ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ೩೦೬ ಅನ್ಯಾಯವೆ ? ಎಂದು ಹೇಳಿದಕೂಡಲೆ, ಆತನು ನಿಂದುಬಾದನ ಬಳಿಗೆ ಬಂದು, ಆತನ ಕೈಗಳನ್ನು ಮುತ್ತಿಟ್ಟುಕೊಂಡು, ಸಾವಿರಾ ! ನಾನು ಇ ದುವರಿಗೂ ಕೇಳಿದ ತಮ್ಮ ಚರಿತ್ರೆಯಿಂದ ತಾವು ನಾನಾ ಕಮ್ಮಗಳನ್ನು ಅನುಭವಿಸಿರುವಿರೆಂಬುದು ಸ್ಪಷ್ಮವಾಗಿಯೇ ಗೊತ್ತಾಗುತ್ತದೆ. ತಾವು ಇಂತಹ ತೊಂದರೆಗಳನ್ನನುಭವಿಸಿ, ಸಂಪಾದಿಸಿದ ಹಣವನ್ನು ಸತ್ಪಾತದ ದಾನಮಾಡು, ಸತ್ಯವಂತನಾಗಿ ಬಾಳುತ್ತಿರುವುದರಿಂದ, ಭಗವಂತನು ತಮಗೆ ಸಕಲ ಸಾಮಾಜೈ ಸುಖವನ್ನು ಬಹು ಕಾಲ ಅನುಭವಿಸುತ್ತಿರು ವಂತೆ ಮಾಡಲೆಂದು ಬೇಡುವೆನು, ನಾನು ಕದಡಲಾರದೆ ಸಂಕಟದಿಂದಾಡಿದ ಮಾತುಗಳನ್ನು ನೀವು ದಯಮಾಡಿ ಮರೆತುಬಿಟ್ಟು, ನನ್ನನ್ನು ಕ್ಷಮಿಸಬೇಕೆಂದು ಬೇಡಿ ಕೊಳ್ಳಲು, ಸಿಂದುಬಾದನು ಕೂಲಿಕಾರನಿಗೆ ಪುನಹ ಒಂದು ನೂರು ಸರ್ಕೀ ಸುಗಳನ್ನು ಕೊಟ್ಟು ಅಯಾ ! ನೀನು ಇನ್ನು ಮೇಲೆ, ಕೂಲಿಮಾಡ ಬೇಕಾದ ಅಗತ್ಯವೆನೂ ಇಲ್ಲ, ಭೋಜನಕಾಲದಲ್ಲಿ ಬಂದು ನನ್ನ ಮನೆ ಯಲ್ಲಿ ಊಟಮಾಡಿಕೊಂಡು ಹೋಗಿ, ಸ್ಪಷ್ಟವಾಗಿ ಜೀವನಮಾಡಿಕೊಂಡು ಸುಖನಾಗಿರೆಂದು ಹೇಳಿದ ನಿಂದುಬಾದನ ದಯಾಗುಣವನ್ನು ಕೂಲಿಕಾರ ನು, ತನ್ನ ಯಾವಜೀವವೂ ನೆನೆಯುತ್ತಾ, ಸಂತೋಷಯುಕ್ತನಾಗಿ ಭಗವಧ್ಯಾನದಿಂದ, ಕಾಲವನ್ನು ಕಳೆಯುತ್ತಿದ್ದನೆಂದು ಪ್ರಪರಚದಿ ಕಥೆ ಯನ್ನು ನಿಲ್ಲಿಸಿ, ಬೆಳೆಗಾಗದಿರುವುದನ್ನು ಕಂಡು, ಸುಮ್ಮನಿರದೆ ಮತಂ ದು ಕಥೆಯನ್ನು ಹೇಳಿ ಆಳಿದ ಸ್ವಾಮಿಯವರಿಂದ ಸುಲ್ತಾನರ ಮನಸ್ಸ ನ್ನು ಸಂತೋಷ ಪಡಿಸಬೇಕೆಂಬಭಿಲಾಷೆಯನ್ನು ಸಾರ್ಥಕಗೊಳಿಸ ಲಾರಂಭಿಸಿದಳು.