________________
Roole ಯಕನ ರೂಮಿನೀ ವಿನೋದ, ವಿರ್ಥ ಹತ್ತಿ ಮುಂದೆ ಹೊರಟನು. ಆದರೂ, ಆ ದೊಡ್ಡ ಮನುಷ್ಯನು ನನ್ನ ಸರೆಯನ್ನು ಬಿಡಿಸಿದುದಕ್ಕಾಗಿ, ತುಂಬ ಸಂತೋಷಯುಕ್ತನಾಗಿ ಸದಾ ಕಾಲವೂ ಸ್ಮರಿಸುತ್ತಿದ್ದನು. ಹೊಸಹೊಸದಾಗಿ ಆಹಾರಪದಾರ್ಥಗಳನ್ನು ಸಂಗ್ರಹಿಸುವುದ ರಲ್ಲಿ ಅಲ್ಲಲ್ಲಿ ನಿಂತು, ವ್ಯಾಪಾರಮಾಡುತ್ತಾ, ಬಾಲಸೂರು ಪ್ರಾಂತ್ಯಕ್ಕೆ ಬಂದು ನೆಲದಮೇಲೆ ಪ್ರಯಾಣಮಾಡುತ್ತಾ, ನಾನಾ ತೊಂದರೆಗಳನ್ನು ಅನುಭವಿಸಿಕೊಂಡು, ಜನಗಳ ಗುಂಪಿಗೆ ಸೇರಿಕೊಂಡು ಹೊರಟುಬರು ತಿರುವ ಕಾಲದಲ್ಲಿ, ಹಿಂದ ನಾನು ಅನುಭವಿಸಿದಂತಹ, ಸಮುದ್ರದ ಕಳ್ಳ ರ, ಸರ್ಪಗಳ, ಮತ್ತು ಸಮುದ್ರದ ಭಯವೇನೂ ಇಲ್ಲವೆಂದು ತಿಳಿದು, ಶಾಂತಿಯಿಂದ ಪ್ರಯಾಣಮಾಡಿ, ಬಾಗದದು ಪಟ್ಟಣವನ್ನು ಸೇರಿ, ಕರೀ ಫರ ಆಸ್ಥಾನವನ್ನು ಹೊಕ್ಕು, ನಾನಿದುವರಿಗೂ, ಅನುಭವಿಸಿದ ತಂದ ರೆಗಳನ್ನು ಅವರ ಸನ್ನಿಧಿಯಲ್ಲಿ ವಿಜ್ಞಾಪಿಸಿಕೊಂಡೆನು. ಕಲೀಫರಾದರೂ, ಅತ್ಯುತ್ಸಾಹದಿಂದ ನನ್ನನ್ನು ಆಲಿಂಗಿಸಿಕೊಂಡು, ಅಯಾ ! ನೀನು ಬರು ವುದು ಸಾವಕಾಶವಾದುದರಿಂದ ನಾನು ವ್ಯಸನಾಕ್ರಾಂತನಾಗಿ ಭಗವಂತನು ನಿನಗೆ ಆಯುರಾರೋಗ್ಯವನ್ನು ಕೊಡಲೆಂದು, ಸರ್ವದಾ ಪ್ರಾರ್ಥಿಸುತ್ತಿ ದ್ದನೆಂದು ಹೇಳಿದರು. ಬಳಿಕ ನಾನು ಆನೆಗಳ ದಂತವನ್ನು ಅವರಿಗೆ ತೋ ರಿಸಿ, ಆನೆಗಳಿಂದ ನನಗೆ ಉಂಟಾದ ತೊಂದರೆಯನ್ನು, ನನ್ನ ಯಜಮಾ ನನು ಮಾಡಿದ ಬಹುಮಾನವನ್ನೂ, ನಾನು ಪ್ರಯಾಣಮಾಡಿ ಬಂದ ಚ ರಿತ್ರೆಯನ್ನೂ ವಿಶದವಾಗಿ ಕಂಫರಿಗೆ ಹೇಳಲು, ಅವರು ಮೊದಲಿಗಿಂತಲೂ ಸಂತವಚಿತ್ತರಾಗಿ, ಆ ಚರಿತ್ರೆಯನ್ನು ಬಂಗಾರದ ಶಾಸನಲ್ಲಿ ಕೆತ್ತಿಸಿ, ತಮ್ಮ ಬಂಡಾರದಲ್ಲಿಡುವಂತೆ ಆಜ್ಞೆ ಮಾಡಿದರು. ನಂತರ ನಾನು ಕಲೀಫರಿಂದ ಆತಗೆದುಕೊಂಡು, ನನ್ನ ಮನೆ ಯನ್ನು ಸೇರಿ ಪತ್ನಿ ಪುತ್ರ ಪರಿವಾರಯುಕ್ತನ:ಗಿ ಸಂತೋಷದಿಂದಿದ್ದೆನು. ಎಂದು ಹೇಳಿ ನಿಂದುಬಾದನು, ಕೂಲಿಕಾರನಾದ ಹಿಂದುಬಾದನನ್ನು ನೋ ಡಿ ಅಯಾ ! ಸ್ನೇಹಿತನ ! ಇಂತಹ ದುರವಸ್ಥೆಗಳನ್ನು ಪಣಕಮ್ಮಗ ಳನ್ನು ಅನುಭವಿಸಿ, ಪರದೇಶದಲ್ಲಿ ನಾನಾತೊಂದರೆಗಳಗೀಡಾಗಿ ಬಂದಿರುವ ನಾನು ಕಡೆಗಾಲದಲ್ಲಿ ಇಂತಹ ಐಶ್ವರ್ಯವನ್ನು ಅನುಭವಿಸುವುದು,