ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, 884 ನಿನ್ನನ್ನು ಜೋಬದಿಯಬಳಿಗೆ ಕರೆದುಕೊಂಡು ಹೋಗುವೆನು, ಕಲೀಫರು ರಾತ್ರಿ ಕಾಲವಿನಹ ಹಗಲುಹೊತ್ತಿನಲ್ಲಿ ಅಂತಃಪುರಕ್ಕೆ ಬರುವದಿಲ್ಲವಾದುದ ರಿಂದ ನಾಳೆ ಹಗಲಿನಲ್ಲಿ ನಿನಗೆ ಜೋಬದಿಯ ದರ ನವಾಡಿಸಲು, ಅನುಕೂಲ ವಾಗಿರುವುದು ಎಂದು ಹೇಳಲು, ನಾನು ಧೈಯಕನಾಗಿ ನಿದ್ರಿಸಿ ದೆನು. ನನಗೆ ಎಚ್ಚರವಾದಾಗಲೆಲ್ಲಾ ಎಂದಿಗೆ ನನ್ನ ಮೋಹನಾಂಗಿಯ ಸಂದರ್ಶನವಾಗುವುದೋ ! ಎಂದು, ನೆನೆನೆನೆದು ಹಂಬಲಿಸುತ್ತಿದ್ದನು, ಮರುದಿನ ಬೆಳಗಿನಜಾವದಲ್ಲಿ ಆಕೆ ನನ್ನ ಬಳಿಗೆ ಬಂದು, ಜೋಬದಿಯ ನಾನು ನಡೆದುಕೊಳ್ಳಬೇಕಾಗಿರುವ, ತೆರವನ್ನ, ಅವಳು ಕೇಳುವ ಪ್ರಶ್ನೆ ಗಳಿಗೆ ತಕ್ಕ ಸದುತ್ತರಗಳನ್ನು ಹೇಳಿಕೊಟ್ಟು, ವಿಚಿತ್ರ ಕರಗಳಾದ ರತ್ನಾ ಭರಣಗಳಿಂದ, ನನ್ನನ್ನು ಅಲಂಕರಿಸಿ, ಸುಂದರಾಲಂಕಾರಯುಕ್ತವಾದ, ಒಂದು ಅರಮನೆಯೊಳಕ್ಕೆ ನನ್ನನ್ನು ಕರೆದುಕೊಂಡುಹೋದಳು. ಅಲ್ಲಿ ನಾನು ಹೋಗುತ್ತಲೆ ಸ್ವಲ್ಪ ವಯಸ್ಸು ಕಳೆದ ಇಪ್ಪತ್ತು ಮಂದಿ ದಾದಿಯರು ಬಂದು, ಸಿಂಹಾಸನದಬಳಿಯಲ್ಲಿ ಎದುರಾಗಿ ನಿಂತುಕೊಂಡರು. ಬಳಿಕ ಇನ್ನೂ ಬಾಲವಯಸ್ಕ Jದ, ಇಪ್ಪತ್ತುಮಂದಿ ದಾದಿಯರಿಂದ ಕೂಡಿ, ರಾಣಿಯಾದ ಜೋಬದಿಯು, ಬಂದು ಸಿಂಹಾಸನಾಸೀನಳಾಗಿ ಕುಳಿತುಕೊಂ ಡಳು. ಆಗ ಆಕೆಯ ಸಿ jತಿಗೆ ಪಾತ್ರಳಾದ, ಬಾಲಿಕಾಮಣಿಯು ಅವಳ ಬಳಿಯಲ್ಲಿ ನಿಂತುಕೊಳ್ಳಲು, ದಾದಿಯರೆಲ್ಲರೂ, ಸ್ವಲ್ಪ ದೂರದಲ್ಲಿ ನಿಂತುಕ ) ಡರು. ಆಗ ರಾಣಿಯು ನನ್ನನ್ನು ಬರುವಂತೆ ಆಜ್ಞೆ ಮಾಡಲು, ನಾನು ಆ ದಾಸೀಜನರ ಮಧ್ಯದ ದೂರಿಹೋಗಿ, ಸಿಂಹಾಸನದಮುಂದೆ ಅಡ್ಡ ಬಿದ್ದನು. ಆಗ ಆಕ ಏಳಯಾ ! ಏಳು ? ಹೆದರಬೇಡ, ನಿನ್ನ ಹೆಸರೇನು ? ಕುಲವಾವುದು ? ಜೀವನವೇತರಿಂದ ? ಎಂದು ಪ್ರಶ್ನೆ ಮಾಡಿದಳು. ನಾನು ಹೇಳಿದ ಉತ್ತರಗಳಿಂದ ಆಕೆಗೆ ತೃಪ್ತಿಯುಂಟಾದುದರಿಂದ, ಆಕ ನನ್ನ ಮುಖವನ್ನು ನೋಡಿ, ನೀನು ನನ್ನ ಆಶಿ ತಳಾದ ಈ ಬಾಲಿಕಾ ಮಣಿಗೆ ನೀನು, ಏತಿಪಾತ್ರನಾದವನೆ `ದು ಹೇಳುವುದನ್ನು ಕೇಳಿ, ನನಗೆ ತುಂಬ ಸಂತೋಷವಾಯಿತು. ನೀವಿಬ್ಬರೂ ವಿವಾಹ ಮಾಡಿಕೊಳ್ಳುವುದು, ನಿಮಗಿಷ್ಯವಾಗಿಯೇ ಇರುವುದು. ಇದಕ್ಕೆ ಪಥ್ಯ ಸಲಕರಣೆಗಳನ್ನು ಧನ ವನ್ನು ನಾನು ಸಹಾಯ ಮಾಡವನು. ಆದರೆ ವಿವಾಹವು ನಡೆವುದಕ್ಕಿಂತ ಮುಂಚೆ, ಈಕೆ ನನ್ನ ಬಳಿಯಲ್ಲಿ ಹತ್ತು ದಿನಗಳಿರಬೇಕು. ಬಳಿಕ ನಾನು