________________
(೩) ಅರೇಬಿರ್ಯ ನೈಟ್ ಕಧೆಗಳು. 84 ಇಲ್ಲಿಗೆ ತರುವುದಕ್ಕೆ ಮುಖ್ಯದ ಖರ್ಚಿಗೂ ಕೇಳಲಿಲ್ಲ. ಆದುದರಿಂದ ವ್ಯಸನಾಕಾಂತನಾಗಿದ್ದನು. ವ್ಯಾಪಾರಸ್ಥರು ನಾವು ಹೇಳಿದಂತೆ ನೀವು ಕೊಡುವುದಾದರೆ, ನಿಮ್ಮ ಸರಕುಗಳು ಬೇಗ ಖರ್ಚಾಗುವುದರಲ್ಲಿ ಯಾವ ಸಂದೇಹವೂ ಇಲ್ಲವೆಂದು ಹೇಳಿದರು. ಇಂತಂದು ಹೇಳಿದ ಸಹರಜಾದಿಯು ಬೆಳಗಾದ ಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ, ಪುನಹಾ ಹೇಳತೊಡಗಿದಳು. - ೧೩೨ ನೆಯ ರಾತ್ರಿ ಕಥ. ವಹರಜಾದಿಯು ಸುಲ್ತಾರನ್ನು ಕುರಿತು, ಪಿಯರೇ ! ಆ * ಸ್ತನು, ವರ್ತಕನನ್ನು ಕುರಿತು, ಇಂತೆಂದು ಹೇಳಿದನು. ತರಗಿನ ವರ್ತಕರು ನನ್ನ ಸರಕುಗಳನ್ನು ನಮ್ಮವಿಲ್ಲದಂತೆ ಮಾರಬಹುದೆಂದು ಹೇಳಿದಬಳಿಕ, ನಾನು ಅದು ಹೇಗೆಂದು ಕೇಳಿದನು. ಆಗ ವರ್ತಕರು, ಅಯಾ ! ವರ್ತಕರಿಗೆ ನಮ್ಮ ಸರಕುಗಳನ್ನು ಹಂಚಿಕೊಟ್ಟರೆ, ಅವರು ಅದನ್ನು ಚಿಲ್ಲರೆಯಾಗಿ ಮಾರಿಕೊಂಡುಬಂದು, ಬಂದುವಾರಕ್ಕೆರಡುಸಾರಿ, ಅಂದರೆ ಸೋಮವಾರ ಗುರುವಾರಗಳಲ್ಲಿ ಹಣವನ್ನು ತಂದುಕೊಡುವರು, ಹೀಗೆ ನಾವು ಮಾಡಿದುದದರೆ, ನಮಗೆ ಲಾಭವೇಹೊರತು ನಮ್ಮವೆಂದಿಗೂ ಬಾರದು. ಅಲ್ಲದೆ ನೀನ, ಈ ಪಟ್ಟಣವನ್ನು ಇಲ್ಲಿರುವ ಚಿತ್ರವನ್ನು ಗಳನ್ನು ಸಾವಕಾಶವಾಗಿ ನೋಡಬಹುದು ಎಂದು ಹೇಳಿದರು, ಬಳಿಕ ನಾನು ಅವರ ವFತಿನಂತ ನನ್ನ ಸರಕುಗಳನ್ನು ತರಿಸಿ, ಚಿಲ್ಲರೆ ವರ್ತಕರನ್ನು ಕರೆಸಿ, ಹಂಚಿದನು. ನಂತರ ಅವರೆಲ್ಲರೂ ಸಾಕ್ಷಿಗಳ ವ.ಲಕ ತಂತಮ್ಮ ಒಪ್ಪಿಗೆಯ ರಶೀದಿಯನ್ನೂ ಕೊಟ್ಟರು. ಈತರದಿಂದ ನನ್ನ ಸರಕು ಗಳನ್ನು ಹಂಚಿದಮೇಲೆ, ನನಗೆ ತುಂಬ ಸಂತೋಷವಾದುದರಿಂದ, ನಾನು ಆ ಊರಿನಲ್ಲಿರುವ ನನ್ನ ಸಹಪಾಟಿಗಳೊಡನೆ ಸೇರಿ, ವಿಚಿತ್ರ ವಿನೋದಗಳ ನ್ನೆಲ್ಲಾ ನೋಡುತ್ತಾ, ಒಂದುತಿಂಗಳು ಕಳೆದಬಳಿಕ, ನನ್ನ ಗುಮಾಸ್ತ್ರ ನನ್ನ ನಾಣಪರೀಕ್ಷಕನನೂ ಸಂಗಡ ಕರೆದುಕೊಂಡು, ಆ ವರ್ತಕರ ಬಗೆಗಿ, ಅವರಿಂದ ಹಣವನ್ನು ತೆಗೆದುಕೊಂಡುಬಂದು, ನನ್ನ ಬಿಡದಿ ಯಸ್ಲಿಟ್ಟುಕೊಳ್ಳುತ್ತಿದ್ದನು. ಉಳಿದಕಾಲದಲ್ಲಿ ವಿನೋದವಾಗಿ ಬೆಳಗಿನ ಹೊತ್ತು ಒಬ್ಬ ನರಕನಮನೆಗೂ, ಸಾಯಂಕಾಲದಲ್ಲಿ ಬೇಟೆಯಗುಜರಿಗೂ,