ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

880 ಯವನ ಯಾಮಿನೀ ವಿನೋದವೆಂಬ, ಇಲ್ಲವೋ, ಎಂಬ ಅನುಮಾನದಿಂದಿದ್ದನು, ಈಗ ಸರ್ವಪಕಾರದಿಂದಲೂ, ನಾನು ಆಕೆಗೆ ಸ್ವಾಧೀನನಾಗಿಯೇ ಇರುವನು. ಅಲ್ಲದೆ ನೀನು ಮಾಡಿದ ಉಪಕಾರಕ್ಕಾಗಿ, ನಿನ್ನನ್ನು ನಂದಿಸುವೆನೆಂದು ಹೇಳಿದನು. ಆಗ ಆ ನಪುಂ ಸಕನು, ಸುಂದರಾಂಗಿಯನ್ನು ನೋಡಿ, ನಾನು ಈತನನ್ನು ಸಮ್ಮತಿಪದಿ ಸಿರುವೆನೆಂದು ಹೇಳಲು, ಆಕೆ ನನ್ನ ಕಡೆಗೆ ತಿರುಗಿ, ಈ ಸೇವಕನನ್ನು ನಿನ್ನ ಬಳಿಗೆ ಕಳುಹಿಸುತ್ತೇನೆ, ನೀನು ಹೇಳಿದತರದಿಂದ ನಡೆದುಕೊ ಎಂದು ಹೇಳಿ, ನನ್ನಿಂದ ಅಪ್ಪಣೆಯನ್ನು ತಗೆದುಕೊಂಡು, ಹೊರಟುಹೋದಳು. ಬಳಿಕ ನಾನು ವರ್ತರಿಗೆ ಕೊಡಬೇಕಾದ ಹಣವನ್ನು ಸಲ್ಲಿಸಿ, ಆ ನಪುಂ ಸಕನು ಯಾವಾಗ ರುವನೋ, ಎಂದು ಅತ್ಯಾತುರದಿಂದ ಕಾದುಕೊಂಡಿ ರಲು, ಆತನು ನನ್ನ ಬಳಿಗೆ ಒಂದುದಿನ ಬಂದಂಥಾವನಾದನು. ಇತಂದು ಹೇಳಿ, ಮಹರಜಾದಿ ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮುರಳಿ ಹೇಳಲಾರಂಭಿಸಿದಳು. ೧೪೪ ನೆಯ ರಾತ್ರಿ | ಕಥೆ. ಪ್ರಹರಜಾದಿಯು ಸುಲ್ತಾನನ್ನು ಕುರಿತು ಇಂತಂದಳು :=ಬಳಕ ಆತನು ಆ ನಪುಂಸಕನನ್ನು ಬಹು ಮಂದೆಯಿಂದ ಬರಮಾಡಿಕೊಳ್ಳಲು, ಆತನು ನನ್ನ ಯೋಗಕ್ಷೇಮವನ್ನು ವಿಚಾರಿಸಿದನು. ನಾನು ಆ ಸುಂದರೀ ಮಣಿಯ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದನೆಂದು ತಿಳಿ , ಅಯಾ ! ಆ ಸುಂದರೀಮಣಿಯು, ನಿನ್ನ ಮೇಲಣ ಮೋಹದಿಂದುಂಟಾದ ವಿರಹವ್ಯಥೆ ಯನ್ನನುಭವಿಸುತ್ರ, ಪುಜೈತಪ್ಪಿ ಹಾಸಿಗೆಯಲ್ಲಿ ಹೊರಳಾಡುತ್ತಿರುವಳು, ನೀನು ಎಂದಿಗೆ ಬರುವೆ? ಎಂದು ಕಾದುಕೊಂಡಿರುವಳು, ಅವಳು ದೇಹದಲ್ಲಿ ಸಸತಯುಳ್ಳವಳಾಗಿದ್ದರೆ, ನಿನ್ನ ಬಳಿಗೆ ಬಂದು ನಿನ್ನನ್ನು ವಿಚಾರಿಸಿಕೊಂಡು ಹೋಗುತ್ತಿದ್ದಳು ಎಂದು ಹೇಳಿದನು. ನಾನು ಅರಣ್ಯ ! ಆ ಸುಂದರೀಮಣಿಯ ಮುಖವನ್ನು ನೋಡಿದಾಗಲೆ, ಸಾಮಾನ್ಯಳಲ್ಲವೆಂದು ತಿಳಿದುಕೊಂಡೆನು ಎನಲು, ನಪುಂಸಕನು ಹೌದಾ , ಹೌದು ! ನೀನು ಸರಿಯಾಗಿ ಯೋಚಿಸಿದೆ, ಸುಲ್ತಾನರ ಹೇಡತಿಯಾದ ಜೋಬದಿಯು, ಆ ಹುಡುಗಿಯನ್ನು ಬಾಲ್ಯದಿಂದಲೂ ಸಾಕಿ, ಅಕ್ಕರೆಯಿಂದ ತನ್ನ ಚಾತುರ ನನ್ನೆಲ್ಲಾ ಕಲಿಸಿರುವಳು. ಆದುದರಿಂದ ಈ ಸುಂದರೀಮಣಿಯು ತನಗೆ