ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ೧೯೬ ಸಾಯುವಕಾಲಬಂದಿತು. ಒಬ್ಬರಾದರೂ ಬದುಕುವಹಾಗೆ ಕಾಣಬರುವು ದಿಲ್ಲವೆಂದು ಹೇಳುತ್ತಾ, ಮುಂದೆಬರುವ ಆಪತ್ತನ್ನು ಮೊದಲೇ ತಿಳಿದು ಕೊಂಡವನಂತೆ, ಅಳುವುದಕ್ಕೆ ಪ್ರಾರಂಭಿಸಿದನು. ಆತನು ನಿರಾಶೆಯ ನ್ನು ಹೊಂದಿದುದರಿಂದ ಆ ಹಡಗಿನಲ್ಲಿದ್ದವರೆಲ್ಲರೂ, ವಿಶೇಷವಾಗಿ ಭಯವ ನ್ನು ಹೊಂದಿದರು. ಆಗ ನಾನು ನಾವಿಕನನ್ನು ನೋಡಿ, ನೀನು ಹೀಗೆ ಧೈರ್ಯವನ್ನು ತೊರೆದು, ವ್ಯಸನಾಕಾಂತನಾಗುವುದಕ್ಕೆ ಕಾರಣವೇನೆಂ ದು, ಕೇಳಲು, ಅಯಾ ! ನಾವು ದಾಟಿಕೊಂಡುಬಂದ ಬಿರುಗಾಳಿಯು, ನಮ್ಮನ್ನು ದಾರಿತಪ್ಪಿಸಿ, ನಮ್ಮನ್ನು ಬಹುದೂರದವರೆಗೂ, ತೆಗೆದುಕೊಂ ಡು ಬಂದಿರುವುದಾದುದರಿಂದ ನಾಳೆ ಮಧ್ಯಾನಕ್ಕೆ ಆ ಕರಿಯ ಗುಡ್ಡದ ಬಳಿಗೆ ನಾವು ಹೋಗಬೇಕಾಗಿರುವುದು, ಅದು ದೊಡ್ಡದಾದ ಒಂದುಕರಿ ಯು ಸೂಜಿಗಲ್ಲಿನ ಪರ್ವತವಾಗಿರುವುದರಿಂದ, ತನ್ನ ಸ್ವಭಾವದಂತೆ ನಮ್ಮ ಹಡಗಿನಲ್ಲಿರುವ ಕಬ್ಬಿಣವನ್ನು ಎಳೆದುಕೊಂಡು ಬಿಡುವುದು. ನಾಳೆನಾ ವುಗಳು ಅದರಹತ್ತಿರಕ್ಕೆ ಹೋದಕೂಡಲೆ ಹೀಗಾಗುವುದರಿಂದ, ಹಡಗು ಭಾರವಾಗಿ ಮುಳುಗಿಹೋಗುವುದು. ಸೂಜಿಗಲ್ಲು, ಕಬ್ಬಿಣವನ್ನು, ಎಳೆ ದುಕೊಳ್ಳುವ ಶಕ್ತಿಯನ್ನುಂಟಾಗಿರುವುದರಿಂದಲೆ, ಆ ಪರ್ವತವು ಅನೇಕ ವಾದ ಹಡಗುಗಳ 'ಚೂರಿನಿಂದ ತುಂಬಿಹೋಗಿರುವುದು, ಈ ಪರ್ವತವು ಯಾವಾಗಲೂ, ಹೀಗಿರಲಿಲ್ಲ. ಅದರ ಶಿಖರದಲ್ಲಿ ಉತ್ತಮವಾದ ಶಿಲೆಯಿಂದ ಹಿಂದುಗೊರಿಯನ್ನು ಕಟ್ಟಿರುವುದು, ಅದರ ಕಂಬಗಳಕೂಡ, ಅಮೃತಶಿಲೆಯಿಂದ ಮಾಡಿದವುಗಳಾಗಿವೆ. ಆ ಗೋ ರಿಯಮೇಲೆ ಒಂದು ಕುದುರೆಯಾ, ಅದರಮೇಲೊಬ್ಬ ರಾವುತನ, ಸಹ ಶಿಲೆಯಿಂದಲೆ ಮೂಡಲ್ಪಟ್ಟಿರುವರು. ಅಲ್ಲದೆ ಆ ರಾವುತನ ಎದೆಯಮೇಲೆ ಒಂದು ಸೀಸದ ತಗಡನ್ನು ಹೊಡೆದಿರುವರು. ಅದರಮೇಲೆ ಅಕ್ಷರಗಳಿಂದ ಮಂತ ವನ್ನು ಒಂದು ಯಂತ್ರವನ್ನು ಬರೆದಿರುವರು. ಇದರ ವಿಷಯ ದಲ್ಲಿ ಜನರು ಹೇಳಿಕೊಳ್ಳುವುದೇನಂದರೆ ನಾನಾವಿಧವಾದ ಹಡಗುಗಳೂ, ಅದರಲ್ಲಿರುವ ಜನರೂ ಮುಳುಗಿಹೋಗುವುದಕ್ಕೆ ಆ ಬೊಂಬೆಯು ಕಾರ ಣವಾಗಿದೆ. ಅದು ನೆಲಕ್ಕೆ ಬಿದ್ದು ಹೋದ ಹೊರತು, ಅಲ್ಲಿ ಹೋಗುವದ ನರಿಗೆ ವಿಪತ್ತು ತಪ್ಪದೆಂದು ಹೇಳಿದನು. 36