________________
೪೨೦ ಯವನ ಯಾಮಿನೀ ವಿನೋದ ಎಂಬ, ಕೊಟ್ಟ, ವಸ್ತ್ರವನ್ನು ತೆಗೆದು ಆ ದೊರೆಸಾನಿಗೆ ಕೊಟ್ಟು, ಆ ಲಲನಾ ಮಣಿಯನ್ನು ಕುರಿತು, ನೀನು ಇದನ್ನು ತೆಗೆದುಕೊಂಡುಹೋಗು, ರೂಪಾ ಬಿಗಳನ್ನು ನಾಳೆಯಾಗಲಿ ಅಥವಾ ಈದಿನ ಸಾಯಂಕಾಲವಾಗಲಿ ಕೊಟ್ಟು ಕಳುಹಿಸು, ಅಲ್ಲದೆ ನಿನಗಿಷ್ಯವಾದರೆ ಇದನ್ನು ನಾನು ಕೊಟ್ಟ ಬಹುಮಾನ ವಾಗಿ ಅಂಗೀಕರಿಸು ಎಂದು ಹೇಳಿದೆನು. ಆಕ ಅಯಾ ! ನನ್ನ ತಾತ್ಸ ರವು ಹಾಗಿಲ್ಲ. ನೀನು ನನ್ನಲ್ಲಿ ಬಹಳವಾದ ಗೌರವವನ್ನು ತೋರ್ಪಡಿ ನಿರುವೆಯಾದುದರಿಂದ, ನಾನು ಕೂಡ ಅದಕ್ಕಿಂತಲೂ ಹೆಚ್ಚಾದ ಗೌರವ ವನ್ನು ನಿನ್ನಲ್ಲಿ ತೋರದೆಯಿದ್ದರೆ, ನಾನು ಪುನಹ ಮುಖವನ್ನು ಹೊತ್ತು ಕಂಡು, ಮರಳಿ ನಿನ್ನ ಬಳಿಗೆ ಬರಬಹುದೆ ? ನಿನ್ನ ಸಂಪತ್ತು ಅಭಿವೃದ್ಧಿ ಯಾಗುವಂತೆ ಭಗವಂತನು ಅನುಗ್ರಹಿಸುವನು. ನಾನು ಸತ್ತಮೇಲೂ, ನೀನು ಬಹುದಿನಗಳು ಬದುಕಿರುವೆ. ನೀನು ಸಾಯುವಾಗ ಸ್ವರ್ಗದ್ವಾರವು ತೆರೆಯಲ್ಪಡುವುದು. ಇದಲ್ಲದೆ ಈ ಪುರಜನರೆಲ್ಲರೂ, ನಿನ್ನ ಸದುಣಗಳನ್ನು ಕೊಂಡಾಡುವರೆಂದು ಕೇಳಿದಳು. ಈ ಮಾತುಗಳನ್ನು ನಾನು ಕೇಳಿದಕೂಡಲೆ, ನಿನ್ನ ಮುಖ ಸಂದರ್ಶನವು ಪುನಹ ನನಗಾಗುವುದರಿಂದ, ಅಸಲಾಗಲಿ, ಅಥವಾ ಬಡ್ಡಿ ಯಾಗಲಿ, ನನಗೆ ಬರುವುದೆ ! ಆದರೆ ಮತ್ತೊಂದನ್ನ ನಾನು ಅಪೇಕ್ಷಿಸು ವನಲ್ಲವೆನಲ , ಆಕೆ ನನ್ನ ಕಡೆಗೆ ತಿರುಗಿ, ಮೆಲ್ಲಗೆ ತನ್ನ ಮೇಲುಮುಸು ಕನ್ನು ತೆಗೆದು, ಸುಂದರವಾದ ಮುಖವನ್ನು ತೋರಿಸಿದಳು. ಅದನ್ನು ನೋಡಿದಕೂಡಲೆ, ನನ್ನ ಬುದ್ಧಿಯು ಏನಾಯಿತೋ ಅದನ್ನು ನಾನೇ ಹೇಳ ಲಾರೆನು. ಆ ದೊರೆಸಾನಿಯು, ರೆಪ್ಪ ಹಾಕದೆ ನನ್ನನ್ನು ನೋಡುತ್ತಾ ಇದ್ದು, ಇತರರು ಎಸ್ಪಿನೋಡುವರೋ ಎಂಬ ಭಯದಿಂದ ಮುಸುಕನ್ನು ಹಾಕಿಕೊಂಡು, ತಾನು ತೆಗೆದುಕೊಂಡ ಬಟ್ಟೆಯನ್ನು ಕೈಯಲ್ಲಿ ಹಿಡಿದು, ನನ್ನ ಮನೋದಾಢ ರ್gವನ್ನು ಸಹಾ ಸೂರೆಮಾಡಿಕೊಂಡು, ಹೊರಟು ಹೋದಳು. ಬಳಿಕ ನಾನು ಮನೆಗೆ ಹೋಗುವುದಕ್ಕೆ ಪ್ರಯತ್ನಿಸಿ, ಆತನಿಂದ ಅಪ್ಪಣೆಯನ್ನು ತೆಗೆದುಕೊಂಡು, ಆಯಾ ! ನೀನು ಆ ಹೆಂಗಸಿನ ಮನೆಯ ಗುರುತು ಬಲೆಯಾ ? ಎಂದು ಕೇಳಿದನು. ಆತನು ಹೌದು, ಅವಳೊಬ್ಬ ಸರದಾರನ ಮಗಳು. ತಂದೆಯು ಸತ್ತುಹೋದಮೇಲೆ, ಅವಳಿಗೆ ತುಂಬ