ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೪ ಯವನ ಯಾಮಿನೀ ವಿನೋದ ವಿಂಬ, ವನು. ಇವುಗಳಲ್ಲಿ ನಿನಗಾವುದಿವೋ ಅದನ್ನು ತಿಳಿಯಹೇಳೆಂದು, ಕೇಳಿದನು. ಈ ಮಾತುಗಳನ್ನು ಕೇಳಿದಕೂಡಲೆ ನನಗೆ ಭಯವುಂಟಾಗಿ ಹೇಗಾದರೂ, ಆತನದಯವನ್ನು ಸಂಪಾದಿಸಬೇಕೆಂದು, ಎಲೆ ರಾಕ್ಷಸನೇ ನೀನು ಹೇಗಾದರೂ ನನ್ನ ಮಾ ಣವನ್ನು ಉಳುಹುತ್ರಿಯಲ್ಲ ! ಅದನ್ನು ಚೆನ್ನಾಗಿಯೆಮಾಡು, ಲೋಕೋತ್ತಮನಾದ ಒಬ್ಬನೊಬ್ಬ ಸತ್ಪುರು ವನು, ತನ್ನ ಮೇಲೆ ಮರಣವೈರವನ್ನು ಹೊಂದಿದ ಮನುಷ್ಯನನ್ನು, ಮನ್ನಿಸಿ ಬಿಡುವಂತ ನೀನೂ ನನ್ನನ್ನು ರಕ್ಷಿಸೆಂದು ಬೇಡಲು, ರಾಕ್ಷಸನು, ಆ ಕಥೆಯನ್ನು ಹೇಳೆನಲು, ನಾನು ಹೀಗೆ ಹೇಳಿದೆನು. ಆ ಕಥೆಯ ನ್ನು ನಿಮಗೂ ಹೇಳಿದರೆ ನೀವೂ ಕೋಪಿಸಿಕೊಳ್ಳಲಾರರೆಂದು ಯಾಚಿ ಸುತನ. ಸಹನೆಯ ಭ್ರವನಿಗೂ, ಆತನಲ್ಲಿ ಅಸಹನೆಯನ್ನೇ ತೋರುತ್ತಿದ್ದ ಮತ್ತೊಬ್ಬನಿಗೂ ನಡೆದ ಕಥೆ. ಒಂದೂರಿನಲ್ಲಿ ನೆರೆಹೊರೆಯವರಾದ ಇಬ್ಬರು ಮಾನವರಿದರು. ಅವರಲ್ಲಿ ಒಬ್ಬನು ಮತ್ತೊಬ್ಬನಮೇಲೆ ಯಾವಾಗಲೂ ವೈರವನ್ನೇ ತೋರುತ್ತಿದನು. ಅದನ್ನು ನೋಡಿ ಆತನು ನಾವು ನೆರೆಹೊರೆಯವರಾಗಿ ರುವುದೇ ಇದಕ್ಕೆ ಕಾರಣವೆಂದು ತಿಳಿದು ಆಸೆಲವನ್ನು ಬಿಟ್ಟು ಮತ್ತೆ ಗಾದರೂ ದೂರವಾದ ಪ್ರದೇಶಕ್ಕೆ ಹೋಗಿ ವಾಸಮಾಡಿಕೊಂಡಿರಬೇಕೆಂ ದಿದ್ದನು. ಆತನು ಅಸೂಯಾಪರನಾದವನಿಗೆ ಎಷ್ಟೊಂದು ಉಪಕಾರವ ನ್ನು ಮಾಡಿದರೂ, ಆತನ ಕೋಪವು ಶಾಂತಿಯಾಗಲಿಲ್ಲ, ಆದುದರಿಂದ ಆತ ನುಸಾಮಾನುಗಳ ಸಹಿತವಾಗಿ ತನ್ನ ಮನೆಯನ್ನು ಮಾರಿ, ಅಲ್ಲಿಗೆ ಸಮೀರಾ ಜವಾಗಿ ಆದೇಶದ ರಾಜಧಾನಿಯನ್ನು ಸೇರಿ ಅದಕ್ಕೆ ಒಂದು ಹರದಾರಿಯ ದೂರದಲ್ಲಿ ಒಂದು ಭೂಮಿಯನ್ನು ಕೊಂಡುಕೊಂಡನು. ಆಭೂಮಿಯಲ್ಲಿ