ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, & & ದೋಷಕ್ಕಾಗಿ, ಪ್ರಾಣವನ್ನು ತೆಗೆಯಬಹುದೇ ? ಎಂದು ಬದರೋದೀನನು ಬಹಳವಾಗಿ ಅಳುತ್ತಿದ್ದನೆಂದು ಹೇಳಿ, ನಹರಜಾದಿ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳತೊಡಗಿದಳು. ೧೨ ನೆಯ ರಾತ್ರಿ ಕಥೆ. ವಹರಜಾದಿ ಸುಲ್ತಾನನ್ನು ನೋಡಿ ಫಿಯರೇ ! ಗಯವರನು ಕಲೀಫರನ್ನು ಕುರಿತು, ಮುಂದೆ ಕಥೆಯನ್ನು ಹೇಳತೊಡಗಿದನು. ಎಂತಂ ದರೆ :-ಸಂಸದೀನನು ಬದರದೀನನಿಗೆ ಕಾಣದಂಡನೆಯನ್ನು ಮಾಡ ಬೇಕೆಂದಿರುವುದನ್ನು ಹೇಳಿದಕಡಲೆ, ಆಹಾ! ಮಿಠಾಯಿಯಲ್ಲಿ ಮೆಣಸನ್ನು ಹಾಕುವುದುಂಟೆ ? ಹಾಗ ಹಾಕಬೇಕಾಗಿದ್ದರೂ, ಹಾಕದಿದ್ದರೆ ಇಂತಹ ಶಿಕ್ಷೆಯನ್ನು ಮಾಡಬೇಕೆ ? ಇದೆಂತಹ ವಿಚಿತ್ರ ವಾದ ಬುದಿ ಎಂದು ಪರಿ ಹಾಸ್ಯ ಮಾಡಿ ನಗು, ಮುಂದಿನ ಕಥೆಯನ್ನು ಕೇಳತೊಡಗಿದನು. ಬಳಿಕ ಬದರದೀನನು, ಅಯಾ ! ನಿರಪರಾಧಿಯಾದ ನನ್ನ ಅಂಗಡಿಯ ಸಾಮಾನುಗಳನ್ನು ಹಾಳುಮಾಡಿ, ನನ್ನನ್ನು ಮಗದೋಪಾದಿಯಲ್ಲಿ ಪೆಟ್ಟಿಗೆಯಲ್ಲಿ ಕೂಡಿ, ನಿರಂಧದಲ್ಲಿಟ್ಟಿರುವದೂ ಸಾಲದೆ. ನನ್ನ ಪ್ರಾಣ ವನ್ನು ತೆಗೆಯಬೇಕೆಂದಿರುವಿರಲ್ಲಾ ! ಉತ್ತಮರಾದ ಮುಸಲ್ಮಾನವ ಭು ಗಳು ಇಂತಹ ಕೃತ್ಯವನ್ನು ಮಾಡಬಹುದೆ ? ಎಂದು ಹೇಳುತ್ತಿರುವಾಗ ಚಾಗಕರು ತನ್ನನ್ನು ದಂಡಿಸುವುದಕ್ಕೆ ಸಿದ್ಧರಾಗಿ ನಿಂತಿರುವುದನ್ನು ನೋಡಿ, ಬಹಳವಾಗಿ ಅಳುವುದಕ್ಕೆ ಸಾ ರಂಭಿಸಿದನು, ಮತ್ತು ಭಗವಂತನನ್ನು ಕುರಿತು, ಆಹಾ ದೈವವೇ ! ನನಗೆ ಈಗ ಪಾ ಪ್ಯವಾಗಿರುವ ದುರವಸೆ ಯನ್ನು ನೋಡಿದೆಯಾ ! ನಾನು ಯಾರನ್ನು ಹಿಂಸೆ ಮಾಡಿದೆನು, ಯಾರ ಸಾ ಣವನ್ನು ತೆಗೆದುಕೊಂಡನು. ಮತಾಚಾರವಿರುದ್ಧವನ್ನು ಆಚರಿಸಿದವ ನಾಗಿ ಏನಾದರೂ ಇರುವೆನೆ ? ಯಾವುದೆಂದು ತಪೂ ಇಲ್ಲದಿದ್ದರೂ, ಮಿಠಾಯಿಯಲ್ಲಿ ಮೆಣಸನ್ನು ಹಾಕದಿರುವುದಕ್ಕಾಗಿ ನನ್ನನ್ನು ಹೀಗೆ ದಂಡನೆಗೆ ನೀನು ಗುರಿಮಾಡಬಹುದೆ ? ಎಂದು ಮೊರೆಯಿಟ್ಟನು, ಅಗ್ಯರಲ್ಲಿ ರಾತ್ರಿಯು ಬಹಳ ಹೊತ್ತು ಕಳೆದುಹೋದುದರಿಂದ, ಸಂಸದೀನನು ಒದರೋದೀನನನ್ನು ನೋಡಿ, ಹಾಗಾದರೆ ನಾಳರಾತ್ರಿಯ ವರೆಗೂ ಈ ಪೆಟ್ಟಿಗೆಯಲ್ಲಿರು. ಬಳಿಕ ನಿನ್ನನ್ನು ತಕ್ಕಂತೆ ಶಿಕ್ಷಿಸುವೆನೆಂದು ಹೇಳಿ, ಆತನನ್ನು ಪುನಹ ಪೆಟ್ಟಿಗೆಗೆ ಸೇರಿಸಿ, ಒಂಟಿಯಮೇಲೆ ಹೇರಿ