ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೧೩ ಧಾನ್ಯವನ್ನು ಕೊಡುವೆನೆಂದು ಹೇಳಿ, ಮಾದರಿಯು ಕೊಟ್ಟು ಹೊರಟು ಹೋದನು. ನಾನು ಮಾದರಿ ಧಾನ್ಯವನ್ನು ತೆಗೆದುಕೊಂಡುಹೋಗಿ, ವರ್ತಕರಿಗೆ ತೋರಿಸುವಲ್ಲಿ ಅವರು ಒಂದು ಬುಸೆಲ್ಲಗೆ ನೂರಹತ್ತು ರೂಪಾ ಯಿನಂತೆ ತೆಗೆದುಕೊಳ್ಳುತ್ತೇವೆಂದು ಹೇಳಿದರು. ನನಗೆ ಒಂದು ಬುಸೆಲ್ಲಿಗೆ ಹತುಗಾಯಿ ಲಾಭ ರವcಬಾಸೆಯಿಂದ, ಆ ವರ್ತಕರನ್ನು ಕರೆದು ಕೊಂಡು, ನಾನು ಆ ವಿಕ್ಟೋರಿಯಾ ಗೇಟಿನ ಬಳಿ ಇರುವ ಮುಸಫರ ಖಾನೆಯಬಳಿಗೆ ಹೋದೆನು, ಆ ಯುವಕನು ನನಗೋಸ್ಕರ ಅಲಿಯೇ ಕಾದುಕೊಂಡಿದ್ದನು. ನಾವು ಅಲ್ಲಿಗೆ ಹೋದಕೂಡಲೆ, ಆತನು ನಮ್ಮನ್ನು ಮಳಿಗೆಯೊಳಕ್ಕೆ ಕರೆದುಕೊಂಡುಹೋಗಿ, ತನ್ನ ಸ್ಥಿದ ಧಾನ್ಯವನ್ನೆಲ್ಲಾ ಅಳೆದುಕೊಟ್ಟು, ಅಯಿದುಸಾವಿರರೂಪಾಯಿಗಳನ್ನು ತೆಗೆದುಕೊಂಡು, ನನ್ನ ಭಾಗಕ್ಕೆ ಬರಬೇಕಾದ ಇನ್ನೂರುರೂಪಾಯಿಗಳನ್ನು ಕೊಟ್ಟು, ಉಳಿದ ಹಣವನ್ನು ತಾನಿಟ್ಟುಕೊಂಡನು. ಬಳಿಕ ನನು ಸಂತೋಗದಿಂದ ಅವನ ಕೈಯನ್ನು ಮುದ್ದಿಸಿ, ಅವನಪ್ಪಣೆಯನ್ನು ಪಡೆದು, ನೀನು ಅಪೇಕ್ಷಿಸಿದ ಕಾಲದಲ್ಲಿ ಬರಲು ಸಿದ್ಧನಾಗಿ ಇರುವೆನೆಂದು ಹೇಳಿ ಹೊರಟುಬಂದೆನು. ಹೀಗೆ ನಾನು ಹೊರಟುಬರುತ್ತಿರು ವಾಗ ಆತನು ನನ್ನನ್ನು ಕರೆದು, ಈಃ ನಾಲ್ಕು ಸಾವಿರದೆಂಟನೂರುರೂಪಾಯಿ ಗಳನ್ನು ನೀನೆ ಇಟಕೊಂಡಿರು. ನಾನೇ ಬಂದು ಕೇಳಿದಾಗ ಕೊಡುವೆ ಯಂತ, ಎಂದು ಹೇಳಿ, ಹಣವನ್ನು ಕೊಟ್ಟು ಹೊರಟುಹೋಗಿ, ಒಂದು ತಿಂಗಳು ಕಳೆದ, " ನನ್ನ ಬಳಿಗೆ ಬಂದು ನಾಲ್ಕು ಸಾವಿರದೆಂಟನೂರು ರೂಪಾಯಿಗಳನ್ನು ಕೊಡು ಎಂದು ಹೇಳಿದನು. ಹಣವು ಸಿದ್ದವಾಗಿರು ವುದು, ನಾನು ನಿಮ್' * ಕಸಲೆ ಕೊಡುವೆನು. ಆದರೆ ತಾವು ಕುದುರೆಯಿಂ ದಿಳಿದು, ಭೋಜನವನ್ನು ಮಾಡಿಕೊಂಡು, ಹಣವನ್ನು ತೆಗೆದುಕೊಂಡು ಹೋಗಬಹುದೆಂದು ಸೈಂಳಿದನು. ಅದಕ್ಕಾತನ್ನು ನಾನು ಈಗ ಇಳಿಯ ಲಾರೆನು, ನಾನು ಮತ್ತೊಂದುಕಡೆಗೆ ಹೋಗಬೇಕಾಗಿರುವುದು. ಬರುವಾಗ ಇದೇ ಮಾರ್ಗದಲ್ಲಿ ಬರುವೆನು. ಆಗ ಹಣವನ್ನು ಸಿದ್ಧಪಡಿಸಿಟ್ಟುಕೊಂ ಡಿದ್ದರೆ, ನಾನು ಅದನ್ನು ತೆಗೆದುಕೊಂಡು ಹೋಗುವೆನೆಂದುಹೇಳಿ ಯಾರಟು ಹೋದನು. ನಾನು ಹಣವನ್ನು ಸಿದ್ಧಮಾಡಿ, ಕಾದುಕೊಂಡಿದ್ದನು.