ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಯ ದೊರಕಿತಂದು ಆನಂದಭರಿತನಾದನು. ಅಲ್ಲದೆ ಬಂದುನೋಡಲು ಒಂದು ರೆಕ್ಕೆಯ ಬಾಗಿಲು ತೆರೆದಿತ್ತು. ಆದುದರಿಂದ ಒಳಗಿರುವರನ್ನು ಕರೆಯು ವುದಕ್ಕಾಗಿ ಬಾಗಿಲನ್ನು ಮೆತ್ತಗೆ ತಟ್ಟಿದನು. ಆದರೂ ಯಾರೂಬರಲಿಲ್ಲ. ತಾನು ತಮ್ಮದಶಬ್ಬವು ಕೇಳಲಿಲ್ಲವೆಂದು ಮರಳಿ ಗಟ್ಟಿಯಾಗಿ ಹೊಡೆದನು ಹೀಗೆ ಅನೇಕವೇಳೆ ಮಾಡಿದಾಗ, ಯಾರುಬರದಿರುವುದನ್ನು ನೋಡಿ, ಇಂತಹಸುಂದರವಾದ ಕಟ್ಟಡದಲ್ಲಿ ಯಾರು ವಾಸಮಾಡದಿರುವುದು ಆಶ್ಚ ರ್ಯವಲ್ಲವೇ ! ಇಲ್ಲಿಯಾರೂ ಇಲ್ಲದಿದ್ದರೆ ನಾನು ಹೆದರಬೇಕಾದ ಅಗತ್ಯವಿ ಯಾರಾದರೂ, ಇದ್ದುದೇ ಆದರೆ ಅವರಿಂದನಾನು ತಪ್ಪಿಸಿಕೊಳ್ಳಬೇಕೆಂ ದು ಯೋಚಿಸಿ, ಒಳ ಹೊಕ್ಕುಬಂದು, ಮಾರ್ಗರನ್ನು ಆಯಾಸಪರಿಹ ರಿಸಿಕೊಳ್ಳಿರೆಂದು ಉಪಚರಿಸತಕ್ಕವರೂ, ಮಾರ್ಗದಲ್ಲಿ ಸಂಚರಿಸತಕ್ಕನ ರೂ, ಈವೂರಲ್ಲಿ ಯಾರೂ ಇಲ್ಲವೆ ಎಂದುಗಟ್ಟಿಯಾಗಿ ಅನೇಕವೇಳೆ ಕೂಗಿ ಕೊಂಡನು. ಆದರೂ, ಯಾರೂಮಾತನಾಡಲಿಲ್ಲವಾದುದರಿಂದ ಒಂದಾನೊ೦ ದುಪಡಸಾಲೆಯಮುಂದಿರುವ ಕೊಠಡಿಯಲ್ಲಿ ಬಗ್ಗಿ ನೋಡಿದರೂ, ಅಲ್ಲಿಯ ರೂ ಕಾಣಬರಲಿಲ್ಲ. ಅಮ್ಮರಿ ಸಹರಜಾದಿಯ, ಬೆಳಗಾದುದೆಂದು, ಕಥೆಯನ್ನು ನಿಲ್ಲಿಸಿದಳು, ದಿನರಜಾದಿಯು, ಅಕ್ಕಾ ! ಕಥೆಯು ಸs ರಸ್ಯವಾಗಿರುವ ಕಡೆಯಲ್ಲಿಯೇ ನಿಲ್ಲಿಸುತ್ತೀಯಲ್ಲಾ ಎಂದು ಹೇಳಿದಳು. ನಹರಜಾದಿಯು, ತಂಗೀ ಸುಲ್ತಾನರ ದಯೆಯು ನನ್ನ ಮೇಲಿರುವುದಾದರೆ, ನಾಳೆ ಇದನ್ನು ಕೊನೆಗಾಣಿಸುವನೆಂದು, ಹೇಳಿದಳು, ಸುಲ್ತಾನನು, ಕಥೆ ಯನ್ನು ಕೇಳಬೇಕೆಂಬಾಸೆಯಿಂದ, ಸುಲ್ತಾಸಿಯನ್ನು ಕೊಲ್ಲತದೆಂ ದು ಹೇಳಿ ಹೊರಟು ಹೋದನು. - ೨೧ ನೆಯ ರಾತಿ ) ಕಥೆ, ಮರುದಿನ ಬೆಳಗಿನ ಸಮಯದಲ್ಲಿ ದಿನರಜಾದಿಯು, ತನ್ನ ಅಹ್ಮನನ್ನು ಕುರಿತು, ಉಳಿದಿರುವ ಕಥೆಯನ್ನು ಪೂರ್ತಿಮಾಡಬೇಕೆಂದು ಬೇಡಿಕೊಳ್ಳಲು, ಆಕೆ ವಹರಿಯರನನ್ನು ಮಾತನಾಡಿಸಿ ಅ ವ ರಿ೦ ದಪ್ಪ ಣೆಯಂಪಡೆದುಕೊಂಡು ಮುಂದೆ ಕಥೆಯನ್ನು ಹೇಳತೊಡಗಿದಳು : ಬಳಿಕ ಸುಲ್ತಾನನು, ಆ ಮನೆಯ ಮುಂಭಾಗವನ್ನು ದಾಟಿ ಗಳಕ್ಕೆ ಬರಲು, ಆ ಸಭಾಮಂಟಪದಲ್ಲಿ ನಾನಾವಿಧವಾದ ಕೆತ್ತನೆಯ ಕಳಸ