________________
nvಳ ಯವನ ಯಾಮಿನೀ ವಿನೋದ, ಎಂಬ ನ್ನಾಗಿ ಮೂಡಿ, ಸಮಸ್ತವಾದ ರಾಜಮರ್ಯಾದೆಗಳಿಂದ ನನ್ನ ಬಳಿಗೆ ಕರೆ ದುಕೊಂಡು ಬನ್ನಿರೆಂದು, ತನ್ನ ಪ್ರಧಾನಮಂತ್ರಿಗಳಿಗೆ ಆಜ್ಞಾಪಿಸಲು, ಕೂಡಲೇ ಅವರು ತಮಗೆಬಂದ ನಗುವನ್ನು ತಡೆಯಲಾರದೆ ಗಟ್ಟಿಯಾಗಿ ನಕ್ಕರು. ಅದನ್ನು ನೋಡಿ, ಸುಲ್ತಾನನು, ಅತ್ಯಂತ ಕೋಪದಿಂದ ಅವರ ನ್ನು ಶಿಕ್ಷಿಸುವಂತೆ ಆಜ್ಞೆ ಮೂಡಿದನು. ಆಗಲವರು ಸಾಮೂಾ ! ತಾವುಕವಿಸಬೇಕು, ಈಬರವಣಿಗೆಯು, ಮನುಷ್ಯರಿಂದ ಬರೆಯಲ್ಪಟ್ಟುದಲ್ಲ, ಮತ್ತೆನೆಂದರೆ ಹಡಗಿನ ಮೇಲೆ ಕುಳಿತಿದ್ದ ವಾನರನೊಬ್ಬನಿಂದ ಬರೆಯಲ್ಪಟ್ಟಿತೆಂದು ಹೇಳಲು, ರಾಜನು ಅತ್ತಾರ ಯುಕ್ತನಾಗಿ, ಹಾಗಾದರೆ ಅದನ್ನು ನಾನು ನೋಡಬೇಕಾ ಗಿರುವುದರಿಂದ ಶೀಘ್ರ ವಾಗಿ ಆ ಕವಿಯನ್ನು ಕರೆದು ಕೊಂಡು ಬನ್ನಿರೆಂದು ಆಜ್ಞಾಪಿಸಿದನು. ಆಗ ಅವರು ತೊರೆಯಾಗಿ ಅಲ್ಲಿಗೆ ಬಂದು ರಾಜಾಜ್ಞೆ ಯನ್ನು ಯಜಮಾನನಿಗೆ ತಿಳುಚಲು, ಆತನು ಸಮ್ಮತಿಸಲು ಅವರು ನನಗೆ ನಾನಾವಿಧವಾದ ಅಮೂಲ್ಯ ವಸ ಭರಣಗನ್ನು ತೊಡಿಸಿ, ಉತ್ತನು ವಾದ ಕುದುರೆಯಮೇಲೆ ಕುಳ್ಳಿರಿಸಿ ಕೊಂಡು, ಮರಾರ್ಥವಾಗಿ ಸುತ್ತಲೂ ತಾವು ನಡೆದು ಬರುತ್ತಾ ಇದ್ದರು. ನಾನು ಸಂತೋಷದಿಂದ ನೋಡುತ್ತಾ ಇದನು. ರಾಜನು ಕೋತಿಯನ್ನು ಮಂತ್ರಿಯಾಗಿ ಮಾಡಿಕೊಳ್ಳುವ ನೆಂಬ ವರ್ತಮಾನವು ಕೂಡಲೆ ಊರಿಲ್ಲ ತುಂಬಿಕೊಂಡಿತು. ಆದುದ ರಿಂದ ಊರಿನವರೂ, ಹಡಗಿನವರ, ಸರ್ವರೂ ನನ್ನನ್ನು ನೋಡುವುದ ಕಾಗಿ ಬೀದಿಗೆ ಬಂದು ಜಗಲಿಗಳಮೇಲೂ, ಪಡಸಾಲೆಗಳಲ್ಲ, ಕೈಸಾಲೆಗೆ ಇಲ್ಲ, ಮಹಡಿಯಲ್ಲ, ನಿಂತು ತಂಡತಂಡವಾಗಿ ಭ ಮೆಯಿಂದ ನೋಡು ತಾ ಇದ್ದರು. ಬಳಿಕ ನಾನು ಅರಮನೆಯನ್ನು ಸೇರಿದೆನು. ರಾಜನು ವಿಜೃಂಭಣೆಯಿಂದ, ಸಿಂಹಾಸನದಲ್ಲಿ ಕುಳಿತಿರುವುದನ್ನು ನೋಡಿ ಮೊದಲು ಸಲಾಮು ಮೂಡಿ, ಮಂಡಿಯಾಗಿ ಮುಂದೆ ಕೂತುಗಂಡು, ಕಾಲುಗಳಿಗೆ ರಗಿ ನೆಲವನ್ನು ಮುತ್ತಿಟ್ಟುಕೊಂಡು ಮೂರುಸಾರಿ ವಂದನೆಗಳನ್ನು ಮೂ ಡಿದೆನು. ಅಗ್ಲಿದ್ದವರೆಲ್ಲರೂ ಇದನ್ನು ನೋಡಿ, ಇದೇನು ಆಶ್ಚರ್ಯ ಇದೆಂತಹ ಕೋತಿಯಾಗಿರಬಹುದೆಂದು, ತುಂಬ ವಿನೋದವನ್ನು ಹೊಂದಿ ದರು. ರಾಜನುಎಲ್ಲಕ್ಕಿಂತಲೂ, ಅತಿಶಯವಾದ ವಿಶ್ವಾಸವನ್ನು ತೋರಿಸಿದನು ಆದರೆ ನಾನೆಷ್ಟು ಬುದ್ಧಿವಂತನಾಗಿದ್ದರೂ, ಮೂತನಾಡುವ ಶಕ್ತಿಯು