ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧y ಯವನ ಯಾಮಿನೀ ವಿನೋದಿ ಎಂಬ, ನಿಂದುಬಾರನು ಮಾಡಿದ ಕಡೆಯ ಪ್ರಯಾಣ. ಆರನೆಯ ಸಾರಿ ಪ್ರಯಾಣಮಾಡಿದ ಬಳಿಕ ನಾನು ಹಿಂದೆ ಅನು ಭವಿಸಿದ ತೊಂದರೆಗಳಿಂದಲೂ, ವಯಸ್ಸುಗಳಿತವಾದುದರಿಂದ ದೇಹದಲ್ಲಿ ಮೊದಲಿನಂತ ಶಕ್ತಿ ಇಲ್ಲದುದರಿಂದಲೂ, ನಾನು ಪ್ರಯಾಣಮಾಡಬೇಕಂ ಬಾಸೆಯನ್ನು ತೊರೆದು ಸ್ಪಷ್ಟವಾಗಿ ನನ್ನ ಮನೆಯಲ್ಲೇ ಇರುತ್ತಿದ್ದನು. ಹೀಗಿರುವಲ್ಲಿ ಒಂದಾನೊಂದು ದಿನ ಸಂತೋಷಕ್ಕಾಗಿ ನನ್ನ ಸ್ನೇಹಿತರನ್ನು ಔತಣಕ್ಕೆ ಕರೆದು ಉಪಚರಿಸುತ್ತಿದ್ದನು. ಆಗ ನನ್ನ ಸೇವಕರಲ್ಲೊಬ್ಬ ನು ನನ್ನ ಬಳಿಗೆ ಓಡಿಬಂದು, ಅಯ್ಯಾ ! ಕವೀಧರ ಕಡೆಯ ಚಾರಕರು ತಮ್ಮನ್ನು ನೋಡಬೇಕೆಂದು ಹುಡುಕುತ್ತಿರುವರೆಂದು ಹೇಳಿದನು. ಕೂ ಡಲೇ ನಾನು ಆ ಚಾರಕರ ಬಳಿಗೆ ಬಂದು ಮಾತನಾಡಿದೆನು. ಅವರು ಈ ಲೀಫರು ತನ್ನ ಸಂಗಡ ಏನೂ ಮಾತನಾಡಬೇಕೆಂದಿರುವುದರಿಂದ ತಮ್ಮ ನ್ನು ಕರೆದುಕೊಂಡು ಬರುವಂತೆ ಹೇಳಿರುವರೆಂದು ನುಡಿದನು, ನಾನು ಅವರ ಸಂಗಡಲೆ ಹೊರಟ ಕಲೀಫರ ಅರಮನೆಯನ್ನು ಸೇರಿ, ಅವರಿಗೆ ಸಾದಾಕ್ರಾಂತನಾಗಿ ವಂದನೆಗಳನ್ನು ಮಾಡಿ ನಿಂತುಕೊಂಡೆನು. ಆಗ ಕ ಲೀಫರು ನನ್ನನ್ನು ನೋಡಿ, ಅಯಾ ! ನಿಂದುಬಾದನೆ, ನಿನ್ನಿಂದ ನನ ಗೊಂದು ಕಾರ್ಯವಾಗಬೇಕಾಗಿರುವುದು, ಅದು ನಿನಗೂ ಕೂಡ ಉತ್ತಾ ಹಕರವಾದುದು. ಅದೇನೆಂದರೆ, ಸಿರಂದಿಬಾ ದ್ವೀಪದ ರಾಜನಿಗೆ ನಾನು ಕೊಡುವ ಉಡುಗೊರೆಗಳನ್ನು ಬಹುಮಾನಗಳನ್ನು ಸಹ ತಗೆದುಕೊಂ ಡು, ನನ್ನ ಕಡೆಯ ರಾಯಭಾರಿಯಾಗಿ ನೀನು ಹೋಗಿ ಬರಬೇಕೆಂದು ಬೇಡಿಕೊಳ್ಳುವನು, ಆತನು ನನಗೆ ಬಹುಮಾನವನ್ನು ಕಳುಹಿಸಿದವ ಲೆ, ನಾನೂ ಆತನಿಗೆ ಬಹುಮತಿಯನ್ನು ಕಳುಹಿಸುವುದು ಅಗತ್ಯವೇ ಅಲ್ಲವೆ ? ಎಂದು ಹೇಳಿದರು, ಕಲೀಫರು ಹೇಳಿದ ಮಾತುಗಳು ನನ್ನ ಕಿವಿಗಳಿಗೆ ಸಿಡಿಲಿನಂತೆ ಬಿದ್ದವು. ನಾನು ಕಲೀಫರನ್ನು ನೋಡಿ, ಸಾವಿರಾ ! ನಾನು ಇದುವರೆ ಗ ಅನುಭವಿಸಿರುವ ತೊಂದರೆಗಳನ್ನು ಸಾವಧಾನಚಿತ್ರವಾಗಿ ಕೇಳಿ, ಆದ