ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

به مد ಯವನ ಯಾಮಿನೀ ವಿನೋದ ಎಂಬ, ಯನ್ನು ದಾಟಿ ಹೊರಗೆ ಹೋಗಬೇಕೆಂದು, ಅಪ್ಲಿರುವ ಕಣ್ಣುಗಳು ನಿನಗೆ ಆಹಾರವಾಗಿರುವುದೆಂದು, ಸನ್ನೆ ಮಾಡಿ ತೋರಿಸಿದನು, ನನ್ನ ಸಹಾಯ ವು ಆತನಿಗೆ ಬೇಕಾಗಿರುವುದೋ, ಏನೋ ಎಂದೆಂದುಕೊಂಡು ನಾನು ಆತನನ್ನು ಬೆನ್ನಿನಮೇಲೆ ಕುಳ್ಳಿರಿಸಿಕೊಂಡು, ಆಚೆಯ ದಡಕ್ಕೆ ನೆಗೆದು ಕೊಂಡು ಇಳಿಯುವುದಕ್ಕೆ ಸುಲಭವಾಗಿರುವಂತೆ, ಬಗ್ಗಿ ನಿಂತುಕೊಂಡು, ಇಳಯವಂತ ಹೇಳಿದನು. ಆದರೆ ಆ ಮುದುಕನು ಬಲಹೀನವಾಗಿದ್ದಾ ಗ, ನನ್ನ ಕುತ್ತಿಗೆಯನ್ನು ಹಿಸುಕಿ, ಬೆನ್ನಿನಮೇಲೆ ಕುಣಿಯುತ್ತ ತಲೆಯನ್ನು ಹಿಡಿದು ತಿರುಗಿಸುತ್ತ, ನಾನಾವಿಧವಾದ ಕರಕೃತವನ್ನು ಮಾಡುತ್ತಿದ್ದುದರಿಂದ, ಅವನ ಮೈ ಚರ್ಮವು ಎಮ್ಮೆಯ ಚರ್ಮ ದಂತೆ ಮಂದವಾಗಿದ್ದುದರಿಂದಲೂ, ಆತನು ನನ್ನನ್ನು ಕೊಲ್ಲದೆ ಬಿಡನಂ ದು ತಿಳಿದುಕೊಂಡನು. ಇಂತೆಂದು ಹೇಳಿದ ರಹರಜಾದಿಯು, ಬೆಳ ಗಾದ ಕೂಡಲೆ ಕಥೆಯನ್ನು ನಿಲ್ಲಿಸಿ ಮರುದಿನ ಬೆಳಗಿನಜಾವದಲ್ಲಿ ಪುನಹ ಕಥೆಯನ್ನು ಹೇಳಿ ತೂಡಗಿದಳು. V'೪ ನೆಯ ರಾತ್ರಿ ಕಥೆ, ಸಿಂದಬಾದನು ರನ್ನ ಸಭಿಕರನ್ನು ಕುರಿತು ಹೀಗೆಂದು ಹೇಳ ಲಾರಂಭಿಸಿದನು. ಅಯಾ ! ಆ ಮುದುಕನು ನನ್ನನ್ನು ಕೊಲ್ಲುತ್ತಾ ನೆಂದು ತಿಳಿದು ಕೂಡಲೆ, ನಾನು ಆತನಿಗೆ ಹೆದರಿ ಮರ್ಧೆಹೋದನು. ಆದರೂ, ಆತನು ನನ್ನನ್ನು ಬಿಡದೆ ಹೊಟ್ಟೆಯಮೇಲೆ, ಕಿಬ್ಬರಿಯವೇ ಲೂ ಹೊಡೆಯುತ್ತಾ, ಕಾಲುಗಳನ್ನೆಳೆದು, ಏಳುವುದಕ್ಕೆ ಮನಸ್ಸಿಲ್ಲದಿದ್ದ ರೂ, ಬಲಾತ್ಕಾರದಿಂದ ನನ್ನನ್ನು ಏಳಿಸಿದನು. ನಾನು ಎದ್ದ ಕೂಡಲೆ ಮರಗಳ ಕೆಳಭಾಗದಲ್ಲಿ ಬಿದ್ದಿರುವ ಹಣ್ಣುಗಳನ್ನು ಆರಿಸಿಕೊಂಡು, ತಿನ್ನುವುದಕ್ಕಾಗಿ ಕೊರಡಿಸಿಕೊಂಡು ಹೋಗಿ, ಹಗಲೆಲ್ಲಾ ನಾನಾವಿಧವಾ ದ ಚಿತ್ರಹಿಂಸೆಗಳನ್ನು ಮಾಡಿ, ರಾತ್ರಿ ಯಾವ ತೊಂದರೆಯೂ ಇಲ್ಲದಂತ ನನ್ನ ಪಕ್ಕದಲ್ಲಿ ಮಲಗಿರುತ್ತಾ, ಬೆಳಗಾವಕಡಲೆ ಬಲಾತ್ಕಾರದಿಂದ, ನನ್ನನ್ನು ಕೂರದು ಏಳಿಸುತ್ತಾ ಇದ್ದನು. ಘನವಂತರೇ ! ನಾನು ಯಾವ ಕಾರಣದಿಂದ ಇಂತಹ ದುರವಸ್ಥೆಗೆ ಗುರಿಯಾದೆನೋ ಆಕಾಲದಲ್ಲಿ ಎಂತಹ ವ್ಯಸನವು, ನನಗೆ ಪ್ರಾಪ್ತವಾಯಿತ, ಎಂಬುದನ್ನು ನೀವೇ