ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೨) ಅರೇಬಿರ್ಯ ನೈಟ್ಸ್ ಕಥೆಗಳು ಬಳಿಗೆ ಬಂದು, ನೀನು ಯಾರು ಎಂದು ಕೇಳಿದನು. ಅದಕ್ಕಾಮುದುಕ ನು, ಅಯ್ಯಾ ! ನಾನೊಬ್ಬ ಬೆಸ್ತರವನು, ಈ ಊರಿನಲ್ಲಿರುವ ಮನುಷ್ಯ ರಲ್ಲಿನ ಬಹು ದರಿದ್ರನಾದವನು. ಈ ದಿನ ಬೆಳಿಗ್ಗೆ ಮೀನು ಹಿಡಿಯುವು ದಕ್ಕಾಗಿ ಹೋಗಿ, ಇದುವರಿಗೂ ಶ್ರಮಪಟ್ಟರೂ, ನನಗೊಂದು ವಿಾನಾ ದರೂ ದೊರಕರಿಲ್ಲ, ನನಗೊಬ್ಬ ಹೆಂಡತಿಯ, ಮಕ್ಕಳ ಇರುವರು. ಅವರಿಗೆ ಅನ್ನವು ದೊರಕದೆ ಹೋಯಿತಂದು ಹೇಳಿದನು. ಬಳಿಕ ಕಲೀಫರಿಗೆ ಆತನಮೇಲೆ ಕರುಣ ಹುಟ್ಟಿದುದರಿಂದ ಅಯ್ಯಾ ! ನೀನು ಮತ್ತೊಂದು ನದಿಯಲ್ಲಿ ಬಲೆಯನ್ನು ಬೀಸಿನೋಡು. ನಿನಗೇನೂ ದೊರಕದಿದ್ದರೆ, ನಾನು ಒಂದು ನೂರು ಸೆರ್ಕ್ಸಿಸುಗಳನ್ನು ಕೊಡುವೆನೆಂದು ಹೇಳಿದರು. ಆ ಮಾತುಗಳನ್ನು ಕೇಳಿದ ಕೂಡಲೆ, ಆ ಮುದುಕನು ತಾನಿದುವರೆಗೂ, ಅನುಭವಿಸಿದ ಶ್ರಮವನ್ನು ಮರೆತು, ಅವ ರುಗಳನ್ನು ಕರೆದುಕೊಂಡು, ಟೈಗ್ರಿಸ್ ನದಿಯಬಳಿಗೆ ಬಂದು, ತನ್ನ ಮ ನಸ್ಸಿನಲ್ಲಿ ಈ ದೊಡ್ಡ ಮನುಷ್ಯರು, ನ್ಯಾಯಸ್ಥರಾಗಿಯೂ, ಸತ್ಯವಂತರಾ ಗಿಯ, ದಯಾಪರರಾಗಿಯ ಇರುವರು. ನನ್ನ ಶ್ರಮಕ್ಕೆ ತಕ್ಕಷ್ಟು ಪ್ರತ್ಯುಪಕಾರವನ್ನು ಮಾಡದಿದ್ದರೂ, ಅವರು ಹೇಳಿದಂತೆ ನಡೆಸಿಕೊಟ್ಟ ರೆ, ಅದು ನನಗೆ ದೊಡ್ಡ ಭಾಗ್ಯವಿರುವುದೆಂದುಕೊಂಡನು. ಬಳಿಕ ಅವ ರೆಲ್ಲರೂ ನದಿಯನ್ನು ಸೇರಿದ ಬಳಕ, ಬೆಸ್ತನು ತನ್ನ ಬಲೆಯನ್ನು ಬೀಸಿ, ಬಲವಾಗಿ ಹಿಡಿದೆಳೆದನು, ಆದರೆ ಅದರಲ್ಲಿ ಬಹು ಭಾರವಾದದೊಂದು ಪಟ್ಟಿ ಗೆ ಬಂದುದನ್ನು ನೋಡಿ, ಕಲೀಫರು ಕಡಲೆ ಬೆಸ್ತನಿಗೆ ಒಂದು ನೂರು ಸಕ್ರಿ೯ಸುಗಳನ್ನು ಕೊಟ್ಟು ಕಳುಹಿಸಿದರು. ಮಸೂದನು ಕಲೀಫರ ಅಪ್ಪಣೆಯಂತೆ, ಆ ಪೆಟ್ಟಿಗೆಯನ್ನು ಹೊತ್ತುಕೊಂಡನು. ನವರು, ಬೇಗ ನಡೆದು ನಗರವನ್ನು ಸೇರಿ ಆ ಪೆಟ್ಟಿಗೆಯನ್ನು ತೆರೆದು ನೋಡಬೇ ಕೆಂದು ಬಾಗಿಲನ್ನು ತೆರೆದನು, ಆಗ ಅದರಲ್ಲಿ ಕೆಂಪಿನ ದಾರದಿಂದ ಹೊಲಿ ದು ಕಟ್ಟಿದ್ದ ಒಂದು ತಾಳೆಯೋಲೆಯ ದೊಡ್ಡ ಗಂಡಿದ್ದಿತು. ಅದನ್ನು ಬಿಚ್ಚಿ ನೋಡಬೇಕೆಂಬ ಕುತೂಹಲದಿಂದ ಕಥನು, ಕತ್ತಿಗಳಿಂದ ಕಟ್ಟುಗಳ ನ್ನು ಕೊಯ್ದು ನೋಡವಲ್ಲಿ, ಅದರಲ್ಲಿ ಬಹು ರೂವವತಿಯಾದ ಒಬ್ಬ ಹಂಗು ತುಂಡುತುಂಡಾಗಿ ಕತ್ತರಿಸಿ, ತುಂಬಲ್ಪಟ್ಟಿರುವುದನ್ನು ಕಂಡು ಅತ್ಯಾಶ್ಚರ್ಯಭರಿತನಾದನು, ಎಂದು ಹೇಳಿ ಪಹರಜಾದಿಯು ಬೆಳಗಾದ