ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪cy ಯವನ ಯಾಮಿನೀ ವಿನೋದ ಎಂಬ, ಕೃತ್ಯವನ್ನು ಸವಿಸ್ತಾರವಾಗಿ ಹೇಳಿದನು. ಇಷ್ಯರಿ ಅರುಣೋದಯ ವಾದುದರಿಂದ, ನಹರಜಾದಿಯು ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಭುನಹ ಹೇಳಲಾರಂಭಿಸಿದಳು. ೧೨೬ ನೆಯ ರಾತ್ರಿ ಕಥೆ. ಪ್ರಹರಜಾದಿಯು ಸುಲ್ತಾನರನ್ನು ಕುರಿತು, ಸಿ ಯರೇ ! ಇಂತು, ಸುಲ್ತಾನರಿಗೆ ಕೊಬ್ಬನ್ನು ತಂದು ಮಾರುವ ವ್ಯಾಪಾರಗಾರನು ಗಟ್ಟಿಯಾಗಿ ತಾನು ಮಾಡಿದ ಕೃತ್ಯವನ್ನೆಲ್ಯಾ ಧೈರದಿಂದ ಹೇಳಿದುದ ರಿಂದ ನ್ಯಾಯಾಧಿಪತಿಯು ತ:ಳು! ತಾಳು! ಆ ಕ್ರಿಸ್ಟಿಯಾನನಿಗೆ ಬದಲಾಗಿ ತನ್ನ ಅಪರಾಧವನ್ನು ತಾನೇ ಒಪ್ಪಿಕೊಂಡು ಬರುತ್ತಿರುವ, ಈ ವರ್ತಕ ನನ್ನು ಗಲ್ಲಿಗೆ ಹಾಕಬೇಕಾಗಿದೆ ಎನಲು, ಮಂತ್ರಿ ಯಾಜ್ಞೆಯಂತೆ ಕೊಲೆ ಗಾರನು, ಉರುಳನ್ನು ತಂದು ಆ ವರ್ತಕನ ಕೊರಳಿಗೆ ಹಾಕಿದುದನ್ನು ನೋಡಿ, ಮೈದನು ಅಯಾ : ಸ್ವಲ್ಪ ನಿದಾನಿಸು ! ನಾನು ಗರಿನ ಮರದಬಳಿಗೆ ಬರುವುದಕ್ಕೆ ಮಾರ್ಗವನ್ನು ಕೊಡೆಂದು ಬೇಡುವೆನೆಂದು ಹೇಳಿದನು, ಬಕ ಆ ವೈದ್ಯನು ನಾಯಧಿಪತಿಯಬಗೆ ಬಂದು, ಸ್ವಾಮಿಾ ! ಈ ವರ್ತಕನು, ಆತನ ಬಾಣವನ್ನು ಕೊಂದವನಲ್ಲ. ನನಗೆ ಶಿಳಿದ ಸಂಗತಿಯನ್ನು ನಾನು ಹೇಳುವೆನು. ನಾನು ನಿನ್ನೆ ದಿನ ರಾತಿ ) ಮನೆಯಲ್ಲಿ ಮಲಗಿರುವಾಗೆ ನನಗೆ ಗುರುತಿಲ್ಲದವರಾದ, ಇಬ್ಬರು ಗಂಡಹೆಂಡರು, ಈ ರೋಗಿಯನ್ನು ನನ್ನ ಮನೆಯ ಬಾಗಿಲಲ್ಲಿ ಮಲಗಿಸಿಕೊಂಡು, ನನ್ನ ಮೂಲಕ ಚಿಕಿತ್ಸೆ ಮಾಡಿಸ ಬೇಕಂದು, ಕುಳಿತಿದ್ದರಂತೆ. ಆಗ ಏನೋ ಕಾರಣದಿಂದ, ನಮ್ಮ ದಾದಿಯು ಹೊರಗೆ ಬಂದಾಗೈ, ತಾವು ಬಂದಿರುವ ವರ್ತಮಾನವನ್ನು ಹೇಳಿ, ಒಂದು ಮೊಹರಿ ನಾಣ್ಯವನ್ನು ಕೊಟ್ಟರಂತ, ಈ ವರ್ತಮಾನವನ್ನು ನಮ್ಮ ದಾದಿಯು ಬಂದು ಹೇಳಲು, ನಾನು ಅವಳಿಗೆ ದೀಪವನ್ನು ತರುವಂತೆ ಹೇಳಿ, ಹೊರಗೆ ಬಂದು ಬಾಗಿಲ ಮೆಟ್ಟಿನಮೇಲೆ ಮಲಗಿಸಿದ ಈ ರೋಗಿಯನ್ನು ಕಾಣದೆ ತುಳಿದುಬಿಟ್ಟನು. ಬಳಿಕ ದೀಪವನ್ನು ತಂದಮೇಲೆ ನೋಡುವಲ್ಲಿ ಆತನು ಸತ್ತುಹೋಗಿದ್ದನು. ನಾನು ಬಹಳವಾಗಿ ವ್ಯಸನವಟ್ಟು, ಈ ಕವ ನನ್ನು ಹುನೆಯೊಳಕ್ಕೆ ತೆಗೆದುಕೊಂಡು ಹೋದೆನು. ನನ್ನ ಹೆಂಡತಿಯು,