________________
ಆರೇಬಿರ್ಯ ನೈಟ್ಸ್ ಕಥೆಗಳು, ೧೬೩ ಬರುವುದಲ್ಲದೆ ಹಸ್ತಾಕ್ಷರದಲ್ಲಿ ನನ್ನ ಸವನರಾದವರು ಯಾರೂ ಇಲ್ಲವೆಂ ದು ಹೇಳಿದೆನು. ಆತನು ಅವುಗಳೆಲ್ಲವೂ ನಮ್ಮ ದೇಶದಲ್ಲಿ ಒಂದು ರೂ ಯಚೂರಿಗೂ, ಬೆಲೆ ಬಾಳದಿರುವುದರಿಂದ ಅವುಗಳಿಗಿಂತಲೂ, ನಿನ್ನು ಯೆಜನ ನಾದವುಗಳೇ ಇಲ್ಲವೆಂದು ಹೇಳಿದನು. ಅಲ್ಲದೆ ನೀನು ನಾನುಹೇಳುವಹಾಗೆ ಹೇಳುವುದಾದರೆ, ನಿನಗೆ ಕಾಯಶಕ್ತಿಯಾ , ಆರೋಗ್ಯವೂ ಚೆನ್ನಾಗಿರುವುದರಿಂದ ಈ ಊರಿಗೆ ಸಮೀಪವಾಗಿರುವ ಅಡವಿಗೆಹೋಗಿ, ಕಟ್ಟಿಗೆಯಹೊರೆಯನ್ನು ತಂದು ಮೂರಿಕೊಂಡರೆ, ಸುಖವಾಗಿ ಜೀವನವಾಗುವುದು. ಹೀಗೆ ಇದ್ದರೆ ಕೆಲವು ಕಾಲದಲ್ಲಿ ಭಗವಂತನದಯೆಯು, ನಿನಗುಂಟಾಗಿ ನಿನ್ನ ದೌರ್ಭಾಗ್ಯವೆಲ್ಲವೂ ನಾಶವಾಗುವುದು. ಅದುವರೆಗೂ, ನೀನು ವೇಷವನ್ನು ಮರೆಸಿಕೊಂಡು, ಇಂಥವರೆಂದು ಹೇಳಿಕೊಳ್ಳದೆ ಇರಬಹುದು. ನಿನಗೆ ಬೇಕಾದರೆ ಒಂದುಹಗ್ಗ ವನ್ನು ಕೊಡಲಿಯನ್ನು ನಾನು ಕೊಡುವೆನೆಂದು ಹೇಳಿದನು. ಅದುಬಹ ಳ ನೀಚವಾದ ಮತ್ತು ಕಸಾಧ್ಯವಾದ ಕೆಲಸವಾಗಿದ್ದರೂ, ನನ್ನ ರೂ ಪವನ್ನು ಮರೆಮಚಿಕೊಳ್ಳುವುದಕ್ಕಾಗಿ ನಿರಾತಂಕವಾಗಿ ಜೀವನವನ್ನು ಕಂ ಪಾದಿಸಿಕೊಳ್ಳುವುದಕ್ಕೂ, ಈ ವರ್ಗವೇ ಸರಿಯೆಂದು ಒಪ್ಪಿಕೊಂಡೆನು. ಮರುದಿನ ಬೆಳಿಗ್ಗೆ ಆ ದರ್ಜೆಯವನ್ನು, ನನ್ನ ಕೈಗೊಂದು, ಕೊಡಲಿಯ ನ್ನು ಹಗ್ಗವನ್ನು ಕೊಟ್ಟು, ಸೌದೆಯನ್ನು ಮೂರತಕ್ಕವರನ್ನು ಕರೆದು ಈತನನ್ನು ಅಡವಿಗೆ ನಿಮ್ಮ ಜೊತೆಯಲ್ಲಿಯೇ ಕರೆದುಕೊಂಡುಹೋಗಿ, ಎಂ ದು ಹೇಳಿದನು. ಅವರು ನನ್ನನು ಕರೆದುಕೊಂಡುಹೋಗಲು ನಾನು ಮೊದಲುದಿನತಂದ ಸೌದೆಯಹೊರೆಯಿಂದ ಆದೇಶದಲ್ಲಿ ಛಲಾವಣೆಯಲ್ಲಿರುವ ಬಂಗಾಗದ ನಾಣದಲ್ಲರ್ಧಭಾಗವು ದೊರೆಯಿತು. ಕಟ್ಟಿಗೆಯನ್ನು ಕಡಿ ಯುವ ಅಡವಿಗೂ, ಪಟ್ಟಣಕ್ಕೂ, ಬಹುದೂರನಾದುದರಿಂದಲೂ, ಸೌದೆ ಯನ್ನು ತಂದು ಮೂರತಕ್ಕವರು, ಸ್ವಲ್ಪವಾದುದರಿಂದಲೂ, ಆ ವೂರಿನಲ್ಲಿ ಸೌದೆಯು, ಸ್ತ್ರೀಯವಾಗಿಯೇ ಇದ್ದಿತು. ಹೀಗಿರುವುದರಿಂದ ಸ್ವಲ್ಪದಿನ ದಿ ಬಹಳ ಹಣವನ್ನು ಸಂಪಾದಿಸಿ, ಆ ದರ್ಜೆಯವನಿಗೆ ಕೊಡಬೇಕಾದ ಹಣವನ್ನು ಕೊಟ್ಟು, ಒಂದುಸಂವತ್ಸರವು ಕಳೆದಮೇಲೆ ಒಂದಾನೊಂದು ದಿನ ಅಡವಿಯಲ್ಲಿ ಬಹುದೂರದವರೆಗೂಹೋಗಿ, ರಮಣೀಯವಾದ ಒಂದಾ ನೋಂದು ಸ್ಥಳದಲ್ಲಿ ಕಟ್ಟಿಗೆಯನ್ನೊಡೆಯುತ್ತಾ, ಒಂದಾನೊಂದು ಗಿಡದ