ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೧ ಯಾತ್ರೆಮಾಡಲಕ ಮಲ್ಲಯ್ತಕ್ಕಾ ಕಾಶಿ?.. ಲಿಂಗಗಳೊಳಗ ಲಿಂಗತನ ೦ತುಲ್ಲು೦ಟಕ್ಕಾ?.. ಯಿಲ್ಲದವುಗಳನ್ನು ಹುಡುಕೋತಾ oಾಕ ಅಲೆದಾಡುತೀಯಾ ?” ಯಂದಳು ಸಂಕಟದಿಂದ.. ಧರುಮ ದೇವತೆಯು ಅವುದು ತಂಗಿ, ಕಲಿ ಕಾಲದಿಂದಾಗಿ ಮಯ್ಲಿಗಿ ಮಯ್ಯ ತುಂಬಾ ಮೆತ್ತಯ್ಕೆ.. ಜಳಕ ಮಾಡಿ ಪರಿಸುದ್ದಳಾಗಬೇಕಂತ ನದಿಗಳಿಗಾಗಿ ಹಂಬಲಿಸಲಕ ಹತ್ತೀನಿ.. ವಂದಾರ ಜಲಧಿ ಸಿಗವಲ್ಲದು.. ನಂದೊತ್ತಟ್ಟಿಗಿರಲಿ, ತಂಗೀ ನೀನ್ಯಾಕ ಅಲೆದಾಡುತ್ತಿರುವೆಯಲ್ಲ, ಕಾರಣವೇನು?” ಯಂದು ಕೇಳಲು ಚನ್ನಮ್ಮ ತಾಯಿಯು ಸವಿಸ್ತಾರವಾಗಿ ಯಿವರಿಸಿದಳು. ಆ ರುದಯ ಯಿದ್ರಾವಕ ಕಥೆ ಆಲಿಸಿದ ಧರುಮ ದೇವತೆಯು ಮರುಗದೆ ಯಿರಲಿಲ್ಲ. “ತಂಗೀ ನೀನೆಂಗೋ ನಾನಂಗೆ” ಯಂದು ಹೆಗಲಿಗೆ ಹೆಗಲು ಕೊಟ್ಟಳು. ಅವರೀಲ್ವರೂ ಹಗಲಿರುಳೆನ್ನದೆ ಪ್ರಯಾಣ ಮಾಡಿ ಮಾಡಿ ಭೂಲೋಕ ತಲುಪಿದರು. ಹುಡುಕೋತ ಹುಡುಕೋತ ಕುದುರರೆಡವು ಯಂಬುವ ಚೋದ್ಯವನ್ನು ಪ್ರವೇಸ ಮಾಡಿದರು. ಸಾಂಬವಿಗಾಗಿ, ಮೋಬಯ್ಯನ ಸರೀರಕ್ಕಾಗಿ ಹುಡುಕಾಡಿ ಆ ಸರೀರದೊಳಗೆ ಪ್ರವೇಶ ಮಾಡಿದರು. "ಯಲ್ಲದಿಯೇ ತಾಯಿ.. ಯಲ್ಲದಿಯೇ?” ಯಂದು ಕೂಗಾಡಿದರು. ವಳಗಡೆ ಯಲ್ಲೋ ಯಿದ್ದ ಸಾಂಬವಿಯು ಅಮಾಯಕಳಂತೆ “ಯಾರವ್ವಾ ನೀವು? ಯದಕ ಬಂದಿರಲ್ವಾ?” ಯಂದು ಕೇಳಿದಳು. ಅವರಿಬ್ಬರು ಸಣು ಮಾಡಿ ಹೇಳಿಕೊಂಡರು. ಜಗಲೂರೆವ್ವ ಮಾ ಪತಿರೊತೆ ಅದಾಳ.. ಆಕೀನ ನೀನು ಗಂಡನಿಂದ ದೂರ ಮಾಡಿರೋದು ಸರಿಯಲ್ಲ, ಸೋಲುಪ ಕರುಣೆ ತೋರಿಸವ್ವಾ. ಯಂದು ಕಯ್ಕ ಮುಗುದು ಕೇಳಿಕೊಂಡರು. ಅದಕ ಸಾಂಬವಿಯ ರುದಯ ಕರಗಲಿಲ್ಲ. ಅಲ್ಲಿಂದ ಅವರು ಹೊರ ಬಂದು ನಂಬುಗಸ್ತ ಪ್ರಾಣಿ ಪ್ರಾಕಾರವಾದ ಸುನಕ ರೂಪ ಧಾರಣ ಮಾಡಿ ಜಗೂಲುರೆವ್ವನ ಯಡ ಬಲಕ ಕಾವಲಿಗೆ ನಿಂತರೆಂಬ ಕಥೆ ನೀಲಗಾರರು ಹೇಳುತಾರ.... ಕಸಬಾ ಕುದುರೆಡವು ಯಂಬ ಪಟ್ಟಣ ಯೀಗ ಯೇನುಂಟು, ಅದು ಹಿಂದಲ ಕಾಲದಲ್ಲಿ ಹೀಂಗಯಿರಲಿಲ್ಲ. ಸಿಲ ಸಿಲಾ ಪ್ರದೇಶವಾಗಿತ್ತು. ಪೂರುವ ಕಾಲದಲ್ಲಿ ಕೊಮಾರ ರಾಮನು ಪ್ರತಿಪಾಲನ ಮಾಡುತಲಿದ್ದಂಥ ಕಮ್ಮಟ ದುರದ ರಾಜ್ಯದೊಳಗೆ ಯಿದು ಯಿತ್ತೂ ಅಂದರ ಯಿತ್ತು, ಯಿರಲಿಲ್ಲ ಅಂದರ ಯಿರಲಿಲ್ಲ. ಅದಕ್ಕೂ ದೂರುವ ಕಾಲದಲ್ಲಿದ್ದಂಥಾ ವುಪನಾಮ ಆವುದೆಂದರೆ ದ್ವಾರಾವತಿ