________________
ಅರೇಬಿರ್ಯ ನೈಟ್ಸ್ ಕಥೆಗಳು, Box ಹಿಡಿಯುವದರಲ್ಲಿ ಪ್ರವೀಣಳಾದ ಆತನಹೆಂಡತಿಯು, ಗಂಡನನ್ನು ಕುರಿತು, ಆಹಾ ! ನನಗೊಂದು ಉಪಾಯವು ತೋರುತ್ತಿರುವುದು, ಏನಂದರೆ :ಈ ಶವವನ್ನು ನಮ್ಮ ಮಹಡಿಯಮೇಲಿನಿಂದ, ಪಕ್ಕದಮನೆಯವನಾದ ಕಬ್ಬಿನ ವ್ಯಾಪಾರದ ಮುಸಲ್ಮಾನನ ಮನೆಯ ಕಿಟಕಿಯಲ್ಲಿ ಹಾಕಿ ಬಿಟ್ಟರೆ, ನಮಗೆ ಈ ಅಪವಾದವು ನಿವಾರಣೆಯಾಗುವುದೆಂದಳು. ಬಳಿಕ ವೈದ್ಯನು ತನ್ನ ಹೆಂಡತಿಯು ಹೇಳಿದ ಉಪಾಯದಂತೆ, ಆ ಶವವನ್ನು ಮಹ ಡಿಯಮೇಲಕ್ಕೆತ್ತಿ ಪಕ್ಕದಮನೆಯ, ಮುಸಲ್ಮಾನನ ಗೃಹದಲ್ಲಿರುವ ಕೀಟ ಕಿಯ ಮೂಲಕ, ಒಳಗೆ ಸೇರಿಸಿ, ಗ್ರಾಣದಿಂದಿರುವ ಮನುಷ್ಕನು ನಿಂತಿರು ವಂತೆಯೇ ನಿಲ್ಲಿಸಿದರು. ಇನ್ಮರಿ ಆ ಯಜಮಾನನು ಮದುವೆಗಾಗಿ ಪರಸ್ಥಳಕ್ಕೆ ಹೋಗಿದ್ದವನು, ಮನೆಗೆ ಬರುವಾಗ, ಲಾಂದ ನನ್ನು ಹಿಡಿದುಕೊಂಡು ಬರುತ್ತಾ, ಅದರ ಬೆಳಕಿನಿಂದ ತನ್ನ ಮನೆಯ ಕೊಠಡಿಯ ಒಬ್ಬ ಮನುಷ್ಕನು ನಿಂತುಕಂಡಿರುವದನ್ನು ಕಂಡು, ನನ್ನ ಮನೆಯಲ್ಲಿ ಇರುವ ಪದಾರ್ಥಗಳನ್ನು ಕದಿಯುವುದಕ್ಕಾಗಿ, ಬಂದಿರುವ ಕಳ್ಳನಂದು ಹೇಳಿ, ಆತನಕೈಯಲ್ಲಿರುವ ದೊಡ್ಡ ಬೆತ್ತವನ್ನು ತಿರುಗಿಸುತ್ತಾ, ಆಹಾ ! ನನ್ನ ಮನೆಯಲ್ಲಿರುವ ಪದಾಥ್ಯಗಳನ್ನು ಕದಿಯುವುದಕ್ಕಾಗಿ ಬಂದಿದ್ದಿಯಾ? ಇನ್ನು ಮೇಲೆ ಹೇಗೆ ಬರುವೆಯೋ, ನೋಡುತ್ತೇನೆ ಎಂದು ಬಲವಾಗಿ ಹೊಡೆ ದನು. ಕೂಡಲೆ ಶವವು ನೆಲಕ್ಕೆ ಬಿದ್ದು ಅಲುಗಾಡದೆ ಇದ್ದುದನ್ನು ಕಂಡು, ಓಹೋ ! ಇದು ಹೆಣವೇಹೊರತು ಮತ್ತೇನೂ ಅಲ್ಲವೆಂದು ತಿಳಿದು, ತನ್ನ ಕೋಪವನ್ನು ಕಟ್ಟು, ವ್ಯಸನಾಕಾಂತನಾಗಿ ಆಹಾ ! ನಾನು ಮೋಸದಿಂದ ಎಂತಹ ಕಾರವನ್ನು ಮಾಡಿದೆ? ನನ್ನ ಕೋಪವನ್ನಣಗಿಸಿಕೊಳ್ಳಲಾರದೆ, ಒಬ್ಬ ಮನುಷ್ಯನನ್ನು ಕೊಂದೆನಲ್ಲಾ! ಅಯ್ಯೋ ! ರಾಜಭಟರು ಬಂದು ನನ್ನನ್ನು ಎಳೆದುಕೊಂಡುಹೋಗಿ, ಶಿಕ್ಷಿಸುವರಲ್ಲಾ ! ಏನುಮಾಡ ಲೆಂದು ಚಿಂತಿಸುತ್ತಿದ್ದನು ಎಂದು ಹೇಳಲು, ಅಮ್ಮರಸ್ಥೆಯ, ಬೆಳಗಾದುದ ರಿಂದ ಪ್ರಹರದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನಜಾವದಲ್ಲಿ ಪುನಹ ಹೇಳಲಾರಂಭಿಸಿದಳು.
- *