________________
ಅರೇಬಿಯರ್ ನೈಟ್ಸ್ ಕಥೆಗಳು, ೩೫೧ ಮಂತ್ರಿಯ ಪದವಿಯನ್ನು ಕೊಟ್ಟನು. ಮರುದಿನ ಪ್ರಧಾನಮಂತ್ರಿಯು ತನ್ನಳಿಯನು ರಾಜಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿರುವುದನ್ನು ನೋ ಡಿ, ಆನಂದಭರಿತನಾದನು. ಸಭಾಸದರು ನೌರೋದೀನನ ಕಾರ್ಯನಿರ್ವಾ ಹಶಕ್ತಿಯನ್ನು ಕಂಡು ಆಶ್ಚರ್ಯಯುಕ್ತರಾದರು. ಈತರದಿಂದ ತನ್ನ ವಂಶಾಭಿವೃದ್ಧಿಯಾದುದನ್ನು ಸಂಪೂರ್ಣಸುಖದಿಂದ ಕಂಡು, ನಾಲ್ಕು ಸಂ ವತ್ಸರಗಳ ವರಿಗೆ ಕಾಲವನ್ನು ಕಳೆದು, ಪ್ರಧಾನಮಂತ್ರಿಯ ದೈವಯೋಗ ದಿಂದ ಮರಣಹೊಂದಿದನು. ನೌರೋದೀನನು ತನ್ನ ಮಾವನ ಉತ್ತರ ಕ್ರಿಯಾದಿಗಳನ್ನು ಯಥಾಕಮವಾಗಿ ಅತ್ಯಂತ ಭಕ್ತಿಯಿಂದ ಮಾಡಿ, ತನ್ನ ಮಗನಾದ ಬದರೋದೀನನಿಗೆ ಏಳು ಸಂವತ್ಸರಗಳು ಕಳದ ಕೂಡಲೆ, ಉತ್ತಮರಾದ ಉಪಾಧ್ಯಾಯರನ್ನು ನಿಯೋಗಿಸಿ, ವಿದ್ಯೆಯನ್ನು ಕಲಿಸಿ ದನು. ಆ ಹುಡುಗನಾದರೆ ಬುದ್ಧಿ ಚಾತುರದಲ್ಲಿ ಬಹು ಗಟ್ಟಿಗನಾದುದ ರಿಂದ ಸಕಲ ವಿದ್ಯೆಗಳನ್ನು ಕಲಿತುಕೊಂಡನು. ಎಂದು ಹೇಳಿ ಪ್ರಹರ ಜಾದಿ, ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನಜೆನ ದಲ್ಲಿ ಹೇಳತೊಡಗಿದಳು. ++as+ F೫ ನೆಯ ರಾತ್ರಿ ಕಥೆ. ಗಯವರನು ಕಲೀಫರನ್ನು ನೋಡಿ ಇಂತಂದನು, ಬದರೋ ದೀನನು ಎರಡು ಸಂವತ್ಸರಗಳ ವರಿಗೆ ವಿದ್ಯಾಭ್ಯಾಸಮಾಡಿ ಬಳಕ ಖು ರಾನನ್ನು ಕಂದಪಾಠಮಾಡಿದನು. ಆದುದರಿಂದ ಲೋಕವ್ಯವಹಾರವನ್ನು ತಿಳಿಯುವುದಕ್ಕೆ ವಿದ್ಯೆಗಳನ್ನು ಅಭ್ಯಾಸಮಾಡಿ, ತನ್ನ ಪಾಂಡಿತ್ಯದಿಂದ ಪಂಡಿತಮಂಡಲಿಯವರನ್ನು ಒಪ್ಪಿಸಿದನು. ಬಳಿಕ ತಂದೆಯಾದ ನೌರೋ ದೀನನು ಮಗನ ಪಾಂಡಿತ್ಯಕ್ಕೂ, ಮುಖಭಾವಕ್ಕೂ ಸಂತ: ಸ್ಮಗೊಂಡ ನನಗಿ ಸಂತೋಷದಿಂದಿದ್ದನು. ಈತನು ವಿದ್ಯಾಭ್ಯಾಸಮಾಡುತ್ತಾ ಇ ದ್ದ ಕಾಲದಲ್ಲಿ, ಆತನ ತಂದೆಯು ತನ್ನ ಮಗನನ್ನು ಎಲ್ಲಿಯೂ ಕರೆದುಕೊಂ ಡೇ ಹೋಗಲಿಲ್ಲ, ಬಳಕ ತನ್ನ ಮಗನ ಪಾಂಡಿತ್ಯವನ್ನು ಸುಲ್ತಾನರಿಗೆ ತಿಳಿಯದ ಡಿಸಬೇಕೆಂದು, ಆರನನ್ನು ರಹಸ್ಥಾನಕ್ಕೆ ಕರೆದುಕೊಂಡು ಹೋಗಿ,