ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೩೨೫ ರುವಂತೆ ಮಾಡುವುದಕ್ಕಿಂತಲೂ, ಅನ್ಯವಾದ ಪ್ರತ್ಯುಪಕಾರವಾವುದೂ, ನನಗೆ ಬೇಕಾಗಿಲ್ಲ. ಆದುದರಿಂದ ಇವು ದಯಮಾಡಿ ನನ್ನನ್ನು ಕಳುಹಿ ಸಿಕೊಡಬೇಕೆಂದು ಬೇಡಿಕೊಂಡೆನು. ಕೂಡಲೆ ಆತನು ಅಯಾ ! ಈಗತಾನೆ ಪೂರ್ವದಿಕ್ಕಿನ ಘಾಳಿ ಬೀಸುತ್ತಿರುವುದು. ಇನ್ನು ಕೆಲವು ದಿವಸಗಳಗೆ ಗಜದಂತದ ವ್ಯಾಪಾರ ಕಾಗಿ, ಅನೇಕಾನೇಕ ಹಡಗುಗಳು ಇಲ್ಲಿಗೆ ಬರುವುವು. ಕೂಡಲೆ ಅವು ಗಳ ಮೇಲೆ ನಿನ್ನನ್ನು ಕಳುಹಿಸಿಕೊಡುವನು. ಹೆದರಬೇಡವೆಂದು ಹೇ ಳಲು, ನಾನು ಎಂದಿಗೆ ಹಡಗುಗಳು ಬರುತ್ತವೆಯೋ ? ಎಂದು ಹಂಬಲಿ ಸುತ್ತಾ, ಪ್ರತಿದಿನವೂ ವಿಚಾರಿಸುತ್ತಿದ್ದೆನಲ್ಲದೆ, ಹಡಗುಗಳು ಬರುವವರೆ ಗೂ ಆ ಪರ್ವತಾಗ್ರಕ್ಕೆ ಹೋಗಿ ಬೇಕಾದಷ್ಟು ದಂತಗಳನ್ನು ತಂದು, ಕೂಡಿಹಾಕುತ್ತಿದ್ದೆನು, ಬಹಳವಾಗಿ ಹೇಳಿ ಪುಯೋಜನವೇನು? ನನ್ನು ದೇಶದಲ್ಲಿ ಪ್ರಚಾರದಲ್ಲಿರುವ ಉತ್ತಮವಾದದಂತಗಳೆಲ್ಲವೂ ಆಪರ್ವತದಿಂದಲೇ ತಗೆದುಕೊಂಡು ಬಂದವುಗಳೇ ಹೊರತು, ಮತ್ತೆಲ್ಲಿಂದಲೂ ತಂದವುಗಳಲ್ಲ. ಇಂತಂದುಹೇಳಿ ಪ್ರಹರಜಾದಿಯು, ಬೆಳಗದ ಕಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಎಂದಿನಂತೆ ಸುಲ್ತಾನನ್ನು ಕುರಿತು ಹೇಳ ಲಾರಂಭಿಸಿದಳು. ೯೦ ನೆಯ ರಾತ್ರಿ ಕಥೆ. ಸಹರಜಾದಿಯು ಸುಲ್ತಾನರನ್ನು ನೋಡಿ ! ಸ್ವಾಮಿಾ ! ಬಳಿಕ ಸಿಂದುಬಾದನು ತನ್ನ ಸಭಿಕರನ್ನು ಕುರಿತು, ಹೀಗೆಂದು ಹೇಳತೊಡಗಿ ದನು. ಬಳಿಕ ನನ್ನ ದೇವಿಗೆ ಹಡಗುಗಳು ಬಂದಕೂಡಲೇ ನಮ್ಮ ಯಜ ಮಾನನು ನನ್ನ ಪ್ರಯಾಣಕ್ಕಾಗಿ, ಒಂದು ಹಡಗನ್ನು ತಾನೇ ಗೊತ್ತು ಮಾಡಿ, ನನಗೂ ಬೇಕಾದಷ್ಟು ದಂತಗಳನ್ನು ಕೊಟ್ಟು ನಾನು ಊರು ಸೇರುವರೆಗೂ, ಸಾಕಾದಷ್ಟು ಆಹಾರಪದಾರ್ಥಗಳನ್ನು ಹಡಗಿನಲ್ಲಿ ತುಂಬಿ ತನ್ನ ದೇಶದಲ್ಲಿರುವ ಅತ್ಯುತ್ತಮವಾದ ವಸ್ತುಗಳನ್ನು ಬಹುಮಾನವಾಗಿ ಕೊಟ್ಟು, ಸಂತೋಷಯುಕ್ತನಾಗಿ ನನ್ನನ್ನು ಆಲಿಂಗಿಸಿಕೊಂಡು, ಸುಖ ಪ್ರಯಾಣವನ್ನು ಬಯಸಿ, ನನ್ನನ್ನು ಸಾಗಕಳುಹಿಸಿದನು. ಆತನು ಮೂಡಿದ ಉಪಕಾರಕ್ಕಾಗಿ, ಆತನನ್ನು ಬಹಳವಾಗಿ ವಂದಿಸಿ, ಹಡಗನ್ನು