದು ಗಂಡು ಕೂಸ ಹೆತ್ತು ಕೊಟ್ಟ ಹೋದ ಆ ಪುಣ್ಯಾತಿನ ತಾವು ಸುಮ್ಮ ಸುಮ್ಮಕ್ಕಾಕ ಅಂದಾಡೋದು? ವಬ್ಬ ವಾರಸುದಾರ ಹುಟ್ಟಿರುವನೆಂದ ಮ್ಯಾಲ ನಾನಿದ್ದು ಮಾಡೋದೇನಝೇ? ದಿನಂಪ್ರತಿ ಸಾಯೋ ಬದಲು ವಂದೇ ಸಲಕ ಸತ್ಯೋತೀನಿ ಯಂದು ಜೀವಂತ ದಹಿಸಿ ಹೋದ ತಮ್ಮ ಮಗ ಕಲಿಯೋರ ನಾಯಕನನ್ಯಾಕ ಅಂದಾಡೋದ್ಯಾಕಂತ ಅರಮನೆ ಮಂದಿ ಜೀವನ ಹಿಡಕೊಂಡಿತ್ತು. ದಿನಗಳೆದಂತೆ ನೆಲ ಕಚ್ಚಿದ್ದವರೆಲ್ಲ ಮೆಲು ಮೆಲ್ಲಕ ಯದ್ದು