ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೩೭೧ ಯನ್ನು ಕಲಿಯುತ್ತಾ ಇದ್ದನು. ಹೀಗಿರುವಾಗ ಕೈರೋನಗರದಲ್ಲಿ ಮಂತ್ರಿ ಪುತಿಯು ಎಚ್ಚತ್ತು ತನ್ನ ಪಕ್ಕದಲ್ಲಿದ್ದ ಗಂಡನು ಇಲ್ಲದಿರುವುದರಿಂದ, ಆಹಾ ! ನಾನು ಎಚ್ಚರವಾಗಿ ನಿದ್ರೆಯನ್ನು ತೊರೆ - ನೆಂದು, ನನ್ನ ಗಂಡನು ಮೆತ್ತಗೆ ಎದ್ದು ಹೋಗಿರಬೇಕು, ಪುನಹ ಇಲ್ಲಿಗೆ ಬಂದೇಬರುವನೆಂದು ಎದುರು ನೋಡುತ್ತಾ ಇದ್ದಳು. ಇತ್ತ ಸುಲಾನನು ತನಗೆಮಾಡಿದ ದುಷ್ಕ ತ್ಯ ದಿಂದ, ಅತ್ಯಂತ ವ್ಯಸನಾಕಾ |ಂತನಾದ ಮಂತ್ರಿ ಯು ತನ್ನ ಮಗಳು ಹೊಂದಿರುವ ದುರ್ದಶೆಗಳನ್ನು ನೋಡಬೇಕೆಂದು, ಅವಳು ಮಲಗಿಕೊಂಡಿ ರುವ ಮನೆಯ ಬಾಗಿಲಿಗೆ ಬಂದು, ಕದವನ್ನು ತಟ್ಟಿದನು. ಆತನ ದನಿ ಯಿಂದ ತದೆಯಂದರಿತು ಬಾಗಿಲನ್ನು ತೆಗೆದು, ಸುತೋಷದಿಂದ ಬರಮಾಡಿ ಕೊಂಡಳು. ಆ ಮಂತ್ರಿ ಯಾದರೆ ತನ್ನ ಮಗಳು ಕುರೂಪಿಯನ್ನು ಮದುವೆ ಮಾಡಿಕೊಂಡುದರಿ ದ ವ್ಯಸನಾಕಾಂತಳಾಗಿ, ಚಿಂತಿಸುವಳೆಂದು ಯೋಚಿಸಿ ನೋಡುವುದಕ್ಕೆ ಬಂದಾಗ ಸಂತೋನಚಿತ್ರಳಾಗಿರುವ ಮಗಳನ್ನು ಕುಡು, ಎಲೆಗೆ ನಿರ್ಭಾಗ್ರಶಿರೋಮಣಿ ! ನೀನು ಅಂತಹ ಕುರೂಪಿಯಾದ ಪುರುಷನನ್ನು ಮದುವೆ ಮಾಡಿಕೊಂಡು, ನನ್ನ ಮುಂದೆ ಇನ್ನೊಂದು ಆನಂದದಿಂದಿರುವೆಯಾ ? ಎಂದು ಗಟ್ಟಯಾಗಿ ಕೂಗಿ ಹೇಳಿದನು. ಇಂತಂದು ಹೇಳಿ ಚಳಗಾದಕೂಡಲೆ ಕಥೆಯನ್ನು ನಿಲ್ಲಿಸಿದ, ಸಹರಜಾದಿ ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೦೬ ನೆಯ ರಾತ್ರಿ | ಕಥೆ. ಸಹರಜಾದಿಯು ಸುಲ್ತಾನನನ್ನು ಕುರಿತು, ಆಳಿದ ಮಹಾ ಸವಿಾ ! ಬಳಿಕ ಗಯವರನೆಂಬ ಪ ಧಾನಮಂತ್ರಿ ಯು, ತನ್ನ ಯದ ಮಾನನಾದ ಕಲೀಫನನ್ನು ಕುರಿತು ಇಂತಂದು ಹೇಳಲಾರಂಭಿಸಿದನು. ತನ್ನ ತಂದೆಯು, ತಪ್ಪು ಅಭಿಪಾಯದಿಂದ ತನ್ನನ್ನು ನಿಂದಿಸುತ್ತಿರುವ ನೆಂದು ತಿಳಿದು, ಮಂತ್ರಿ ಪುತಿಯು ತಂದೆಯೇ ! ಆ ಗೂನನು ನನ್ನ ಗಂಡ ನಲ್ಲ. ಆತನನ್ನು ಮದುವೆ ಮಾಡಿಕೊಳ್ಳುವದಕ್ಕಿಂತಲೂ ಸಾಯುವುದು ಮೇಲೆಂಬುದು ನನಗೆ ತಿಳಿದಿರುವುದು, ಮದುವೆಗಾಗಿ ಬಂದ ಜನರೆಲ್ಲರೂ, ಹುಸಿನಗೆಯಿಂದ ನಕ್ಕ ಪರಿಹಾಸ ಮಾಡಿದುದರಿಂದ ಆ ಗೂನನು ಎಲ್ಲಿಯೂ ಹೊರಟುಹೋದನು. ಬಳಿಕ ಸುಂದರಾಂಗನಾದ ಯುವಕನೊಬ್ಬನು ನನ್ನ ಗಾಣಿಗ ಹಣವನ್ನು ಮಾಡಿದುದರಿಂದ, ಆತನೇ ನನ್ನ ಗಂಡನೆಂದು