ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  1. y

ಯವನ ಯಾಮಿನೀ ವಿನೋದ, ಎಂಬ ಕೈಯಲ್ಲಿ ಕತ್ತಿಯನ್ನು ಹಿಡಿದು ಕೊಂಡು, ಅವನ ಬಳಿಗೆ ಬಂದು ನನ್ನ ಮಗಳನ್ನು ಕೊಂದೆ ಯಲ್ಲಾ! ನಾನುನಿನ್ನನ್ನು ಕೊಲ್ಲುವೆನು, ಏಳು ಎಂದು ಘಟ್ಟಿಯಾಗಿ ಕೂಗಿತು. ಆ ಘೋರಾಕಾರವನ್ನು ಕೂರವಾದ ಧ್ವನಿ ಯನ್ನು ಕೇಳಿ, ವರ್ತಕನು ಅಯೋ, ನನ್ನ ಪ್ರಾಣವನ್ನು ನೀನು ತೀರಿಸಿ ಕೊಳ್ಳುವುದಕ್ಕೆ ನಾನು ಯಾವಾಗ ಏನು ಕೆಲಸ ಮಾಡಿರುವೆನೆಂದು? ಕೇಳಿದನು. ನನ್ನ ಕುಮಾರನನ್ನು ನೀನು ಕೊಂದುದರಿಂದ ನಾನು ನಿನ್ನ ನ್ನು ಕೊಲ್ಲುವೆನೆಂದು ಭೂತವು ಹೇಳಿತು. ಆಗ ವರ್ತಕನು ಅಯೋ... ! ನಾನು ಯಾವಾಗ ನಿನ್ನ ಮಗನನ್ನು ಕೊಂದೆ, ಅವನನ್ನು ಕಣ್ಣಿನಲ್ಲಿಯ ಕಾಣೆನಲ್ಲಾ ! ಎಂದು ಹೇಳಲು. ಆಹಾ, ಈಗ ನ ಹೊತ್ತಿಗೆ ಮುಂಚೆ ನೀನಿಲ್ಲಿಗೆ ಬಂದು, ಕಾಲುವೆ ಬಳಿಯಲ್ಲಿ ಕುಳಿತು ಖರ್ಜೂರವನ್ನು ತೆಗೆದು ಅದನ್ನು ತಿಂದು ಅದರ ಕಾಳುಗಳನ್ನು ಇರುವೆಯ ಗೂಡಿನ ಬಳಿ ಹಾಕಲಿಲ್ಲವೆ ? ಎಂದು ಭೂತವು ಕೇಳಲು, ವರ್ತಕನು ನೀನು ಹೇಳಿದುದೆ ಲ್ಲವನ್ನು ನಾನು ಮಾಡಿದುದುಂಟು, ಇಲ್ಲವೆಂದು ನಾನೆಂದಿಗೂ ಹೇಳುವು ದಿಲ್ಲ, ನಾನು ಖರ್ಜುರವನ್ನು ತಿಂದರೆ ನಿನ್ನ ಮಗನನ್ನು ಹೇಗೆ ಕೊಂದೆನೆ ಹೇಳ ಬೇಕೆನಲು, ಭೂತವು, ನೀನು ಖರ್ಜಾರದ ಬೀಜಗಳನ್ನು ಬಿಸಾಡು ನಾಗೆ ಸಂಚರಿಸುತ್ತಿದ್ದ ನನ್ನ ಮಗನ ಕಣ್ಣಿಗೆ ಅದರ ಪೆಟ್ಟು ತಗಲಿ, ಆ ನೋವಿನಿಂದ ಅವನು ಸತ್ತು ಹೋದನು. ಆದಕಾರಣದಿಂದ ನಾನು ನಿನ್ನನ್ನು ಕೊಂದು ಹಾಕುವೆ ನೆಂದು ಹೇಳಲು, ವರ್ತಕನು ಸಾಮೂಾ ! ನನ್ನ ತಪ್ಪನ್ನು ಕ್ಷಮಿಸ ಬೇಕೆಂದು ಬೇಡಿ ಕೊಂಡನು. ಭೂತವು ಮನ್ನಣೆಯು, ದಾಕ್ಷಿಣ್ಯವೂ ಇಲ್ಲದೆ, ಒಬ್ಬ ನನ್ನು ಕೊಂದವನನ್ನು ಮನ್ನಿಸದೆ ಕೊಂದು ಹಾಕುವುದು ನ್ಯಾಯ ಎಲ್ಲವೆ ? ಎಂದು ಕೇಳಿತು. ವರ್ತಕನು ಅದನ್ನು ಒಪ್ಪಿ ಕೊಂಡರೂ, ನಾನು ನಿನ್ನ ಮಗನನ್ನು ನೋ ಡಲಿಲ್ಲ, ಮತ್ತು ಅವನನ್ನು ಕೊಲ್ಲಲಿಲ್ಲ. ಆದುದರಿಂದ ನಾನು ನಿರಪರಾಧಿ ನೀನು ಕೊಡಮಾಡದೆ ರಕ್ಷಿಸಬೇಕೆಂದು ಬೇಡಿ ಕೊಂಡನು. ಭೂತವು ಆದರೂ, ಕೇಳದೆ, ಅಲ್ಲ, ಅಲ್ಲ, ನೀನು ನನ್ನ ಮಗನನ್ನು ಕೊಂದೆ ಯಾ ದುದರಿಂದ ನಾನು ನಿನ್ನನ್ನು ಕೊಲ್ಲುವೆನೆಂದು ಹೇಳುತ್ತಾ, ನೆಲದ ಮೇಲೆ ಉರುಳಿಸಿ, ತಲೆಯನ್ನು ಕಡಿಯುವದಕ್ಕಾಗಿ ತನ್ನ ಕತ್ತಿಯನ್ನು ಮೇಲ ಕೈ ಹಿಡಿದು ಕೊಂಡಿತು. ವರ್ತಕನು ತಾನು ನಿರಪರಾಧಿ ಯೆಂದು, నిస్సన్నప్పుడు కాక ఇల్లర న్యాయ వల్లనే మనసు ఆరాధి