________________
೧೬೪ ಯವನ ಯಾಮಿನೀ ವಿನೋದ, ಎಂಬ ಬೇರನ್ನು ಕೇಳುತ್ತಿರುವಾಗ ಆ ಸ್ಥಳದಲ್ಲಿ ನೆಲಮಳಿಗೆಯ ಬಾಗಿಲಿಗೆ ಹಾಕಿ ದ ಒಂದು ಕಬ್ಬಿಣದ ಉಂಗುರವು ದೊರಕಿತು. ಅದರವೇರಿದ ಮಣ್ಣ ನ್ನು ಎತ್ತಿಹಾಕಿ ನೋಡಲು, ಸೂಜಿನಗಳು ಕಾಣಬಂದವು. ನಾನು ಕೊಡಲಿಯನ್ನು ಹಿಡಿದುಕೊಂಡು, ಅದರಲ್ಲಿಳಿದುಹೋಗಲು, ಒಳಗಭೂಮಿ ಯಮೇಲಿರುವ ನಗರದಂತ ವಿಶಾಲವಾದ ಬೆಳಕಿನಿಂದಲೂ, ಗಾಳಿಯಿಂದಲೂ ಕೂಡಿದ ಒಂದು ನಗರವನ್ನು ನೋಡಿ, ಅತ್ಯಂತವಾದ ಆಶ್ಚರ್ಯವನ್ನು ಹೊಂದಿದನು. ಆ ಪಟ್ಟಣವು ಮನೋಹರವಾದ ಚಂದ ಕಾಂತ ಶಿಲೆಗೆ ೪ಂದಲೂ, ಇಂದ ನೀಲಮಣಿಗಳಿಂದ ಕೂಡಿದ ವಜ ಮಣಿಗಳ ಶೃಂಗಾರ ದಿಂದಲೂ, ನಿರ್ಮಿತವಾಗಿತ್ತು. ಇದೆಲ್ಲವನ್ನು ನೋಡುತ್ತಾ ಮುಂದೆ ಹೋಗಲು, ಸೌಂದರ್ಯವತಿಯರಾದ ಏಳುಜನಯರು ಬರುತ್ತಿರು ವುದನ್ನು ನೋಡಿ, ನನ್ನ ಇಂದ್ರಿಯಗಳು, ಸ್ವಾಧೀನತಪ್ಪಿ ಚಲಿಸಲಾರಂ ಭಿಸಿದವು. ಇಷ್ಟರಲ್ಲಿಯೇ ಬೆಳಗಾದುದರಿಂದ ಸಹರಜಾದಿಯು, ಕಥೆಯ ನ್ನು ನಿಲ್ಲಿಸಿದಳು. ಅದನ್ನು ನೋಡಿ ದಿನರಜೆದಿಯು, ಅಕ್ಕಾ ! ನೀನು ಈದಿನಹೇಳಿದ ಕಥೆಯು, ನನಗೆ ಅತ್ಯಾನಂದವನ್ನುಂಟುಮೂಡಿತು. ಆದ ರೆ ಇನ್ನು ಮೇಲೆ ಹೇಳುವಕಥೆಯು, ಇದಕ್ಕಿಂತಲೂ, ಅತಿಶಯವಾಗಿ ತಂದು, ನಿಸ್ಸಂದೇಹವಾಗಿ ಹೇಳುತ್ತೇನೆ. ಅಲ್ಲದೆ ಈ ಸಮಯದಲ್ಲಿ ಸುತ್ತಾ ನರು, ಸ್ವಲ್ಪವಾದರೂ, ಅನುಮನವನ್ನು ಹೊಂದಲಾರರೆಂದು, ನುಡಿಯ ಲು, ಸುಲ್ತಾನನು, ಮುಂದಿನ ಕಥೆಯನ್ನು ಕೇಳಬೇಕೆಂಬಾಸೆಯಿಂದ ಯಾವದೂತನೂ ಆಡದೆ ಹೊರಟುಹೋದನು. - ೪೩ ನೆಯ ರಾತಿ) ಕಥೆ ಮರುದಿನ ದಿನರಜೆದಿಯು, ತನ್ನ ಅಕ್ಕನನ್ನು ಕುರಿತು ಪ್ರಶ್ನೆ ಮೂಡುತ್ತವೆ, ಆಕೆಯು ಕಥೆಯನ್ನು ಹೇಳಲಾರಂಭಿಸಿದಳು. ಕಾಲೆಂಡ ರು, ಜೊಬದಿಯನ್ನು ನೋಡಿ, ಅಮಾ ! ನಾನು ಆ ಲಲನಾಮಣಿಯರ ನ್ನು ನೋಡಿ, ಅವರು ನನ್ನ ಬಳಿಗೆ ಬರುವ ಶ್ರಮವನ್ನು ತೆಗೆದುಕೊಳ್ಳಕೂ ಡದೆಂಬ ಅಭಿಪ್ರಾಯದಿಂದ ನಾನು ಅವರಬಳಗೆ ಹೋಗಿ ನಂದನೆಗಳನ್ನು ಮಾಡಲು, ಅವರು ನನ್ನನ್ನು ನೋಡಿ ನೀನೇನು ಮನುಷ್ಯನೋ ಅಥವಾ ದೆವ್ವವೋ ಎಂದು ಕೇಳಿದರು,