ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಎಂಬ ದ್ವೀಪದ ರಾಜನಾದ ನಾನು ವಿಜ್ಞಾಪಿಸಿ, ಕಳುಹಿಸಿದ ಪತ್ರವೇನು ದರೆ, ನಾನು ನಮ್ಮ ಸನ್ನಿಧಾನಕ್ಕೆ ಕಳುಹಿಸಿರುವ ಬಹುಮಾನಗಳು, ಆ ತೃಲ್ಪವಾಗಿದ್ದರೂ, ನನಗೆ ತಮ್ಮಲ್ಲಿ ಉಂಟಾದ ಭಕ್ತಿ ವಾತ್ಸಲ್ಯಗಳನ್ನು ತೋರ್ಪಡಿಸುವುದಕ್ಕಾಗಿ ಕಳುಹಿಸಲ್ಪಟ್ಟಿರುವುವು. ಈ ವಿಧವಾದ ನನ್ನ ಸ್ನೇಹವನ್ನು ಕುರಿತು, ತಾವು ಮಿತ್ರ ಸಹೋದರ ವಾತ್ಸಲ್ಯಯುಕ್ತರಾಗಿ ಪರಿಗ್ರಹಿಸಿ, ನಾವು ಸಮಾನ ಯೋಗ್ಯತೆಯನ್ನು ವಹಿಸಿದ, ಪರಸ್ಪರಾನು ರಾಗವುಳ್ಳವರಾದ, ಅಣ್ಣತಮ್ಮಂದಿರೆಂದು ತಿಳಿದು, ಸಂಪೂರ್ಣ ಭ್ರಾತೃವಾ ತವುಳ್ಳವರಾಗಿರಬೇಕೆಂದು, ಮಾ ರ್ಥಿಸಿ, ಬರೆದುಕೊಂಡ ವಿಜ್ಞಾ ಪನಾವತ್ರಸಹಿಸಲಾಮು, ಬಹುಮಾನಗಳ ವಿವರ. (೧) ಕಂಪಿನಿಂದ ಮಾಡಿದ ಆರು ಅಂಗುಲ ಉದ್ದವೂ, ಒಂದು ಗುಲ ಸುತ್ತಳತೆಯ ಉಳ್ಳ ಬಟ್ಟಲು, ಅದರ ತುಂಬ ತುಂಬಿರುವ ಆಣಿ ಮುತ್ತುಗಳು, (೨) ಮತ್ತೊಂದು ಬಹುಮಾನವು ಬಂಗಾರದ ನಾಣ್ಯ ದಂತ ಮನೋಹರವಾದ ಮಚ್ಚೆಗಳಿರುವ ಹಾವಿನಸೊರೆ, ಇದರಮೇಲೆ ಮಲ ಗಿದರೆ ಸರ್ವ ರೋಗಗಳ ನಿವಾರಣೆಯಾಗುವುವು. ಬಳಿಕ ಎಂಟು ಸಾವಿ ರ ಡಾ ಮುಗಳ ತೂಕವಿರುವ ಅಗರುಹಚ್ಛೆ ಅತ್ಯಂತ ಉತ್ಕೃಷ್ಮವಾದ ಕರ್ಪೂರದ ಹೂ, ಮತ್ತು ನವರತ್ನಮಯವಾದ 'ಸರ್ವಾಭರಣಗಳಿಂದ ಶೋಭಿತಗಳಾಗಿ ಉತ್ತಮ ವಸ್ತ್ರಗಳನ್ನು ಧರಿಸಿರುವ ಉತ್ತಮ ಸ್ತ್ರೀ, ಇವು ಗಳನ್ನು ಘನವಂತರಾದ ತನ್ನ ಸನ್ನಿಧಿಗೆ ಕಳುಹಿಸಿರುವೆನೆದು ಅದರಲ್ಲಿ ಬರೆದಿದ್ದಿತು. ಬಳಿಕ ಅದನ್ನು ತೆಗೆದುಕೊಂಡು, ನನ್ನ ಸ್ನೇಹಿತರಿಂದ ಲೂ, ರಾಜನಿಂದಲೂ, ಅಪ್ಪಣೆಯನ್ನು ಪಡೆದು, ಹಡಗನ್ನು ಹತ್ಯೆ, ನಾ ನಾರೇವುಗಳಲ್ಲಿ ನಿಂತು, ಸುಖವಾಗಿ ಬಾಲಸೂರನ್ನು ತಲಪಿ ಕ್ಷೇಮದಿಂದ ಬಾಗದಾದಿಗೆ ಬಂದು, ನಾನು ಮಾಡಬೇಕಾದ ಕೆಲಸಗಳನ್ನು ಮಾಡಬೇ ಕೆಂದಿದ್ದೆನು. ಎಂದು ನುಡಿದನೆಂದು ಹೇಳಿ ಬೆಳಗಾದಕಡಲೆ ಕಥೆಯನ್ನು