ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೭೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥಗಳು. ರಿಗೆ ನಿದ್ರೆ ಮೂದುತ್ತಾ ಇದ್ದೆನೋ ನನಗೆತಿಳಿಯದು, ಬಳಿಕ ಎಚ್ಚೆತ್ತು ನೋಡುವಾಗ ಹಸಗಗಲಿ, ಹಡಗಿನಲ್ಲಿದ್ದ ಜನರಾಗಲಿ, ನನ್ನ ಕಣ್ಣಿಗೆ ಕಾಣಿಸಲಿಲ್ಲ. ಇಂತೆಂದುಹೇಳಿ, ನಗರಜಾದಿಯು, ಬೆಳಗಾವಕಡಲೆ, ಕಥೆಯನ್ನು ನಿಲ್ಲಿಸಿ, ಪುನಹ ಮರುದಿನದ ಬೆಳಗಿನಜಾವದಲ್ಲಿ ಹೇಳಲಾ ರಂಭಿಸಿದಳು, ೭೩ ನೆಯ ರಾತ್ರಿ ಕಥೆ. ಸಿಂದುವನು, ಸಭಿಕರನ್ನು ಕುರಿತು, ಆಯಾ ! ಬಳಿಕ ನನ್ನ ಹಡಗು, ಬಹುದೂರದಲ್ಲಿ ಪ್ರಯಾಣಮೂಡುತ್ತಿರುವುದನ್ನು ಕಂಡೆನು, ಆದ ರೆ ಸ್ವಲ್ಪ ಹೊತ್ತಿಗೆ ಅದೂ ಕಾಣದಂತಾಯಿತು. ಬಳಿಕ ಇಂತಹ ನಿರ್ವ ನುಷ್ಯ ಪ್ರದೇಶದಲ್ಲಿ ಅಸಹಯನಾಗಿ, ಮಾ ಣವನ್ನೊಪ್ಪಿಸುವ ಕಾಲಂ ದಿತಲ್ಲಾ ಎಂದು, ನಾನಾ ವಿಧವಾದ ವ್ಯಸನವನ್ನು ಹೊಂದಿದೆನ, ಕ ದಿಂದ ಕೂಡಿದ ವ್ಯಸನವೆಂಬ ಸಮುದ ದ ದೊಡ್ಡ ಅಲೆಗಳು, ನನ್ನ ಮನ ಸೈಂಬ ಸಮುದ್ರದಲ್ಲಿ ಆಣೆಕ್ಷಣೆ ಏಳುತಲೆ ಇದ್ದವು. ಮೊದಲಿನ ಪ್ರತಿ ಯಾಣದಿಂದ ಸಂಪಾದಿಸಿದ ಹಣವು, ನನ್ನ ಆಯುಷ್ಮಾಲವನ್ನು ಸುಖವಾ ಗಿ ಕಳೆವುದಕ್ಕೆ ಸಾಕಾಗಿದ್ದರೂ, ನಾನಾಗಿ ಇಂತಹ ದುರವಸ್ಥೆಯನ್ನು ತಂದುಕೊಂಡುದಕ್ಕಾಗಿ, ನನ್ನನ್ನು ನಾನೆ ನಿಂದಿಸಿಕೊಂಡೆನು. ಅದರಿಂದ ಫಲವೇನು ? ಭಗವತ್ಸುಕಾನುಸಾರವಾಗಿ, ಆಗತಕ್ಕುದೇ ಆಗುವುದೆಂಬ ಧೈರ್ಯದಿಂದ ನಾನು ಎತ್ತರವಾಗಿ ಬೆಳೆದಿರುವ ಒಂದು ಮರವನ್ನು ಹತ್ತಿ ನನಗೆ ಸಹಾಯಕರವಾದ ಯಾವ ವಸ್ತುವಾದರೂ, ಕಾಣಬರುವುದೇನೋ ಎಂದು ಸುತ್ತಲೂ ನೋಡಿದನು. ಆದರೆ ಸಮುದವೂ ಆಕಾಶವೂ, ವಿನಾ ಮತ್ತೇನು ಕಾಣಬರಲಿಲ್ಲ. ಆಗ ನಾನು ಭೂಮಿಯಕಡೆಗೆ ತಿರುಗಿನೋಡಿ ದಾಗ ಬಹುದೂರದಲ್ಲಿ ಬಿಳುವಾಗಿ ಕಾಣುತ್ತಿರುವ ಒಂದು ವಸ್ತುವನ್ನು ಕಂಡು, ಮರದಿಂದಿಳಿದು, ಅದನ್ನು ಹುಡುಕಿಕೊಂಡು, ಬಹಳ ಹೊತ್ತಿನ ವರೆಗೂ, ಪ್ರಯಾಣಮೂಡಿದರೂ, ಆ ವಸ್ತು ವಿಂಥದಬುದು, ನನಗೆ ತಿಳಿ ಯಲಿಲ್ಲ. ಕಡೆಗೆ ಅದರಹತ್ತಿರಕ್ಕೆ ಬಂದು ನೋಡಲು ಬೆಳ್ಳಗೆ ಗುಂಡಾಗಿ ಯಾ, ದೊಡ್ಡದಾಗಿಯಾ, ಇರುವ ಒಂದು ಕೊಳವಾಗಿದ್ದಿತು. ಆದ ರಲ್ಲಿ ಎಲ್ಲದರ ಬಾಗಿಲುಂಟಿ ? ಎಂದು ಸುತ್ತಲೂ ತಿರುಗಿನೋಡಿದೆನು,