ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೬ ಯವನ ಯಾಮಿನೀ ವಿನೋದ ಎಂಬ, ಕೊಂಡು ಮುಂದೆ ಹೊರಡುವಂತೆ ಆಜ್ಞಾಪಿಸಿ, ತನ್ನ ಪರಿವಾರಜನರಿಂದ ಕೂಡಿ, ನಗರದವರೆಲ್ಲರೂ ನಿದಿಸುತ್ತಿರುವ ಕಾಲದಲ್ಲಿ, ಪಟ್ಟಣವನ್ನು ಪ-ಶಿಸಿ, ತನ್ನ ಮನೆಯಬಳಿಗೆ ಬಂದು, ಯಾರಿಗೂ ತಿಳಿಯದೇನೆ, ಆ ಪೆಟ್ಟಿಗೆಯನ್ನು ಮನೆಗೆ ಸಾಗಿಸಿ, ನಾನು ಬರುವವರೆಗೂ ತೆರೆಯಕೂಡ ದೆಂದು ಆಜ್ಞೆ ಮಾಡಿದನು. ಚಾರಕರು ಸಾಮಾನುಗಳನ್ನು ಮನೆಗೆ ಸೇರಿಸುತ್ತಿದ್ದರು. ನಂಸದೀನನು ತನ್ನ ಮಗಳನ್ನು ಕರೆದು, ಮಗುವೆ ! ನಿನ್ನ ಚಿಕ್ಕಪ್ಪನ ಮಗನಾದ ನಿನ್ನ ಗಂಡನನ್ನು ಕಂಡಕಂಡುದುದಕ್ಕಾಗಿ ನೀನು ಭಗವಂತನಿಗೆ ವಂದನೆಗಳನ್ನಾಚರಿಸು! ಸಂತೋಷದಿಸಿದ ಹಿರಿಯರಿಗೆ ಮರಾದಾಪೂರ್ವಕವಾಗಿ ನಮಸ್ಕರಿಸು, ನಿನ್ನ ವಿವಾಹದ ದಿನದಲ್ಲಿ ಅಲಂ ಕಾರ ಮಾಡಿಕೊಂಡಿದ್ದ ತರದಿಂದ ಆಚರಿಸಿ, ತಪ್ಪದೆ ನಿನ್ನ ಅಂತಃಪುರ ವನ್ನು ಅಲಂಕರಿಸು, ಆ ಅಲಂಕಾರಗಳು ಮೊದಲಿನಂತೆಯೇ ಇರಲಿ, ನಿನಗಾ ಆಲಂಕಾರಗಳು ಮರೆತುಬಿದ್ದರೆ, ನನ್ನ ಪೆಟ್ಟಿಗೆಯಲ್ಲಿರುವ ಕಾಗದವನ್ನು ತೆಗೆದು ನೋಡಿದುದೆ ಆದರೆ, ತಿಳಿವುದೆಂದು ಹೇಳಿದನು. ಆಮಾತುಗಳನ್ನ ಕೇಳಿ, ಸೌಂದರವತಿಯು ಸಂತೋಷದಿಂದ ಹಿನ್ನುತ್ತಾ ತನ್ನ ಚಾರಕರಿಂದ ಅಂತಃಪುರವನ್ನು ಮೊದಲಿನವಿವಾಹದದಿನದಂತ ಆಲಂಕರಿಸಿ ಸಿಂಹಾಸನವನ್ನು ಮಧ್ಯದಲ್ಲಿರಿಸಿ ವೇಣದಬತ್ತಿಗಳ ದೀಪವನ್ನು ಹೊತ್ತಿಸಿ, ತನ್ನ ಮಲಗುವ ಮನೆಯಲ್ಲಿ, ಆತನ ಬಟ್ಟೆಗಳನ್ನು ಸರ್ಕಿಸು ಗಳ ಚೀಲವನ್ನು ತಂದಿಟ್ಟುಕೊಂಡು, ಸರ್ವವನ್ನು ಸಿದ್ಧಪಡಿಸಿಕೊಂಡಿರುವ ಸಮಯಕ್ಕೆ ಸರಿಯಾಗಿ ಮಂತ್ರಿಯು ಅಲ್ಲಿಗೆಬಂದು, ಮಗಳೆ ! ಈ ಉಡುಪು ಗಳನ್ನು ಬದಲಾಯಿಸಿ, ನೀನು ಮಂಚವನ್ನು ಸೇರು. ಬದಾದೀನನು ಬರುತ್ತಲೆ ಆತನನ್ನು ಆಲಿಂಗಿಸಿಕೊಂಡು, ನೀನು ನನ್ನನ್ನು ಅಗಲಿ ಇಷ್ಟು ದಿನವೂ ವಾಗಿದೆ. ನಾನು ನಿದೆ ತಿಳಿದೆದ್ದು ನಿನ್ನನ್ನು ಕಾಣದೆ ಬಹು ಆಶ್ರ ಯುಕ್ತಳಾದೆನಲ್ಲ ! ಎಂದು ಹೇಳಿ, ಆತನೊಡನೆ ಸುಖಶಯನ ದಲ್ಲಿದ್ದು, ರಾತ್ರಿಯಲ್ಲಾ ನಿನಗೂ ಆತನಿಗೂ ನಡೆದ ಸಂಭಾಷಣೆಯನ್ನು ನಮ್ಮ ಸಂಗಡ ಹೇಳಿ, ನನ್ನನ್ನು ನಿನ್ನ ಅತ್ತೆಯನ್ನೂ ಸಹಾ ಸಂತೋಷ ಬಡಿಸುವಳಾಗು ಎಂದು ಹೇಳಿ, ಮುಂತಿ ಯು ಅಂತಃಪುರದಿಂದ ಹೊರಟು ಹೋದರೆಂದು ನುಡಿದ ಕಡಲೆ, ದೂರದಯವಾದ್ದರಿಂದ, ಪ್ರಹರಜಾದಿ ಕಥೆಯನ್ನು ನಿಲ್ಲಿಸಿದಳು. ಮರುದಿನ ಬೆಳಗಿನ ಜಾವದಲ್ಲಿ ಪುನಹ ಕಥೆ ಯನ್ನು ಹೇಳತೊಡಗಿದಳು.