ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦೦ ಯವನ ಯಾಮಿನೀ ಏನಿದೆ ಎಂಬ ೧೨೨ ನೆಯ ರಾತ್ರಿ | ಕಥೆ. ವಹರಟಿದಿಯು ಸುಲ್ತಾನರನ್ನು ಕುರಿತು, ಪ್ರಿಯರೇ ! ಗಯ ಧರನು ಕಲೀಫರಿಗೆ ಹೇಳಿದ ವಿಚಿತ್ರ ತರನಾದ ಈ ಕಥೆಯನ್ನು ಸಾವಧಾನ ದಿಂದ ಕೇಳಬೇಕು. ಏನಂದರೆ :-ಬದರೋದೀನನು ತನ್ನ ಮನದಲ್ಲಿ ಆಹಾ ! ಈಗ ನಾನು ನೋಡುತ್ತಿರುವ ವಿವಾಹಮಂದಿರವೂ ಇದರಲ್ಲಿರುವ ನನ್ನ ಹಂಡತಿಯ, ಮೊದಲಿನ ನನ್ನ ಬಟ್ಟೆಗಳೂ, ನಾನು ಸುಮನುಷ್ಯ ನನ್ನು ನೋಡಿದ ಸಲವೂ, ಇವೆಲ್ಲವೂ ನಿಜವಾದ ಸಂಗತಿಯೋ ಅಥವಾ ಮಾಯೆಯಿಂದ ತೆ ,ಎರುತ್ತಿರುವುದೋ ಕಾಣೆನಲ್ಲ ! ಎಂದು ಸಂದೇ ಹಾಸ್ಪದಮನಸ್ಕನಾಗಿ, ಹಲವುಬಾರಿ ಹಂಬಲಿಸುತ್ತಿದ್ದುದರಿಂದ, ಆತನಿಗೆ ನಿದ್ರೆಯ ಬಾರಲಿಲ್ಲ. ಇನ್ಯರಲ್ಲಿಯೇ ಮಂಸುದೀನ ಮಹಮ್ಮದನು ನಿನ್ನ ರಾತಿ ) ತನ್ನ ಮಗಳ ಅಂತಃಪುರದಲ್ಲಿ ನಡೆದ ಸಂಗತಿಗಳನ್ನು ವಿಚಾರಿಸಿ ತಿಳಿದುಕೊಳ್ಳಬೇಕೆಂದು ಬಂದು ಬಾಗಿಲು ತಟ್ಟಿ, ಒಳಹೊಕ್ಕು ಬದರೋ ದೀನನಿಗೆ ಸಲಾಮು ಮಾಡಿದನು. ಯಾವ ಮನುಷ್ಕನು ಬದರೋಡೀನನ್ನು ಮರಣದಂಡನೆಗೆ ಗುರಿಮಾಡಬೇಕೆಂದಿದ್ದನೋ, ಆತನೇ ತನ್ನೆದುರಿಗೆ ಬಂದು ನಿಂತುಕೊಂಡು ಸಲಾಮುವಾಡುತ್ತಿರುವುದನ್ನು ಕಂಡಮೇಲೆ, ಬದರೂ ದೀನನಿಗೆ ಮತ್ತಷ್ಟು ಆಶ್ಚರ ಉಂಟಾಗಿ, ಆಹಾ ! ಎಷ್ಟು ಚೆನ್ನು ಯಿತು, ನೀನೆ ಅಲ್ಲವೆ ? ವಿಠಾಯಿಯಲ್ಲಿ ಮೆಣಸನ್ನು ಹಾಕಲಿಲ್ಲವೆಂಬ ಕೋಪದಿಂದ ನನ್ನನ್ನು ಕೊಲ್ಲಿಸಬೇಕೆಂದು ಪ್ರತಿಜ್ಞೆ ಮಾಡಿದ್ದ ದೊಡ್ಡ ಮನುಷ್ಯನು, ನಿನ್ನ ಗುರುತನ್ನು ಚೆನ್ನಾಗಿ ತಿಳಿದುಕೊಂಡಿರುವ, ನಾನು ಮರೆತರೂ, ನೀನು ನನಗುಂಟುಮಾಡಿದ ಭಯೋತ್ಪಾತವು ನಿನ್ನನ್ನು ಮರೆಯದಂತೆ ಮಾಡುತ್ತಿರುವುದಕ್ಕಾ! ಎಂದು ಕೇಳಿದನು. ಆ ಮಾತನ್ನು ಕೇಳಿ ಸಂಸದೀನನು ನಕ್ಕು, ಅಯಾ ... ! ರಾಕ್ಷಸನ ಮಾಯೆಯಿಂದ, ಗನುಮನುಷ್ಕನನ್ನು ತಿರಸ್ಕರಿಸಿ, ಆತನ ಸಾನದಲ್ಲಿ ನಿಂತು, ನನ್ನ ಮಗಳನ್ನು ಮದುವೆಮಾಡಿಕೊಂಡಿರುವೆ ಎಂಬು ದನ್ನು, ಆ ಗಳನನು ಹೇಳಿದವನಿಂದಲೆ, ನಾನು ತಿಳಿದುಕೊಂಡೆನು. ಬಳಿಕ ನೌರದೀನಲ್ಲಿಯ ಕೈಬರಹದ ಪುಸ್ತಕವನ್ನು ಓದಿಕೊಂಡು, ನೀನು ನನ್ನ ತಮ್ಮನ ಮಗನೆಂದು ತಿಳಿದುಕೊಂಡೆನು. ಕೂಡಲೆ ಕೈರೊ,