ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯೮ ಅರಮನೆ ಶಾಶ್ವತವಾಗಿ ಯಿಂಗಲೆಂಡಿಗೆ ಹೋಗಿ ಬಿಡುವ ತಯ್ಯಾರಿ ನಡೆಸಿದ್ದ ಗುಟ್ಟಾಗಿ... ಮುದುಕಿ ತನ್ನೆದೆ ಹೊಕ್ಕು ಯಲ್ಲಾ ತಿಳಿದುಕೊಂಡಂತಿರುವುದೆಂದುಕೊಂಡ. ತನ್ನತ್ತ ಕಳೇಬರದೋಪಾದಿಯಲ್ಲಿ ನೋಡುತ್ತಿರುವ ಮಂದಿ.. ಆವರಿವರಿಗಾಗಿ ಹತ್ತಿರದಲ್ಲೆಲ್ಲೋ ಹೊಂಚಿ ನಿಂತಿರುವ ಸ್ಮಶಾನಮವುನ.! ತನ್ನ ಕಣ್ಣ ಶುಕ್ಲ ಪಟಲದ ಮೇಲೆ ಮೂಡಿ ಮರೆಯಾಗುತ್ತಿರುವ ಹೆಂಡತಿ.. ಮಕ್ಕಳು.. ತಾಯಿ.. ತಂದೆ.. ಗ್ಲಾಸೋವಾ.. ಯಿಂಡಿಯಾ.... ಮಂದಿಯಿಂದ ಕೊಸರಿ ಮನೋ ಮುಂದಕ ಜಿಗಿದ ಮುದುಕಿ ಯಷ್ಟು ನೂರು ವರುಷಗಳ ಹಿಂದೆ ಜಳಕ ಮಾಡಿತ್ತೋ? ಯಾವ ಕಾಲದಲ್ಲೋ ತೊಟ್ಟಿದ್ದ ಬಟ್ಟೆಗಳೋ? ಆಕೆ ನಗುತಲಿದ್ದುದು ಯಾವ ಕಾಲದ ನಗೆಯೋ? “ಮಗನss ಮಂಡ್ರಯ್ಯಾ” ಯಂದು ವುಸುರಿಗೆ ವುಸುರು ತಂದದ್ದಲ್ಲದೆ ಅವಯ್ಯನ ಮುಖಕ್ಕೆ ಬೊಗಸೆ ಹಾಕಿ ಲಟಲಟ ಅಂತ ಲಟ್ಟಿಗೆ ತೆಗೆಯಿತು. ಬಿಲ್ಲಿನಂಥ ಸರೀರವನ್ನು ನಿಟಾರನೆ ನಿಗುರಿಸಿ ಸಾಹೇಬನಿಗಿಂತ ಯರಡಂಗುಲ ಯತ್ತರಕಾಯಿತು. ಲೆಕ್ಕ ಜುಳ್ಳಿಯಂಥ ಸರೀರವನ್ನು ಹಿಗ್ಗಲಿಸಿದೊಡನದು ಮನೋನ ದೇಹ ತೂಕಕ್ಕಿಂತ ಯರಡೂವರೆ ಗುಲಗಂಜಿ ತೂಕ ಹೆಚ್ಚಾಯಿತು. ಯಲುಬೆಲುಬು ಹೊಂಟಿದ್ದ ತನ್ನೆರಡೂ ಅಂಗಯ್ಯಗಳನ್ನು ಆತನ ಅಪಾದ ಮಸ್ತಕದ ತುಂಬೆಲ್ಲ ಹರಿದಾಡಿಸಿತು. ಅದು ಬಲವಾಗಿ ಅಪ್ಪಿಕೊಂಡೊಡನೆ ಮನ್ನೋ ಅರಗಳಿಗೆ ಶಿಶುತನವನ್ನನುಭವಿಸಿದ. ಆನೆ ಕಸುವು ಆವಹಿಸಿಕೊಂಡಂತೆ ಭಾಸವಾಯಿತಾತನಿಗೆ.. ಯಿನ್ಯಾತರ ಭಯ ತಮ್ಮೆಲ್ಲರ ಪ್ರೀತಿಯ ಕಲೆಟ್ಟರು ಸಾಹೇಬಗೆ? “ಥಾಮಸು ಮನೋ ಸಾಹೇಬ ಚಿರಾಯುವಾಗಲಿ” ಯಂದು ಮಂದಿ ಜಯಘೋಷ ಹಾಕಲಾಗಿ.. ಅವಯ್ಯ ವಂಥರಾ ಹೆದರಿಕೆಯಿಂದ ಯರಡು ಹೆಜ್ಜೆ ಹಿಂದಕ ಸರಿಯಲಾಗಿ, ಮುದುಕಿ ಮುಂದ ಮುಂದಕ ನಡೆಯಲಾಗಿ.... ಆತ ಚಿರಾಯು ಆಗಲಕ ದೊ ಅಂದರ ದೋ ಶೂಟಂತರ.. ಅಂತರವಲ್ಲದು, ತುಂಬಲಾರದ ಕಂದಕ.. ಆ ಕಂದಕದೊಳಗ ಗರುಡ ಪುರಾಣ.. ಅಯ್ಯೋ.. ಆ ಅಂತರವನ್ನು ಯಾಕವುಳಿಸಿಕೊಂಡ ತಮ್ಮ ಪ್ರೀತಿಯ ಮಂಡಯ್ಯನು? ಅಯ್ಯೋ.. ಯಾಕ ತನ್ನ ಮುಖಸಿಂಡರಿಸಿಕೊಳ್ಳುತ್ತಿರುವನು ತಮ್ಮ ಪ್ರೀತಿಯ